ಹೊಸ ವರ್ಷದ ಮೊದಲ ಯುಗಾದಿ  

ಭಾರತದ ವಿವಿಧ ಕಡೆಗಳಲ್ಲಿ ಈ ದಿನ ಹೊಸ ವರ್ಷವನ್ನಾಗಿ ಯುಗಾದಿಯನ್ನು ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆ ಎಂದರೆ  ಬೇವು ಬೆಲ್ಲದ ಸವಿಯ ತಿಂದು ಜೀವನದಲ್ಲಿ ಬರುವಂತಹ ಸಿಹಿ ಕಹಿ ಘಟನೆಗಳನ್ನು ಸಮನಾಗಿ ಸ್ವೀಕರಿಸಬೇಕು  ಅವುಗಳನ್ನು ಸಮನಾಗಿ ಅನುಭವಿಸಬೇಕು ಎನ್ನುವ ತಾತ್ವಿಕ ಅವಕಾಶಗಳು ಅದರಲ್ಲಿ ಅಡಕವಾಗಿರುವುದು ವಿಶೇಷ.  

ಪ್ರತಿಯೊಬ್ಬರ ಮನೆಯಲ್ಲಿ ಹೆಣ್ಣು ಮಕ್ಕಳು ಮುಂಜಾನೆ ಎದ್ದು, ಮನೆಯ ಅಂಗಳವನ್ನು ಸ್ವಚಮಾಡಿ, ರಂಗು ರಂಗಿನ ರಂಗೋಲಿಯನ್ನು  ಮನೆ ಮುಂದೆ ಬಿಡಿಸಿ,  ಮಾವಿನ ಎಲೆಯ ಜೊತೆಗೆ ಬೇವಿನ ಎಲೆಯ ತೋರಣವನ್ನು ಬಾಗಿಲಿಗೆ ಕಟ್ಟಿ ಸಂಭ್ರಮ ಪಡುತ್ತಾರೆ.  ಈ ದಿನ ಮನೆಯಲ್ಲಿ ಹಬ್ಬದ ವಾತಾವರಣ ತುಂಬಿರುತ್ತದೆ  ಹಬ್ಬದಂದು  ಹೊಸ ಬಟ್ಟೆಯನ್ನು ಧರಿಸಿ  ಎಲ್ಲರು   ಒಂದು ಗೂಡಿ  ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ.

ಈ ಹಬ್ಬದಲ್ಲಿ ಅಡುಗೆ ಸಿದ್ಧ ಪಡಿಸುವುದೇ ಗಮತ್ತು.   ಹೆಣ್ಣುಮಕ್ಕಳು ಎಲ್ಲರು ಅಡುಗೆ  ಮನೆಯಲ್ಲಿ  ಕುಳಿತು ಪಿಸು ಪಿಸು ಮಾತನಾಡುತ್ತ   ಯುಗಾದಿ ಹಬ್ಬದ ವಿಶೇಷತೆ  ಕಾಯಿ ಹೋಳಿಗೆ  ಜೊತೆಗೆ ಮಕ್ಕಳ ಇಷ್ಟವಾಗುವ ಸಿಹಿ ತಿನಿಸುಗನ್ನು  ಮಾಡುತ ಜೊತೆಯಾಗಿ ಕುಳಿತು ಬಾಳೆ ಎಲೆಯಲ್ಲಿ  ಹೋಳಿಗೆ ಜೊತೆಗೆ ತುಪ್ಪದ ಊಟ ಮಾಡುತ್ತಾ ಹಬ್ಬವನ್ನು ಕಳೆಯುತ್ತಾರೆ.

 ಹಬ್ಬದ ವಾತಾವರಣ ಕ್ಷಣಗಳು ತುಂಬಿದ ಭಾವನೆಗಳನ್ನು ಹರಿಸುತ್ತದೆ.
ಚಿಕ್ಕ ಚಿಕ್ಕ ಮಕ್ಕಳು ಮನೆ ತುಂಬಾ ಓಡಾಡುತ್ತ  ಅಜ್ಜ ಅಜ್ಜಿಯ ಜೊತೆ   ಕಳಿಯುವ ಅಮೂಲ್ಯವಾದ  ಕ್ಷಣಗಳು , ಅಪ್ಪ ಅಮ್ಮನ ಜೊತೆಯಾಗಿ ಕಳೆಯುವ ನೆನಪುಗಳು ಸುಂದರ.

ಎಷ್ಟೋ ಜನರು ಕೆಲಸದ ಒತ್ತಡದಿಂದ  ತಮ್ಮ ಕುಟುಂಬದ ಜೊತೆಗೆ ಕಳಿಯಬೇಕಾದಂತ ಅಮೂಲ್ಯ ಕ್ಷಣಗಳು ಸಿಗುವುದು ಈ ಹಬ್ಬದಂದು . ಹಾಗಾಗಿ ಎಲ್ಲರೂ ಸಂಭ್ರಮದಿಂದ ಕಳೆಯಿರಿ.

ಬರಹ: ಆಶಾ  ಎ ಆರ್
ತೃತೀಯ ಬಿ ಎ
ವಿವಿ ಮಂಗಳೂರು

SHARE
Loading spinner

Leave a Reply

Your email address will not be published. Required fields are marked *

error: Content is protected !!