ಕರ್ನಾಟಕ ಸೇರಿದಂತೆ ಭಾರತದ ಅಗ್ರಗಣ್ಯ ಪ್ರದೇಶಗಳಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತಾಯಿ ಗೌರಿ ಮತ್ತು ಪುತ್ರ ಗಣೇಶನ ಆರಾಧನೆಗೆ ಸಮರ್ಪಿತವಾದ ಈ ಹಬ್ಬವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೌಟುಂಬಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ.
ಗೌರಿ ದೇವಿಯನ್ನು ಸೌಭಾಗ್ಯ, ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯ ಸಂಕೇತವಾಗಿ ಪೂಜಿಸಲಾಗುತ್ತದೆ. ಗಣೇಶನನ್ನು ಜ್ಞಾನ, ಬುದ್ಧಿವಂತಿಕೆ ಹಾಗೂ ವಿಘ್ನನಿವಾರಕನಾಗಿ ಆರಾಧಿಸಲಾಗುತ್ತದೆ. ಜೀವನದಲ್ಲಿರುವ ಎಲ್ಲ ಅಡೆತಡೆಗಳು ದೂರವಾಗಿ ಸುಖ, ಶಾಂತಿ ಮತ್ತು ಸಮೃದ್ಧಿ ದೊರೆಯಲಿ ಎಂಬುದು ಈ ಹಬ್ಬದ ಪ್ರಮುಖ ಆಶಯವಾಗಿದೆ.

ಗೌರಿ ಹಬ್ಬದಂದು ಮನೆಗಳಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ, ವಿವಿಧ ಬಗೆಯ ಸಿಹಿತಿಂಡಿಗಳನ್ನು ತಯಾರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮನೆಗೆ ಬಂದ ಹೆಣ್ಣುಮಕ್ಕಳಿಗೆ ಬಾಗೀನ ನೀಡುವುದು ಗೌರಿ ಹಬ್ಬದ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ.
ಬಾಗೀನ ನೀಡುವ ಮೂಲಕ ಗೌರಿ ದೇವಿಯ ಆಶೀರ್ವಾದದಿಂದ ಸೌಭಾಗ್ಯ, ಆರೋಗ್ಯ, ಸಂತೋಷ ಹಾಗೂ ಸಮೃದ್ಧಿ ದೊರೆಯಲಿ ಎಂಬ ಶುಭ ಹಾರೈಕೆಯನ್ನು ವ್ಯಕ್ತಪಡಿಸಲಾಗುತ್ತದೆ. ಈ ಸಂಪ್ರದಾಯವು ಕುಟುಂಬದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶೇಷ ಆಚರಣೆಯಾಗಿದೆ.

ಗೌರಿ ಹಬ್ಬದ ಬಳಿಕ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಗಣೇಶನ ಮೂರ್ತಿಯನ್ನು ಮನೆಗೆ ತಂದು ಭಕ್ತಿಯಿಂದ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಗರಿಕೆ, ಹೂವು, ಮೋದಕ, ಕಡುಬು ಸೇರಿದಂತೆ ವಿವಿಧ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ.
ಗೌರಿ ಗಣೇಶ ಹಬ್ಬವು ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಸ್ನೇಹಿತರು ಒಟ್ಟಾಗಿ ಸೇರಿ ಸಂತೋಷವನ್ನು ಹಂಚಿಕೊಳ್ಳುವ ಸುಂದರ ಸಂದರ್ಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ನಮ್ಮ ಸಂಪ್ರದಾಯ, ಸಂಸ್ಕೃತಿ ಹಾಗೂ ಕುಟುಂಬದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವವೂ ಈ ಆಚರಣೆಯಲ್ಲಿದೆ.

ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಪರಿಸರದ ಬಗ್ಗೆಯೂ ನಾವು ಕಾಳಜಿ ವಹಿಸಬೇಕು. ಪರಿಸರಕ್ಕೆ ಹಾನಿಯಾಗದ ವಸ್ತುಗಳಿಂದ ತಯಾರಿಸಿದ ಗಣೇಶನ ಮೂರ್ತಿಗಳನ್ನು ಬಳಸುವುದು ಹಾಗೂ ಸೂಕ್ತ ರೀತಿಯಲ್ಲಿ ವಿಸರ್ಜನೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಒಟ್ಟಿನಲ್ಲಿ ಗೌರಿ ಗಣೇಶ ಹಬ್ಬವು ನಮ್ಮ ಬದುಕಿನಲ್ಲಿರುವ ವಿಘ್ನಗಳು ದೂರವಾಗಿ, ಜ್ಞಾನ, ಯಶಸ್ಸು, ಆರೋಗ್ಯ, ಸಂತೋಷ ಹಾಗೂ ಸಮೃದ್ಧಿ ದೊರೆಯಲಿ ಎಂಬ ಶುಭ ಸಂದೇಶವನ್ನು ಸಾರುತ್ತದೆ. ಗೌರಿ ತಾಯಿಯ ಆಶೀರ್ವಾದ ಹಾಗೂ ಗಣೇಶನ ಕೃಪೆ ಎಲ್ಲರ ಜೀವನದಲ್ಲೂ ಸದಾ ಇರಲಿ ಎಂಬುದೇ ಈ ಪವಿತ್ರ ಹಬ್ಬದ ಹಾರೈಕೆ.

– ಆಶಾ ಎ.ಆರ್., ಹಾಸನ



Straight to the point and no nonsense. The registration was fast and I was playing in minutes. I really appreciate the efficiency of vnnohu001