ಸುರತ್ಕಲ್ : ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದೇಶ ಭಾಷಣ ವಿರೋಧಿ ಮಸೂದೆಯನ್ನು ವಿಪಕ್ಷಗಳ
ಹಾಗೂ ಪತ್ರಕರ್ತರ ಧ್ವನಿಯನ್ನು ಅಡಗಿಸಲು ತರುತ್ತಿದೆ. ಕಾಂಗ್ರೆಸ್ ಪಕ್ಷದ ತಪ್ಪುಗಳನ್ನು ಎತ್ತಿ ತೋರಿಸುವವರ ಮೇಲೆಯೂ ಈ ಅಸ್ತ್ರವನ್ನು ಬಳಸಲು ಮುಂದಾಗಿದ್ದಾರೆ. ಸದನದಲ್ಲಿ ಚರ್ಚೆಗೆ ಅವಕಾಶ ನೀಡದೆ ಏಕಾಏಕಿ ಅನುಮೋದನೆ ನೀಡಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅಕ್ರೋಶ ಹೊರ ಹಾಕಿದ್ದಾರೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ದ್ವೇಷ ಭಾಷಣ ವಿರೋಧಿ ಮಸೂದೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶ ಭಾಷಣ ಮಸೂದೆ ಕರಾಳ ಮುಖವನ್ನು ಹೊಂದಿದ್ದು ಸಾಮಾಜಿಕ ಜಾಲತಾಣ ಸೇರಿದಂತೆ, ಪತ್ರಕರ್ತರು, ದೇಶಭಕ್ತಿಯ ಘೋಷಣೆ ಮೊಳಗಿಸುವವರನ್ನು ಹಿಂದೂ ಧರ್ಮದ ದೇವರ ಹೆಸರನ್ನು ಘೋಷಣೆ ಮಾಡುವವರನ್ನು ಕೂಡ ಬಿಡದೆ ಕೇಸು ದಾಖಲಿಸಿ ನೇರವಾಗಿ ಜೈಲಿಗೆ ಕಟ್ಟುವ ಅಧಿಕಾರವನ್ನು ಪೊಲೀಸರಿಗೆ ಕೊಡಲಾಗಿದೆ.
ಯಾವುದೇ ಪ್ರತಿಭಟನೆಗೆ, ಇಂದು ಧಾರ್ಮಿಕ ಕಾರ್ಯಕ್ರಮಗಳಿಗೆ ಬರುವ ಪ್ರಮುಖ ದಿಕ್ಕೂಚಿ ಭಾಷಣಗಾರರನ್ನು ಕಾರ್ಯಕ್ರಮ ನಡೆಯುವ ಮುನ್ನವೇ ಪೊಲೀಸರು ಕೇಸು ದಾಖಲಿಸಿ ಬಾರದಂತೆ ತಡೆಯಲು ಸ್ವಾತಂತ್ರ ನೀಡಲಾಗಿದೆ. ಇದೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಒಂದು ವರ್ಗವನ್ನು ಸಂತುಷ್ಟಗೊಳಿಸುವ ಕಾಯಿದೆಯಾಗಿದ್ದು ಇದನ್ನು ಬಿಜೆಪಿ ಪಕ್ಷ ವಿರೋಧಿಸುತ್ತಲೇ ಬರುತ್ತದೆ ಎಂದು ಘೋಷಿಸಿದರಲ್ಲದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಈ ಕಾಯ್ದೆ ಬಳಕೆಯಾದರೆ ಅವರ ಜೊತೆಯಾಗಿ ನಿಲ್ಲುತ್ತೇವೆ ಎಂದು ಘೋಷಿಸಿದರು. ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ದಿನಕರ್ ಇಡ್ಯಾ, ಸುನಿಲ್ ಕುಳಾಯಿ,ನಿಕಟ ಪೂರ್ವ ಜನಪ್ರತಿನಿದಿಗಳು ಬಿಜೆಪಿ ಅನನ್ಯ ಜವಾಬ್ದಾರಿಯುತ ಪದಾಧಿಕಾರಿಗಳು, ಕಾರ್ಯಕರ್ತರು, ಮತ್ತು ಸಾರ್ವಜನಿಕರೂ ಉಪಸ್ಥಿತರಿದ್ದರು. ಪುಷ್ಪರಾಜ್ ಮುಕ್ಕಕಾರ್ಯಕ್ರಮ ನಿರೂಪಿಸಿದರು.
Gamebet2 is pretty basic, but sometimes that’s what you want. Simple, easy to navigate. Got a few go-to games there now. Give it a try if you are after something straightforward! Link here: gamebet2