ಮಂಗಳೂರು: ಬೆಂಗಳೂರಿನಲ್ಲಿ ‘ಕರಾವಳಿ ಜಾನಪದ ವೈಭವ’ ಏ.24ರಿಂದ

ಮಂಗಳೂರು: ಕರಾವಳಿ ಪ್ರದೇಶದ ಕಲಾ ಜಗತ್ತಿನ ಸಾಕ್ಷಾತ್ಕಾರ ಮಾಡುವ ಉದ್ದೇಶದಿಂದ ವೈಟ್ ಲೊಟಸ್ ಪೌಂಡೇಶನ್ ಟ್ರಸ್ಟ್ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಬಂಟ್ವಾಳ ತಾಲೂಕು ಘಟಕದ ಸಹಯೋಗದೊಂದಿಗೆ ಏಪ್ರಿಲ್ 24 ರಿಂದ 26 ರವರೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮೈದಾನ ಬಸವೇಶ್ವರ ನಗರ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತು ಇದರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ನಮ್ಮ ನಾಡಿನ ಜಾನಪದ ಪರಂಪರೆ ಶ್ರೇಷ್ಠವಾದುದು. ಜನಪದ ಭೌತಿಕ ವಸ್ತುಗಳು, ಜನಪದ ಹಾಡುಗಳು, ನೃತ್ಯಗಳು, ಗಾದೆಗಳು, ಒಗಟುಗಳು, ಕರಕುಶಲ ಕಲೆಗಳು ಇತ್ಯಾದಿ ಜಾನಪದ ಪ್ರಕಾರಗಳು ಜಾನಪದರ ಬದುಕು ಮತ್ತು ಸಂಸ್ಕೃತಿಯನ್ನು ಜೀವಂತವಾಗಿಸಬಲ್ಲ ಶ್ರೇಷ್ಠವಾದ ಸಂಪತ್ತಾಗಿದೆ. ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಜಾನಪದ ಪರಂಪರೆಯ ನೆಲೆಗಟ್ಟನ್ನು ಗಟ್ಟಿಗೊಳಿಸುತ್ತಾ ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾಳಜಿ ಇದೆ ಎಂದರು .

ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿ, ಶೈಕ್ಷಣಿಕ, ಧಾರ್ಮಿಕ, ಕ್ರೀಡೆ, ತಾಂತ್ರಿಕತೆ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವಕ್ಕೆ ಮಾದರಿಯಾಗಿ ಗುರುತಿಸಲ್ಪಟ್ಟ ರಾಜ್ಯ. ಅದರಲ್ಲೂ ನಮ್ಮ ಪ್ರತೀ ಜಿಲ್ಲೆಗಳು ಆದರದ್ದೇ ಆದ ವಿಶೇಷತೆಗಳನ್ನು ಹೊಂದಿದೆ ಎಂದರು .

ಕರಾವಳಿ ಜಿಲ್ಲೆಗಳ, ಸಂಸ್ಕೃತಿ, ಜನಪದ ಕಲೆ, ಯಕ್ಷಗಾನ, ಆರಾಧನೆ, ಹುಲಿ ಕುಣಿತ, ಆಹಾರ ಮೇಳ, ಆಚಾರ ವಿಚಾರ, ತುಳು ಪಾಡ್ಡನ ಜನಪದ ನಲಿಕೆ, ತುಳು ಜನಪದ ಭಾಷೆ ಒಟ್ಟಾರೆಯಾಗಿ ಕರಾವಳಿ ಸೌಂದರ್ಯದ ಚಿತ್ರಣವನ್ನು ನಮ್ಮ ರಾಜಧಾನಿ ಬೆಂಗಳೂರಲ್ಲಿ ಕರಾವಳಿ ಜಾನಪದ ವೈಭವ ಎಂಬ ಶೀರ್ಷಿಕೆಯಡಿಯಲ್ಲಿ ಉಣಬಡಿಸಲು, ಪ್ರದರ್ಶಿಸಲು ಕರಾವಳಿಯ ಸಾಂಸ್ಕೃತಿಕ, ಜನಪದೀಯ, ಮನರಂಜನೆಯ, ಕರಾವಳಿ ಖಾದ್ಯಗಳ, ಕರಾವಳಿ ಆಟ/ಕ್ರೀಡೆ, ಹುಲಿ ವೇಷ, ಯಕ್ಷಗಾನ, ನಾಟಕಗಳ ಹಾಗೂ ಕರಾವಳಿ ವಸ್ತು ಪ್ರದರ್ಶನ ಮಳಿಗೆಗಳ ಕಲಾ ಮೇಳ ಮತ್ತು ಕಾರ್ಯಾಗಾರಗಳು ವಿಶೇಷ ತಂಡಗಳು ಸಿದ್ಧರಾಗುತ್ತಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ವೈಟ್ ಲೊಟಸ್ ಪೌಂಡೇಷನ್ ಇದರ ಅಧ್ಯಕ್ಷರಾದ ಪ್ರಮೀಳಾ ಸಾಯಿ ಪ್ರಿಯ , ಕಾನೂನು ಸಲಹೆಗಾರರಾದ ವಕೀಲರಾದ ಸಂದೀಪ್ ಶೆಟ್ಟಿ, ದ.ಕ. ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಇದರ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ , ಧಾರ್ಮಿಕ ಚಿಂತಕರಾದ ಪ್ರವೀಣ್ ಕಂದಾವರ ಉಪಸ್ಥಿರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!