ಮಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇದರ ವತಿಯಿಂದ, ಹಾಗೂ ಆರ್.ಜಿ.ಯು.ಎಚ್.ಎಸ್ ಆಡಳಿತದಡಿ ಬರುವ 113 ವೈದ್ಯಕೀಯ/ಅರೆವೈದ್ಯಕೀಯ ಸೇರಿದಂತೆ, ವಿವಿಧ ಕಾಲೇಜುಗಳ ಸಹಕಾರದಲ್ಲಿ “ನಶಮುಕ್ತ ಭಾರತ” “ನಶಮುಕ್ತ ಕ್ಯಾಂಪಸ್” ಘೋಷ ವಾಕ್ಯದಡಿ ಬೃಹತ್ ವಾಕಥಾನ್ ಮೆರವಣಿಗೆಯು ನವೆಂಬರ್ 29 ರಂದು ಬೆಳಗ್ಗೆ 7:00 ಗಂಟೆಗೆ ಮಂಗಳೂರಿನ ಮಂಗಳ ಕ್ರೀಡಾಂಗಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ನಡೆಯಲಿದೆ ಎಂದು ಆರ್.ಜಿ.ಯು.ಎಚ್.ಎಸ್ ಇದರ ಸದಸ್ಯರಾದ ಡಾ|ಯು.ಟಿ. ಇಫ್ತೀಕರ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವಾಕಥಾನ್ ಕಾರ್ಯಕ್ರಮದ ವೇಳೆ ಅಂಗಾಂಗ ದಾನ ಕುರಿತಂತೆ ಉತ್ತೇಜನ ನೀಡುವ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ವಯಂ ಪ್ರೇರಿತವಾಗಿ ದಾನ ಮಾಡಲು ಮುಂದೆ ಬರುವಂತೆ ಮಾಡಲು ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದರು .ಕಾರ್ಯಕ್ರಮಕ್ಕೆ ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಚಾಲನೆ ನೀಡಲಿರುವರು. ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ|ಶರಣಪ್ರಕಾಶ್ ಪಾಟೀಲ್ , ಆರ್.ಜಿ.ಯು.ಎಚ್.ಎಸ್ ಇದರ ವೈಸ್ ಚಾನ್ಸಲರ್ ಡಾ|ಭಗವಾನ್.ಬಿ.ಸಿ. ಸಹಿತ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಿತ ಶಿಕ್ಷಕರು, ಸಿಬ್ಬಂದಿಗಳು, ಆಡಳಿತ ಮಂಡಳಿಯ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಆರ್.ಜಿ.ಯು.ಎಚ್.ಎಸ್ ಸಿಂಡಿಕೇಟ್ ಸದಸ್ಯರಾದ ಡಾ|ಶಿವಶರಣ್ ಶೆಟ್ಟಿ , ಸೆನೆಟ್ ಸದಸ್ಯರಾದ ವೈಶಾಲಿ ಶ್ರೀಜಿತ್ ,ಕಾರ್ಯಕ್ರಮದ ಸಂಯೋಜಕರಾದ ಡಾ|ಶರಣ್.ಜೆ ಶೆಟ್ಟಿ , ಪಿಎ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ ಉಪಸ್ಥಿತರಿದ್ದರು
Roulette probabilities are fascinating, but strategy applies to card games too! It’s cool how solitaire offers so many variations – instant play is a big plus for quick mental exercises, right? Great article!