Avatar

NAMMA MEDIA 24X7

ಮಾತೃತ್ವದ ಹಾದಿಯಲ್ಲಿ ವಿದ್ಯಾರ್ಥಿಗಳ ಹೆಜ್ಜೆ: ಕುಂಜತ್ತೂರು-ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆ ವತಿಯಿಂದ ರಂಜಾನ್ ಕಿಟ್ ವಿತರಣೆ

ಮಂಜೇಶ್ವರ : ಪವಿತ್ರ ರಂಜಾನ್ ತಿಂಗಳು ಕೇವಲ ಉಪವಾಸಕ್ಕಷ್ಟೇ ಸೀಮಿತವಲ್ಲ, ಅದು ದಾನ-ಧರ್ಮ ಹಾಗೂ ಪರಸ್ಪರ ಸಹಕಾರದ ಸಂಕೇತವೂ ಹೌದು ಎಂಬುದನ್ನು ಕುಂಜತ್ತೂರು ಹಾಗು ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಯ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ಪವಿತ್ರ ಮಾಸದ ಹಿನ್ನೆಲೆಯಲ್ಲಿ ಸಮಾಜದ ದುರ್ಬಲ ವರ್ಗದವರ ಕಣ್ಣೀರು ಒರೆಸುವ ಮಹತ್ತರ ಉದ್ದೇಶದೊಂದಿಗೆ, ಶಾಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಹಸಿದವರಿಗೆ ಅನ್ನ, ಬಟ್ಟೆ ಹಾಗೂ ಧಾರ್ಮಿಕ ಮಾರ್ಗದರ್ಶನದ ಹರಿಕಾರರಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳು ಶ್ರಮವಹಿಸಿ ಸಂಗ್ರಹಿಸಿದ ಹಾಗು ಸಿದ್ಧಪಡಿಸಲಾದ ದಿನಬಳಕೆಯ ಅಗತ್ಯ ದಿನಸಿ ಪದಾರ್ಥಗಳನ್ನೊಳಗೊಂಡ…

Read More

ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ದ್ವಿತೀಯ ದಿನ

ಯಕ್ಷ ಸ್ನೇಹ ಕಲಾಪ್ರತಿಷ್ಠಾನ (ರಿ) ಕೊಂಚಾಡಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಲೆ ಅಷ್ಟಾಹ ಸಂಭ್ರಮ ಯಕ್ಷಮಂಜರಿಯ ದ್ವಿತೀಯ ದಿನದ ಕಾರ್ಯಕ್ರಮವನ್ನು ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ ಅರವಿಂದ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಮಾತನಾಡುತ್ತಾ ದೇವಸ್ಥಾನಗಳು ಕೇವಲ ಪೂಜಾ ಕೇಂದ್ರಗಳಾಗದೇ ನಮ್ಮ ಸಂಸ್ಕೃತಿ ಸಂಸ್ಕಾರ ಬೆಳೆಸುವ ಕೇಂದ್ರಗಳಾಗ ಬೇಕು ಎಂದು ಹೇಳುತ್ತಾ ಇಂತಹ ಕಾರ್ಯಕ್ರಮಗಳು ಪ್ರತಿಷ್ಠಾನದಿಂದ ಆಯೋಜಿಸಲ್ಪಡಲಿ ದೇವರ ಅನುಗ್ರಹ ಸರ್ವರಿಗೂ ಪ್ರಾಪ್ತವಾಗಲಿ ಎಂದು…

Read More

22,600ರೂ ಲಂಚ ಪಡೆಯುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ದಾಳಿ

ಫಿರ್ಯಾದುದಾರರು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದು, 2025 ರ ಸಾಲಿನಲ್ಲಿ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ಒಳಪಟ್ಟ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದು, ಸದರಿ ಕೆಲಸದ ಬಿಲ್‌ಗೆ 4 ಪರ್ಸೆಂಟ್‌ನಂತೆ ಒಟ್ಟು ರೂ 22,600/- ಕೊಡಬೇಕು ಎಂಬುದಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ, ವಿದ್ಯುತ್ ಉಪವಿಭಾಗ, ಲೋಕೋಪಯೋಗಿ ಇಲಾಖೆ, ಮಂಗಳೂರು ಇಲ್ಲಿನ ಎಸ್.ಡಿ.ಎ ಸಂಪತ್ ರವರು ಫಿರ್ಯಾದುದಾರರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸಭೆ ಮಂಗಳೂರಿನಲ್ಲಿ, ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರಗಳು

