ಕಾರ್ಕಳ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ಭೇಟಿಯಾದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಶ್ರೀ ಶ್ರೀ ಶ್ರೀ ಪಣವಾನಂದ ಸ್ವಾಮೀಜಿ …. !

ಕಾರ್ಕಳ: ಕಾರ್ಕಳ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ರವರನ್ನು ಕಾರ್ಕಳದಲ್ಲಿ ಶ್ರೀಗಳು ಭೇಟಿಯಾಗಿ ಐತಿಹಾಸಿಕ ಪಾದಯಾತ್ರೆಯ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಆಹ್ವಾನವನ್ನು ನೀಡಿದರು , ಪಾದಯಾತ್ರೆ ನಡೆಯುವ ಸಂದರ್ಭ ದಲ್ಲಿ ದೊಡ್ಡ ಮಟ್ಟದ ಬಹಿರಂಗ ಸಭೆಯಲ್ಲಿ ಗಂಗಾವತಿ ನಗರದಲ್ಲಿ ಭಾಗವಹಿಸಲು ಶ್ರೀಗಳು ತಿಳಿಸಿದರು.


ಈಡಿಗ, ಬಿಲ್ಲವ, ನಾಮಧಾರಿ ಧೀವರ ಸೇರಿದಂತೆ 26 ಪಂಗಡಗಳ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗಾಗಿ 2026ರ ಜನವರಿ 6 ರಂದು ಶಕ್ತಿಪೀಠ ಕರದಾಳದಿಂದ ಬೆಂಗಳೂರು ತನಕ 41 ದಿನಗಳ 700 ಕಿಲೋ ಮೀಟರ್ ಉದ್ದದ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಕಾಪು , ಐತಿಹಾಸಿಕ ಪಾದಯಾತ್ರೆ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಜವಾಬ್ದಾರಿ ತೆಗೆದುಕೊಂಡಿರುವ ದಿವಾಕರ್ , ರಾಜ್ಯ ಕಾರ್ಯದರ್ಶಿಯಾದ ಜಯಕುಮಾರ್ , ಅನಿಲ್ ಕುಮಾರ್, ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷರಾದ ಪ್ರಭಾಕರ್ ಬಂಗೇರ , ದಿವಾಕರ್ ಪೂಜಾರಿ , ಜಯಕುಮಾರ್ ಪಾರ್ಕಳ ಮತ್ತು ಅನೇಕ ಮುಖಂಡರು ಶ್ರೀಗಳ ಜೊತೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!