Avatar

NAMMA MEDIA 24X7

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ: ಉಪಚುನಾವಣೆಯಲ್ಲಿ ಸೋಲಿಸಲು ಕರೆ – ಮಂಜುನಾಥ್ ಭಂಡಾರಿ

ಬಾಗಲಕೋಟೆ/ದಾವಣಗೆರೆ:ರಾಜ್ಯದಲ್ಲಿ ನಡೆಯಲಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಂತೆ ಕರೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್‌ಪಿಜಿ ಗ್ಯಾಸ್ ಕೊರತೆಯಿಂದ ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಟೋ ಚಾಲಕರಿಗೂ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅವರು ಆರೋಪಿಸಿದರು. “ಬಿಜೆಪಿ ಕಾರ್ಯಕರ್ತರೂ ಸಹ ಈ ಬೆಲೆ ಏರಿಕೆಯಿಂದ…

Read More

ಉರ್ವಮಾರ್ಕೆಟ್ ಉಪಕೇಂದ್ರದಲ್ಲಿ ನಿರ್ವಹಣೆ: ಇಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಮಂಗಳೂರು:ನಗರದ 33/11 ಕೆವಿ ಉರ್ವಮಾರ್ಕೆಟ್ ಜಿಐಎಸ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಇಂದು (07.04.2026) ಬೆಳಿಗ್ಗೆ 10.00 ರಿಂದ ಸಂಜೆ 5.30ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಡೊಮಿನಿಕ್ ಚರ್ಚ್ ಮತ್ತು ಹೊಯಿಗೆಬೈಲ್ ಫೀಡರ್ ವ್ಯಾಪ್ತಿಯಲ್ಲಿ:ಲೈನ್ ನಿರ್ವಹಣೆ, ಟ್ರೀ ಕಟಿಂಗ್ ಹಾಗೂ ತುರ್ತು ಕಾಮಗಾರಿಗಳ ಕಾರಣ ಗೋಕುಲ್ ಹಾಲ್, ಅಶೋಕನಗರ, ಆಂಟೋನಿ ಕಾಲೋನಿ, ಗೋಲ್ಡನ್ ಎಂಪಾಯರ್ ರೋಡ್, ಕುಕ್ಕಾಡಿ, ಬಾಪೂಜಿನಗರ, ಸುಂಕದಕಟ್ಟೆ, ರಘು ಬಿಲ್ಡಿಂಗ್, ಕೋಡಿಕಲ್ ಕಟ್ಟೆ, ಶಾಂತಿ ಲೇನ್, ಎಸ್.ಎನ್.ಡಿ.ಪಿ, ಕಂಚಿಗಾರ ಗುತ್ತು, ನಾಗಬ್ರಹ್ಮ…

Read More

ಬಲ್ಮಠ ಮಹಿಳಾ ಕಾಲೇಜಿನಲ್ಲಿ 118ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಯಶಸ್ವಿ

118ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಅಮೃತ ಪ್ರಕಾಶ ಪತ್ರಿಕೆ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಜಂಟಿ ಆಶ್ರಯದಲ್ಲಿ 118ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಏಪ್ರಿಲ್ 6 ರಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೋಪಾಲಕೃಷ್ಣ .ಕೆ .ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ಎಸ್ .ವಿ .ಎಸ್ .ಟೆಂಪಲ್ ಪದವಿ ಪೂರ್ವ ಕಾಲೇಜು ಬಂಟ್ವಾಳ ಪ್ರಾಂಶುಪಾಲರಾದ ಕೆ.ಎನ್ .ಗಂಗಾಧರ ಆಳ್ವ…

Read More

ಪುತ್ತೂರು–ಸುಳ್ಯ ಹೆದ್ದಾರಿಯಲ್ಲಿ ಪಿಕಪ್ ಅಪಘಾತ: ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ

