ಕ್ರೆಡೈ, ಸೆಕ್ಷನ್ ಇನ್ಸಿನ್- 8 ಫೌಂಡೇಶನ ಮತ್ತು ಮಿಷನ್ ಉತ್ತಾನ್ ಸಹಯೋಗದಲ್ಲಿ ‘ಕ್ರೆಡೈ ಬಿಲ್ಡ್‌ಸ್ಮಾರ್ಟ್‌ ಇನೋವೇಶನ್ ಚಾಲೆಂಜ್ 2025

ಮಂಗಳೂರು : ಮಂಗಳೂರಿನ ಕ್ರೆಡೈ, ಸೆಕ್ಷನ್ ಇನ್ಸಿನ್- 8 ಫೌಂಡೇಶನ ಮತ್ತು ಮಿಷನ್ ಉತ್ತಾನ್ ಸಹಯೋಗದಲ್ಲಿ ‘ಕ್ರೆಡೈ ಬಿಲ್ಡ್‌ಸ್ಮಾರ್ಟ್‌ ಇನೋವೇಶನ್ ಚಾಲೆಂಜ್ 2025ಗಾಗಿ ನವೋದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಂದ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಹೊಸ ಸ್ಟಾರ್ಟ್‌ ಅಪ್ ಹಾಗೂ ನವೀನ ಆಲೋಚನೆಗಳನ್ನು ಆಹ್ವಾನಿಸಲಾಗಿದೆ.

ನಗರದ ಪತ್ರಿಕಾಭವನದಲ್ಲಿ ಎಸ್‌ಐ-8ನ ಸಂಸ್ಥಾಪಕ ನಿರ್ದೇಶಕ ವಿಶ್ವಾಸ್ ಯು.ಎಸ್ ಈ ಬಗ್ಗೆ ಮಾಹಿತಿಯನ್ನು ನೀಡಿ ., ಈಗಾಗಲೇ ಸುಮಾರ 30ರಷ್ಟು ನವೋದ್ಯಮಿಗಳು ತಮ್ಮ ಹೊಸ ಸ್ಟಾರ್ಟ್‌ ಅಪ್‌ಗಳ ಕುರಿತಂತೆ ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದಾರೆ. ನ. 30ರವರೆಗೆ ಹೊಸ ಆಲೋಚನೆಗಳಿಂದ ಕೂಡಿದ ಹೊಸ ಉದ್ಯಮ, ಸ್ಟಾರ್ಟ್‌ ಅಪ್‌ಗಳ ಐಡಿಯಾ ಹೊಂದಿರುವ ವಿದ್ಯಾರ್ಥಿಗಳನ್ನು ಒಳಗೊಂಡು ಈ ಚಾಲೆಂಜ್‌ನಲ್ಲಿ ಭಾಗವಹಿಸಬಹುದು ಎಂದರು.

