ಕಾಸರಗೋಡು: ಪಳ್ಳಿಕ್ಕೆರೆಯ ಕ್ಷೇತ್ರದಲ್ಲಿ ಉತ್ಸವದ ಸಂದರ್ಭ ದೈವದ ಹೊಡೆತದಿಂದ ಯುವಕನೊಬ್ಬ ಬೀಳುವ ದೃಶ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಎಬ್ಬಿಸಿದೆ.ನೀಲೇಶ್ವರ ಪಳ್ಳಿಕ್ಕೆರೆ ಪಾಲರೆಕೀಳಿಲ್ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ದೈವದರ್ಶನ ವೇಳೆ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ. ಎರಡು ದಿವಸಕ್ಕೆ ಮೊದಲಿನ ರಾತ್ರಿ ಪೂಮರುದನ್ ದೈವದ ವೆಳ್ಳಾಟ ನಡೆಯುತ್ತಿದ್ದಂತೆ ದೈವ ಹೊಡೆದಿರುವುದಾಗಿಯೂ ಈ ವೇಳೆ ಗಾಯಗೊಂಡು ವ್ಯಕ್ತಿ ನೆಲಕ್ಕೆ ಬೀಳುವ ದೃಶ್ಯ ಬಹಿರಂಗಗೊಂಡಿದೆ ಎನ್ನಲಾಗುತ್ತಿದೆ.
ನೀಲೇಶ್ವರ ನಿವಾಸಿ ಮನು ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಭಯಪಡಿಸುವ ಆಚಾರದ ಅಂಗವಾಗಿ ವೆಳ್ಳಾಟ ವೇಳೆ ದೈವ ವ್ಯಕ್ತಿಗಳ ಮೇಲೆ ಹಲ್ಲೆಗೈಯ್ಯುವ ಕ್ರಮವಿದೆಯೆಂದು ಹೇಳಲಾಗುತ್ತಿದೆ. ಹೀಗೆ ದೈವದಿಂದ ಹಲ್ಲೆಗೊಳ್ಳಲು ಭಕ್ತರು ಗುಂಪುಗೂಡಿ ನಿಲ್ಲುತ್ತಿದ್ದಾರೆ. ಹೀಗೆ ನಿಂತಿದ್ದಾಗ ದೈವದ ಹೊಡೆತದಿಂದ ಮನು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇದೇ ಸಂದರ್ಭ ದೃಶ್ಯ ವ್ಯಾಪಕವಾಗಿ ಹರಿದಾಡ ತೊಡಗುವುದರೊಂದಿಗೆ ದೈವ ಕಟ್ಟಿದ ವ್ಯಕ್ತಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದೆ.
What’s up, people? Been messing around on 33bet8 lately. The site’s easy to use, and they’ve got some cool promotions running. Definitely a good spot to check out if you’re looking for some action. More info on 33bet8!