ಕುಂಬಳೆಯಲ್ಲಿ 159 ಲೀಟರ್ ಕರ್ಣಾಟಕ ಮದ್ಯ ವಶ : ಓರ್ವ ಬಂಧನ, ಮತ್ತೊಬ್ಬ ಪರಾರಿ
ಕುಂಬಳೆ: ಕೇರಳದಲ್ಲಿ ಮಾರಾಟ ನಿಷೇಧಿತವಾಗಿರುವ ಕರ್ಣಾಟಕ ನಿರ್ಮಿತ ಮದ್ಯವನ್ನು ಸಾಗಿಸುತ್ತಿದ್ದ ಇಬ್ಬರನ್ನು ಎಕ್ಸೈಸ್ ಇಲಾಖೆ ಪತ್ತೆಹಚ್ಚಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಮತ್ತೊಬ್ಬರು ಪರಾರಿಯಾಗಿದ್ದಾರೆ. ತಲಪಾಡಿ ತಚ್ಚನಿ ನಿವಾಸಿ ನಿಖಿಲ್ ಬಂಧಿತ ಆರೋಪಿಯಾಗಿದ್ದು, ವಿಧಾನಸಭಾ ಚುನಾವಣೆಯ ಹಿನ್ನೆಲೆ ನಡೆಯುತ್ತಿದ್ದ ತಪಾಸಣೆ ವೇಳೆ ಅವರಿಂದ ಸುಮಾರು 159 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದೇ ವೇಳೆ, ಎರಡನೇ ಆರೋಪಿಯಾದ ಕುಂಟಾಂಗಿರಡ್ಕ ನಿವಾಸಿ ಪ್ರಭಾಕರನ್ ಅಲಿಯಾಸ್ ಅನ್ನಿ ಪ್ರಭಾಕರನ್ ಪರಾರಿಯಾಗಿದ್ದಾನೆ. ಪರಾರಿಯಾಗುವ ಸಂದರ್ಭದಲ್ಲಿ ಮದ್ರಸದಿಂದ ಬರುತ್ತಿದ್ದ ಸುಮಾರು 15 ಬಾಲಕಿಯರ…