ಅಂತ್ಯವಿಶ್ರಾಂತಿ ಹೊಂದಿರುವ ಪವಿತ್ರಾತ್ಮರಾದ ‘ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ (ರ.ಅ)’ ಅವರ ನಾಮದೇಯದಲ್ಲಿ ನಡೆಯುವ ಉದಯಾಸ್ತಮ ನ ಉರೂಸ್‌ಗೆ ದ್ವಜಾರೋಹಣ

ಮಂಜೇಶ್ವರ: ಉತ್ತರ ಕೇರಳದ ಅತ್ಯಂತ ಪ್ರಸಿದ್ಧವಾದ ಉದ್ಯಾವರ ಸಾವಿರ ಜಮಾಅತ್ ಆವರಣದಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಪವಿತ್ರಾತ್ಮರಾದ ‘ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ (ರ.ಅ)’ ಅವರ ನಾಮದೇಯದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉದಯಾಸ್ತಮ ನ ಉರೂಸ್‌ಗೆ ಡಿಸೆಂಬರ್ 19ರಂದು ದ್ವಜಾರೋಹಣ ನಡೆಯಿತು.

ಡಿಸೆಂಬರ್ 19ರಂದು (ಶುಕ್ರವಾರ) ಮಧ್ಯಾಹ್ನ ಜುಮಾ ನಮಾಜಿನ ನಂತರ, ಸಾವಿರಾರು ವಿಶ್ವಾಸಿಗಳ ಸಾನ್ನಿಧ್ಯದಲ್ಲಿ ದರ್ಗಾ ಶರೀಫ್ ಸಮಿತಿ ಅಧ್ಯಕ್ಷ ಹಾಗೂ ಉರೂಸ್ ಸಮಿತಿಯ ಮುಖ್ಯ ಸಲಹೆಗಾರ ಸಯ್ಯಿದ್ ಪೂಕ್ಕುಂನ್ನಿ ತಂಗಳ್ ಉದ್ಯಾವರ ಧ್ವಜಾರೋಹಣ ನೆರವೇರಿಸಿದರು.

ಡಿಸೆಂಬರ್ 25ರಂದು (ಗುರುವಾರ) ರಾತ್ರಿ 8:30ಕ್ಕೆ ಉರೂಸ್ ಸಮಿತಿಯ ಮುಖ್ಯ ರಕ್ಷಾಧಿಕಾರಿ ಸಯ್ಯಿದ್ ಅತಾವುಲ್ಲಾ ತಂಗಳ್ ಎಂ.ಎ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಭೆಯನ್ನು ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ, ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಅದೇ ದಿನ ನಡೆಯುವ ಪ್ರಾರ್ಥನ ಮಜ್ಲಿಸಿಗೆ ಬದರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಂಡಿ ತಂಗಳ್ ನೇತೃತ್ವ ನೀಡಲಿದ್ದು, ಪ್ರಮುಖ ಪ್ರಭಾಷಕ ಫಾರೂಕ್ ನಈಮಿ ಮದ್ ಹುರಸೂಲ್ ಪ್ರವಚನ ನೀಡಲಿದ್ದಾರೆ.ಎಂದು ಉರೂಸ್ ಸಮಿತಿ ಅಧ್ಯಕ್ಷ ಸಯ್ಯಿದ್ ಯು.ಕೆ. ಸೈಫುಲ್ಲಾ ತಂಗಳ್ ಅಲ್-ಬುಖಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉರೂಸ್ ಅಂಗವಾಗಿ ಡಿಸೆಂಬರ್ 25ರಿಂದ ಜನವರಿ 3ರವರೆಗೆ ನಡೆಯುವ ಧಾರ್ಮಿಕ ಸಮ್ಮೇಳನಗಳಲ್ಲಿ ಪ್ರಸಿದ್ದ ಸಾದಾತ್‌ಗಳು ಭಾಗವಹಿಸಲಿದ್ದಾರೆ.ಡಿಸೆಂಬರ್ 28ರಂದು ಬೆಳಿಗ್ಗೆ 9 ಗಂಟೆಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.ಜನವರಿ 3ರಂದು ಸಂಜೆ 3 ಗಂಟೆಗೆ ಆರಂಭವಾಗುವ ಮಾನವ ಸೌಹಾರ್ದ ಸಮಾವೇಶದಲ್ಲಿ ಪ್ರಮುಖ ಮಾನವ ಹಕ್ಕು ಕಾರ್ಯಕರ್ತರು, ವಾಗ್ಮಿಗಳು ಹಾಗೂ ಧಾರ್ಮಿಕ–ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.ಡಿಸೆಂಬರ್ 28ರ ರಾತ್ರಿ ಸಾವಿರಾರು ಭಕ್ತರು ಭಾಗವಹಿಸುವ ಝಿಕ್ರ್ ಮಜ್ಲಿಸಿಗೆ *ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಲ್ಲರಕಲ್ ತಂಗಳ್ ನೇತೃತ್ವ ನೀಡಲಿದ್ದಾರೆ. ಡಿಸೆಂಬರ್ 29ರ ರಾತ್ರಿ ನಡೆಯುವ ಗ್ರ್ಯಾಂಡ್ ಬುರ್ಡಾ ಮಜ್ಲಿಸಿಗೆ ಸಯ್ಯಿದ್ ತ್ವಾಹಾ ತಂಗಳ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ವ್ಯಕ್ತಿತ್ವಗಳು ಭಾಗವಹಿಸಲಿದ್ದಾರೆ.

