ಬಂಟ್ವಾಳ: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಹದಿಹರೆಯದ ಯುವಕನೋರ್ವ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಳಿತಪಡ್ಪು ನಿವಾಸಿ ಇದಿನಬ್ಬ ಅವರ ಮಗ ಮಹಮ್ಮದ್ ರಾಝಿಮ್ ( 23) ಎಂಬಾತ ಕಾಣೆಯಾಗಿರುವ ಯುವಕನಾಗಿದ್ದಾನೆ.
ರಾಝಿಮ್ ಕಾರ್ಕಳದ ಕಂಪನಿಯ ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಪ್ರತಿದಿನ ಮನೆಗೆ ಬಂದು ಹೋಗುತ್ತಿದ್ದ. ಆದರೆ ಡಿ.5 ರಂದು ಮನೆಯಿಂದ ಕಾರ್ಕಳಕ್ಕೆ ಕೆಲಸಕ್ಕೆಂದು ಹೋದ ಈತ ಸಂಜೆ ಮನೆಗೆ ಬಾರದೆ ಕಾಣೆಯಾಗಿದ್ದಾನೆ. ಮೊಬೈಲ್ ಸ್ವಿಚ್ ಆಪ್ ಆಗಿದ್ದು, ಈತನ ಸುಳಿವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.