ಬಾಡಿಗೆ ಬದುಕು…….. !!!

ಬದುಕ್ಕೆನ್ನುವುದು ಹುಟ್ಟು ಸಾವಿನ ನಡುವೆ ಬರುವ ಒಂದು ಅಮೂಲ್ಯವಾದ ಕ್ಷಣವಾಗಿದೆ. ಇಲ್ಲಿ ಧರ್ಮ ಅಧರ್ಮದ ಲೆಕ್ಕಾಚಾರದಲ್ಲಿ ಕರ್ಮಫಲವು ಪ್ರಾಪ್ತಿಯಾಗುವುದು. ಎಷ್ಟೋ ಮಂದಿ ಚಿರಂಜೀವಿ ಎನ್ನುವ ಯೋಚನೆಯಲ್ಲಿ ಬದುಕುತ್ತಾರೆ. ಧನ ಕನಕ ವಜ್ರ ವೈಡೂರ್ಯ ಆಸ್ತಿಯ ಮೇಲೆ ಅತಿಯಾದ ವ್ಯಮೋಹ, ವಸ್ತುವಿನ ಮೇಲೆ ಅತಿಯಾದ ಬಯಕೆ, ಅಧಿಕಾರದ ದುರಂಹಕಾರ ಇರುತ್ತದೆ. ಅವರು ಅದನ್ನು ಅನುಭವಿಸುವ ಹೊತ್ತಿನಲ್ಲಿ ನಾನು ಶಾಶ್ವತ ಅದು ಶಾಶ್ವತ ಎನ್ನುವಷ್ಟರ ಮಟ್ಟಿಗೆ ಅದರಲ್ಲಿ ಲೀನರಾಗ ಹೋಗುತ್ತಾರೆ. ತನ್ನ ಪಕ್ಕದ ಮನೆಯಲ್ಲಿ ಸಾವಾಗಿದ್ರು ಕೂಡ ತನ್ನನ್ನು ಸಾವು ಆಲಿಂಗಿಸದ್ದು ಎನ್ನುವ ಭ್ರಮೆ ಆವರಿಸಿಕೊಂಡಿರುತ್ತದೆ . ಈ ಭ್ರಮೆ ಬದುಕೇ ಆತನ ನಡತೆಯನ್ನು ಅಳೆಯುತ್ತಲೇ ಇರುತ್ತದೆ.

ಈ ದೇಹ ಎನ್ನುವುದು ಬಾಡಿಗೆ ಮನೆ ಇದ್ದ ಹಾಗೆ ದೇಹದಿಂದ ಆತ್ಮವೂ ದೂರಾದ ಮೇಲೆ ಮನೆ ಖಾಲಿಯಾಗಿ ಮಸಣ ಸೇರುತ್ತದೆ. ಈ ಬಾಡಿಗೆ ಮನೆಯನ್ನು ಶಾಶ್ವತವೆಂದು ತಿಳಿದು ಕೆಲವರು ಎಲ್ಲವನ್ನು ಎಲ್ಲವೂ ಮರೆತುಬಿಡುತ್ತಾರೆ.

ಗಳಿಸುವುದು ತಪ್ಪಲ್ಲ ,ಗಳಿಸಿದ ಸಂಪತ್ತಿನ ಒಂದಿಷ್ಟನ್ನು ದಾನ ಮಾಡುವುದು ನಿಜವಾದ ಸಾರ್ಥಕ ಜೀವನಕ್ಕೆ ಮುನ್ನುಡಿಯನ್ನು ಬರೆಯುವಂತದ್ದು.
ಈ ಬಾಡಿಗೆ ಮನೆಯು ಯಾವಾಗ ಬೇಕಾದರೂ ಖಾಲಿಯಾಗ ಬಹುದು . ಆ ಬಗ್ಗೆ ಕನಿಷ್ಠ ಜ್ಞಾನ ಕೂಡ ನಮ್ಮಲ್ಲಿ ಇರುವುದು ವಿರಳವೇ ಸರಿ.

ಉಸಿರಾಡುವಾಗ ಸಾಧ್ಯವಾದಷ್ಟು ಸಹಾಯ ಮಾಡಿ, ನಾವು ಈ ಭೂಮಿಯಲ್ಲಿ ಶಾಶ್ವತವಾಗದೇ ಇರಬಹುದು ಆದರೆ ನಮ್ಮ ಕಾಯಕ, ನಾವು ಮಾಡಿದ ಸೇವೆ ಅದು ಎಂದೆಂದೂ ಶಾಶ್ವತ.
ಒಳ್ಳೆಯ ಕೆಲಸಗಳಿಗೆ ಒಳ್ಳೆಯ ಕರ್ಮಫಲ, ಕೆಟ್ಟ ಕೆಲಸಗಳಿಗೆ ಕೆಟ್ಟ ಕರ್ಮಫಲ. ಯಾರನ್ನು ಯಾವುದನ್ನು ಬಿಡದ ಫಲವೇ ಈ ಕರ್ಮಫಲ . ಇದು ಬದುಕಿನ ಮಾಪನ. ಇಲ್ಲಿ ನಿಮ್ಮ ಫಲದ ಆಯ್ಕೆ ನಿಮಗೆ ಬಿಟ್ಟಿದ್ದು. ಬದುಕೆನ್ನುವ ಪಯಣದಲ್ಲಿ ಆಸೆ ,ದುಃಖ, ಅನಾರೋಗ್ಯ, ಅರೋಗ್ಯ ಎನ್ನುವ ನಾನಾ ನಿಲ್ದಾಣಗಳ ಕೊನೆಗೆ ಬರುವುದೇ ಸಾವು. ಹಾಗಾಗಿ ಸಾವನ್ನು ಬದುಕಿನ ಕೊನೆಯ ನಿಲ್ದಾಣವೆಂದು ಸತ್ಯವಾಗಿರುವುದು.

✍🏻✍🏻ಗಿರೀಶ್ ಪಿಎಂ
ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!