ಕ್ರೆಡೈ ಮಂಗಳೂರು ಮತ್ತು ಸೆಕ್ಷನ್ ಇನ್ಸಿನ್ 8 ಫೌಂಡೇಶನ್ (ಎಸ್‌ಐ-8) ಸಹಭಾಗಿತ್ವದ ಎಮರ್ಜ್ 2025- ಭಾರತ ಮೊದಲ ಸ್ಟಾರ್ಟ್‌ ಅಪ್ ಬೀಚ್ ಉತ್ಸವದಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ. ಇದು ಕರಾವಳಿ ಕರ್ನಾಟಕದ ಸ್ಟಾರ್ಟ್‌ ಅಪ್ ಮತ್ತು ಪರಿಸರ ಸಹ್ಯ ಉದ್ಯಮಕ್ಕೆ ಪ್ರೇರಣೆ ನೀಡಿದೆ. ಪ್ರಸಕ್ತ ಸಾಲಿನ ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025ಗೆ ಸಲ್ಲಿಕೆಯಾಗುವ ಸ್ಟಾರ್ಟ್‌ ಅಪ್‌ಗಳ ಪ್ರೊಟೋಟೈಪ್‌ಗಳು 2026ರ ಜನವರಿ 9ರಿಂದ 11ರವರೆಗೆ ತಣ್ಣೀರುಬಾವಿಯಲ್ಲಿ ನಡೆಯುವ ಎಮರ್ಜ್ 2026ರಲ್ಲಿ ಪ್ರದರ್ಶನಗೊಳ್ಳಲಿವೆ. ಆಯ್ದ ತಂಡಕ್ಕೆ 1 ಲಕ್ಷ ರೂ. ನಗದು ಬಹುಮಾನ, ಕ್ರೆಡೈ ಉದ್ಯಮ ನಾಯಕರಿಂದ ಮಾರ್ಗದರ್ಶನ, ಪೈಲಟ್ ಯೋಜನೆಗಳಿಗೆ ಅಕವಾಶ, ಎಸ್‌ಐ-8 ಮತ್ತು ಮಿಷನ್ ಉತ್ತಾನ್‌ನಿಂದ ಇಂಕ್ಯುಬೇಷನ್ ಬೆಂಬಲ, ಟಾಪ್ 10 ತಂಡಗಳಿಗೆ ಡಿಸೆಂಬರ್ ತಿಂಗಳಲ್ಲಿ ವೃತ್ತಿಪರ ಮಾರ್ಗದರ್ಶನ ದೊರೆಯಲಿದೆ ಎಂದು ತಿಳಿಸಿದರು .

ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೊಸ ಆಲೋಚನೆಗಳಿಗೆ ಬಲ ತುಂಬುವ ಜತೆಗೆ ವೇದಿಕೆ ಕಲ್ಪಿಸಲಾಗತ್ತದೆ ಹಾಗೂ ಸರಕಾರಗಳಿಂದ ನವೋದ್ಯಮಕ್ಕೆ ದೊರಕುವ ಅನುದಾನವನ್ನು ಒದಗಿಸಲು ಪ್ರಯತ್ನಿಸಲಾಗುವುದು.
ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025ನಲ್ಲಿ ಭಾಗವಹಿಸುವವರು ನಿರ್ಮಾಣ ತ್ಯಾಜ್ಯ ನಿರ್ವಹಣೆ, ಕ್ರೆಡೈ ಸದಸ್ಯ ಅಪ್ಲಿಕೇಶನ್, ರೇರಾ ಸಿಂಗಲ್ – ವಿಂಡೋ ಅನುಮೋದನಾ ವ್ಯವಸ್ಥೆ ಏಕೀಕೃತ ನಿರ್ಮಾಣ ಕಾರ್ಮಿಕ ವೇದಿಕೆ, ಮುಕ್ತ ನವೀನತಾ ಸವಾಲ್- ಹಸಿರು ಭವಿಷ್ಯ ನಿರ್ಮಾಣದ ವಿಷಯದಲ್ಲಿ ಹೊಸ ಆಲೋಚನೆಗಳನ್ನು ಪ್ರದರ್ಶಿಸಬಹುದಾಗಿದೆ. ಈ ಮೂಲಕ ರಿಯಲ್ ಎಸ್ಟೇಲ್ ವಲಯವನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಹಾಗೂ ಪರಿಸರ ಸ್ನೇಹಿಯಾಗಿಸಲು ಪರಿಹಾರಗಳನ್ನು ಕಂಡುಕೊಳ್ಳುವುದು ನಮ್ಮ ಉದ್ದೇಶ ಎಂದು ಪತ್ರಿಕಾಗೋಷ್ಠಿಯಲ್ಲಿ ಕ್ರೆಡೈ ಸಿಇಒ ಅರ್ಜುನ್ ಜೆ. ರಾವ್, ಕ್ರೆಡೈ ಯೂತ್ ವಿಂಗ್‌ನ ಕಾರ್ಯದರ್ಶಿ ಮಿರಾಜ್ ಯೂಸುಫ್ ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!