ಭಾರತದ ಕಾಂಗ್ರೇಸ್ ಪಕ್ಷ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಅಂತ್ಯ ಕ್ರಿಯೆಗೆ ದೆಹಲಿಯಲ್ಲಿ ಸ್ಥಳಾವಕಾಶ ನೀಡಿತ್ತೇ ….. ? : ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಆಡಳಿತ ಅಧಿಕಾರಗಳ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಬಿಜೆಪಿ ಮಂಗಳೂರು ನಗರದ ದಕ್ಷಿಣ ಮಂಡಲದ SC ಮೋರ್ಚಾ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವಪೂರ್ವಕ ಮಾಲಾರ್ಪಣೆ ಕಾರ್ಯಕ್ರಮ ನಡೆಯಿತು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ , ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಪರೂಪದ ಕೊಡುಗೆ ಸಂವಿಧಾನವಾಗಿದೆ . ಈ ಮಹಾಪರಿನಿರ್ವಾಣ ದಿನದಂದು ಅವರನ್ನು ನೆನೆಯುವುದು ಭಾರತೀಯ ನಾಗರಿಕರ ಕರ್ತವ್ಯವಾಗಿದೆ . ಅವರು ಕೇವಲ ದೀನ ಧಲಿತರಿಗಾಗಿ ಹೋರಾಟ ಮಾಡದೇ . ಇಡೀ ಪ್ರಪಂಚದಲ್ಲಿ ಹುಟ್ಟಿದ ಅಸಹಾಯಕರನ್ನು ಮುಖ್ಯ ವಾಹಿನಿಗೆ ತರಬೇಕೆನ್ನುವ ದೃಷ್ಟಿಯಿಂದ ಕೆಲಸ ಮಾಡಿದವರು . ಶಾಲೆಗೆ ಸೇರಲು ಕಷ್ಟ ಪಟ್ಟ ಅಂಬೇಡ್ಕರ್ ಅವರು ಇಂದು ಶಾಲೆಯ ಪಠ್ಯ ಪುಸ್ತಕದಲ್ಲಿ ಪಾಠವಾಗಿದ್ದರೆ ಅದುವೇ ಸಾಧನೆ ಎಂದರು.

ಅಂಬೇಡ್ಕರ್ ಅವರಿಗೆ ಬಿಜೆಪಿ ನಾಯಕರುಗಳು ಗೌರವವನ್ನು ತೋರಿದ್ದಾರೆ . ಕೇಂದ್ರದಲ್ಲಿ ಕಾಂಗ್ರೆಸೇತರ ಸರಕಾರದ ಅಧಿಕಾರದ ಅವಧಿಯಲ್ಲಿ ಭಾರತ ರತ್ನ ನೀಡಲಾಗಿತ್ತು . ಜೀವಂತ ಇರುವಾಗ ಅವರನ್ನು ಬೆಲೆ ಕೊಡದೆ ಇರುವವರು ಇಂದು ಸಂವಿಧಾನ ಕೃತಿಯನ್ನು ಹಿಡಿದು ದೇಶದ ರಕ್ಷಕರೆಂದು ಕರೆದುಕೊಳ್ಳುತ್ತಾರೆ ಎಂದರು.

೧೯೩೧ ರಲ್ಲಿ ಕಾಂಗ್ರೇಸ್ ಪಕ್ಷದವರು ಕಪ್ಪು ಬಾವುಟವನ್ನು ತೋರಿಸುವ ಮೂಲಕ ಅಂಬೇಡ್ಕರ್ ಅವರನ್ನು ನಿಂದನೆ ಮಾಡುತ್ತಾರೆ . ಅವರು ನಿಧನ ಹೊಂದಿದ್ದಾಗ ಕೂಡ ಅವರ ಅಂತ್ಯ ಕ್ರಿಯೆಗೆ ದೆಹಲಿಯಲ್ಲಿ ಸ್ಥಳಾವಾಕಾಶ ನೀಡದೆ ಮಹಾರಾಷ್ಟ್ರಕ್ಕೆ ಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕಾಗಿ ಬಂದಿತ್ತು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ , ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖೇನ ಅವರನ್ನು ನೆನಪಿಸುವ ಕಾರ್ಯವನ್ನು ನಾವು ಮಾಡಿದ್ದೇವೆ . ಅಂಬೇಡ್ಕರ್ ಅವರಿಗೆ 1990 ರಲ್ಲಿ ಭಾರತ ರತ್ನ ಪ್ರಶಸ್ತಿ ಕೊಟ್ಟಿತು . ಆದರೆ ಅವರ ಸಾಧನೆಯ ಅರಿವು ಈ ಹಿಂದೆಯೇ ಇದ್ದ ಕಾಂಗ್ರೆಸ್ ಸರಕಾರ ಅವರಿಗೆ ಯಾವುದೇ ರೀತಿಯ ಪ್ರಶಸ್ತಿ ನೀಡಲಿಲ್ಲ . ಅಂಬೇಡ್ಕರ್ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಅವರಿಗಾಗಿ ಏನೋ ಕೆಲಸ ಮಾಡಿಲ್ಲ . ಅಂಬೇಡ್ಕರ್ ಗೆ ಸಮಂಧಿಸಿದಂತೆ ಪಂಚ ತೀರ್ಥ ಅಭಿವೃದ್ಧಿಯನ್ನು ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು ಆದರೆ ಕಾಂಗ್ರೇಸ್ ಅಧಿಕಾರದ ಅವಧಿಯಲ್ಲಿ ಇವರಿಗೆ ಸಮಂಧಿಸಿದಂತೆ ಏನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಪ್ರಶ್ನೆ ಮಾಡಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ, ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕರಾದ ವಸಂತ ಪೂಜಾರಿ, ಸದಸ್ಯರಾದ ರಮೇಶ್ ಕಂಡೆಟು, ಲಲ್ಲೇಶ್ , ನಂದನ್ ಮಲ್ಯ, ಪ್ರೇಮಾನಂದ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!