ಪುತ್ತೂರು (ದಕ್ಷಿಣ ಕನ್ನಡ):ಪುತ್ತೂರು–ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಪ್ರದೇಶದಲ್ಲಿ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಲೈಟಿಂಗ್ಸ್ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಮೋರಿಗೆ ಡಿಕ್ಕಿ ಹೊಡೆದು ಜಖಂಗೊಂಡ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ವಾಹನಕ್ಕೆ ಭಾರೀ ಹಾನಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಈ ಪಿಕಪ್ ಸುಳ್ಯ ಮರ್ಕಂಜದ ಲೈಟಿಂಗ್ಸ್ ಅಂಗಡಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಹೆಚ್ಚಿನ…

Read More

ಕೊಕ್ಕಡ ಸಮೀಪ ಸರ್ಕಾರಿ ಬಸ್–ಕಾರಿನ ಮುಖಾಮುಖಿ ಡಿಕ್ಕಿ — ಮಹಿಳೆಗೆ ಗಾಯ

ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ ಹಾಗೂ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿನ ನಡುವೆ ಕಾಪಿನಬಾಗಿಲು ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಘಟನೆಯಲ್ಲಿ ಕಾರಿನಲ್ಲಿದ್ದ ಕವಿತಾ ಎಂಬವರು ಸಣ್ಣಪುಟ್ಟ ಗಾಯಗೊಂಡಿದ್ದು ಉಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಕವಿತಾ ಅವರಿಗೆ ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ….

Read More

ನೇತ್ರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆ

ಧರ್ಮಸ್ಥಳ (ದಕ್ಷಿಣ ಕನ್ನಡ):ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ನೇತ್ರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಈ ಮೃತದೇಹ ಕಂಡುಬಂದಿದೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಮೃತದೇಹದ ಮಹಜರು ನಡೆಸಿ ಹೆಚ್ಚಿನ ಪರಿಶೀಲನೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ…

Read More

ಜಪ್ಪಿನಮೊಗರು ವಾರ್ಡಿನಲ್ಲಿ ವೈದ್ಯನಾಥ ಆಟೋ ಪಾರ್ಕ್ ಸುಧಾರಣೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನ ಶ್ರೀ ವೈದ್ಯನಾಥ ಆಟೋ ಪಾರ್ಕ್‌ ಗೆ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಅಳವಡಿಸಲಾಗಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, ಆಟೋ ಚಾಲಕರು ಶ್ರಮಿಕ ವರ್ಗವಾಗಿದ್ದು, ಪ್ರಯಾಣಿಕರ ಜೊತೆಗೆ ತಮ್ಮ ಆಟೋಗಳ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುವವರು. ಸದ್ಯ ಎಲ್ಲೆಡೆ ವಿಪರೀತ ಬಿಸಿಲಿನ ವಾತಾವರಣವಿದ್ದು ತಮ್ಮ ಆಟೋಗಳು ಬಿಡುವಿನ ವೇಳೆ ನೆರಳಲ್ಲಿ ಇರಬೇಕು ಎಂದು ಬಯಸುತ್ತಾರೆ. ಅವರ ಬೇಡಿಕೆಗೆ ಅನುಗುಣವಾಗಿ ಇಲ್ಲಿಗೆ ಸುಸಜ್ಜಿತ ಮೇಲ್ಛಾವಣಿ…

Read More

ವಿಷು ರಜೆ ಹಿನ್ನೆಲೆ: ಮಂಗಳೂರು–ಚೆನ್ನೈ ನಡುವೆ ವಿಶೇಷ ರೈಲು ಸೇವೆ ಘೋಷಣೆ

ಮಂಗಳೂರು:ವಿಷು ರಜಾದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದಕ್ಷಿಣ ರೈಲ್ವೆ ಇಲಾಖೆ ಮಂಗಳೂರು ಸೆಂಟ್ರಲ್ ಹಾಗೂ ಚೆನ್ನೈ ಎಗ್ಮೋರ್ ನಡುವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಏಪ್ರಿಲ್ ತಿಂಗಳಲ್ಲಿ ಹಬ್ಬದ ಸಂದರ್ಭದ ಜನಸಂದಣಿಯನ್ನು ನಿರ್ವಹಿಸಲು ಪ್ರತಿ ದಿಕ್ಕಿನಲ್ಲಿ ಎರಡು ವಿಶೇಷ ಸೇವೆಗಳನ್ನು ಅನುಮತಿಸಲಾಗಿದೆ ಎಂದು ಪಾಲಕ್ಕಾಡ್ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ. ದೇವದಾನಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈಲು ಸಂಚಾರ ವಿವರಗಳು: ಪ್ರಮುಖ ನಿಲ್ದಾಣಗಳು (ಮಂಗಳೂರುದಿಂದ):ಕಾಸರಗೋಡು, ಕಾಞಂಗಾಡ್, ಪಯ್ಯನ್ನೂರು, ಕಣ್ಣೂರು, ತಲಶ്ശೇರಿ, ವಡಕರ, ಕೋಝಿಕ್ಕೋಡ್,…