ಜನವರಿ 3ರ ರಾತ್ರಿ 8:30ಕ್ಕೆ ನಡೆಯುವ ಸಮಾರೋಪ ಸಭೆಯನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಅಧ್ಯಕ್ಷರೂ ಹಾಗೂ ಸಾವಿರ ಜಮಾಅತ್ ಸಂಯುಕ್ತ ಖಾಜಿಯೂ ಆಗಿರುವ ಸಯ್ಯಿದುಲ್ ಉಲಮ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಉದ್ಘಾಟಿಸಲಿದ್ದಾರೆ. ಅದೇ ದಿನ ನಡೆಯುವ ಪ್ರಾರ್ಥನಾ ಮಜ್ಲಿಸಿಗೆ ಸಯ್ಯಿದ್ ಸುಹೈಲ್ ಸಖಾಫ್ ತಂಗಳ್ (ಮಡಕ್ಕರ) ನೇತೃತ್ವ ನೀಡಲಿದ್ದಾರೆ. ಕೇರಳದ ಅನುಗ್ರಹೀತಃ ಕುಮ್ಮನಂ ನಿಸಾಮುದ್ದೀನ್ ಅಝ್ಹರಿ* ಮುಖ್ಯ ಭಾಷಣ ಮಾಡಲಿದ್ದಾರೆ.

ಡಿಸೆಂಬರ್ 4ರಂದು ಬೆಳಿಗ್ಗೆ ಪ್ರಭಾತ ನಮಾಜಿನ ನಂತರದಿಂದ ಅಸ್ತಮಾನದವರೆಗೆ ಲಕ್ಷಾಂತರ ಭಕ್ತರಿಗೆ ಅನ್ನದಾನವನ್ನು ಆಯೋಜಿಸಲಾಗಿದೆ ಎಂದು ಉರೂಸ್ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳಾದ ಸಯ್ಯಿದ್ ಮುಹಮ್ಮದ್ ಅತಾವುಲ್ಲಾ ತಂಗಳು, ಇಬ್ರಾಹಿಂ ಬಟರ್ ಫ್ಲೈ, ಪಳ್ಳಿಕುಂಜಿ ಹಾಜಿ, ಇಬ್ರಾಹಿಂ ಫೈಝಿ, ಅಬ್ದುಲ್ ಕಾದರ್ ಫಾರೂಕ್,ಅಹ್ಮದ್ ಭಾವ ಹಾಜಿ ಇಬ್ರಾಹಿಂ ಉಮರ್ ಹಾಜಿ. ಅಲಿಕುಟ್ಟಿ ನೇಷನಲ್.ಹೊಸೂರ್ ರಹ್ಮಾನ್.ಮುಕ್ತಾರ್. ಎ ಶರೀಫ್. ಮೂಸ ಯುಕೆ, ಬಶೀರ್, ಕಾದರ್ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

One thought on “ಅಂತ್ಯವಿಶ್ರಾಂತಿ ಹೊಂದಿರುವ ಪವಿತ್ರಾತ್ಮರಾದ ‘ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ (ರ.ಅ)’ ಅವರ ನಾಮದೇಯದಲ್ಲಿ ನಡೆಯುವ ಉದಯಾಸ್ತಮ ನ ಉರೂಸ್‌ಗೆ ದ್ವಜಾರೋಹಣ

  1. Anyone here know anything about 8clb89? I’m always on the lookout for good sports betting sites, so if ya have any insights, please share! Check it out here: 8clb89, sharing is caring!

    Loading spinner

Leave a Reply

Your email address will not be published. Required fields are marked *

error: Content is protected !!