ಮಂಗಳೂರು : ಸ್ಕೂಟರಿನ ಚಕ್ರಕ್ಕೆ ಸೀರೆ ಸಿಲುಕಿ ಮಹಿಳೆ ಸ್ಕೂಟರಿನಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ಬಳಿ ಸಂಭವಿಸಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಕಾನಾ ಬಳಿ ಈ ಘಟನೆ ನಡೆದಿದೆ. ಸ್ಕೂಟರಿನಿಂದ ಮಹಿಳೆ ಬೀಳುವ ದೃಶ್ಯ ಹಿಂದೆ ಇದ್ದ ಬಸ್ಸಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಬಸ್ಸನ್ನು ನಿಲ್ಲಿಸಿ ಸ್ಕೂಟರಿನಿಂದ ಬಿದ್ದ ಮಹಿಳೆಯನ್ನ ಬಸ್ ಚಾಲಕ ಆಸ್ಪತ್ರೆಗೆ ಕೊಂಡೊಯ್ದರು.
ಮೊಯಿದೆ ಎಂಬವರು ಮಾನವೀಯತೆ ಮೆರೆದ ಬಸ್ಸಿನ ಚಾಲಕ.ಕಾನಾ ಬಳಿ ಮಗ ಮತ್ತು ಅಮ್ಮ ಸ್ಕೂಟರಿನಲ್ಲಿ ಹೋಗುವ ಸಂದರ್ಭ ಈ ಘಟನೆ ನಡೆದಿದೆ.