Read More

ಮಂಜೇಶ್ವರ ಪೊಲೀಸ್ ಠಾಣಾ ಆವರಣದಲ್ಲಿ ಅಗ್ನಿ ಅವಘಡ: ಕಸ್ಟಡಿಯಲ್ಲಿದ್ದ 36 ವಾಹನಗಳು ಭಸ್ಮ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ಕಸ್ಟಡಿಯಲ್ಲಿದ್ದ ಸುಮಾರು 36ಕ್ಕೂ ಹೆಚ್ಚು ವಾಹನಗಳು ಆಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.​​ವಿವಿಧ ಅಪರಾಧ ಪ್ರಕರಣಗಳು, ದಾಖಲೆಗಳಿಲ್ಲದ ಕಾರಣಕ್ಕಾಗಿ ಮುಟ್ಟುಗೋಲು ಹಾಕಿಕೊಂಡಿದ್ದ ಮತ್ತು ಅಪಘಾತಕ್ಕೀಡಾಗಿ ಮಾಲೀಕರು ಬಿಟ್ಟು ಹೋಗಿದ್ದ ವಾಹನಗಳನ್ನು ಠಾಣಾ ಆವರಣದಲ್ಲಿ ನಿಲ್ಲಿಸಲಾಗಿತ್ತು. ದಿಢೀರಾಗಿ ಕಾಣಿಸಿಕೊಂಡ ಬೆಂಕಿಯು ಕ್ಷಣಾರ್ಧದಲ್ಲಿ ಆವರಣದಾದ್ಯಂತ ಹರಡಿದೆ. ಈ ಅಗ್ನಿ ದುರಂತದಲ್ಲಿ ಆಟೋರಿಕ್ಷಾಗಳು, ಓಮ್ನಿ ವ್ಯಾನ್‌ಗಳು, ಮಿನಿ ಲಾರಿಗಳು ಹಾಗೂ ಕಾರುಗಳು ಸೇರಿದಂತೆ ಒಟ್ಟು 36 ವಾಹನಗಳು ಬೆಂಕಿಗಾಹುತಿಯಾಗಿವೆ….

Read More

ಮಂಜೇಶ್ವರ ‘ಹಾಟ್ ಸೀಟ್’ ಗೆ ಬಿಜೆಪಿ ಕಸರತ್ತು: ಮನೆಮನೆಗೆ ತೆರಳಿ ಮತಯಾಚನೆ

ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಪ್ರತಿ ಚುನಾವಣೆಯಲ್ಲೂ ಕಠಿಣ ಸ್ಪರ್ಧೆ ನಡೆಯುವ “ಹಾಟ್ ಸೀಟ್” ಎಂದು ಪರಿಗಣಿಸಲಾಗುವ ಕ್ಷೇತ್ರ. ಪ್ರತೀ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದಲ್ಲಿ ಸೋಲುವ ಬಿಜೆಪಿ ಈ ಬಾರಿ ಕಮಲ ಅರಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. .ಈ ನಿಟ್ಟಿನಲ್ಲಿ ತುಳು ಕನ್ನಡ ಮಾತನಾಡುವ ಜನರೇ ಅಧಿಕವಾಗಿರುವ ಎಣ್ಮಕಜೆ ವ್ಯಾಪ್ತಿಯ ಕಂಡೇರಿ ಗ್ರಾಮ ಪಂಚಾಯತ್ ನಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಕೆ ಸುರೇಂದ್ರನ್ ರವರ ಪರವಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ…

Read More
error: Content is protected !!