ಮಂಗಳೂರು: ನಿರಂತರ ಸಮಾಜ ಕಾರ್ಯಗಳಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ತೊಡಗಿಸಿಕೊಂಡಿದೆ. ಮುಲ್ಕಿಯಲ್ಲಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಕೆಲಸ ತ್ವರಿತವಾಗಿ ನಡೆಯುತ್ತಿದೆ. ಮಹಾದಾನಿ ಡಾ ಕನ್ಯಾನ ಸದಾಶಿವ ಶೆಟ್ಟಿಯವರ ಆಶಯ, ಆಶೀರ್ವಾದಿಂದ ಸಂಕೀರ್ಣದ ಕೆಲಸ ಪ್ರಗತಿಯಲ್ಲಿದೆ. ಸಂಕೀರ್ಣದಲ್ಲಿ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ಅವರ ಹೆಸರಿನಲ್ಲಿ ವೇದಿಕೆ ಇದೆ. ಇದರ ಜೊತೆಗೆ ಕಿರು ಸಭಾಂಗಣ, ಧರ್ಮಚಾವಡಿ, ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯೂ ಇದೆ. ಡಿಸೆಂಬರ್ ತಿಂಗಳಲ್ಲಿ “ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ”…

Read More

ಚಿನ್ನವನ್ನು ಪಾಲಿಶ್‌ ಮಾಡುವ ಹೆಸರಿನಲ್ಲಿ ವಂಚಿಸಿದ ಆರೋಪಿ ಬಂಧನ

ಚಿನ್ನವನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬ ಮನೆಗೆ ಬಂದು ರಾಸಾಯನಿಕ ಬಳಸಿ ಚಿನ್ನವನ್ನು ಕರಗಿಸಿ ವಂಚನೆ ಮಾಡಿ ಪರಾರಿಯಾದ ಪ್ರಕರಣದಲ್ಲಿ ಸಂಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸರು ಮೂಡುಬಿದಿರೆ ತಾಲ್ಲೂಕಿನ ಗಂಟಾಲ್‌ಕಟ್ಟೆಯಲ್ಲಿ ಬಂಧಿಸಿದ್ದಾರೆ. ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಪಣಿಲಾಜೆ ಎಂಬಲ್ಲಿ, ದಿನಾಂಕ 10.02.2026 ರಂದು ಆರೋಪಿಯು ಸೇಲ್ಸ್‌ ಮ್ಯಾನ್‌ ರೂಪದಲ್ಲಿ, ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ, ಚಿನ್ನವನ್ನು ಪಡೆದುಕೊಂಡು ಅದನ್ನು ಯಾವುದೋ ದ್ರಾವಣ ಬಳಸಿ…

Read More

ಉಳ್ಳಾಲ ಮಸೀದಿ ಹತ್ತಿರ ಬಾಂಬ್‌ ಬ್ಲಾಸ್ಟ್‌ ಮಾಡುತ್ತೇವೆ ಎಂದು ಬೆದರಿಕೆ: ಎಫ್ ಐಆರ್ ದಾಖಲು

ಮಂಗಳೂರು : ಮಂಗಳೂರಿನ ಉಳ್ಳಾಲ ಮಸೀದಿ ಹತ್ತಿರ ಬಾಂಬ್‌ ಬ್ಲಾಸ್ಟ್‌ ಮಾಡುತ್ತೇನೆ ಎಂದು ಫೇಸ್‌ ಬುಕ್‌ನಲ್ಲಿ ಮೆಸೇಜ್ ಮಾಡಿದ ವ್ಯಕ್ತಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಬೇರೊಬ್ಬರು ಹಂಚಿಕೊಂಡ ಪೋಸ್ಟ್‌ಗೆ ‘ಶಂಕರ್‌11916’ ಎಂಬ ಖಾತೆಯನ್ನು ಬಳಸಿ ಈ ರೀತಿ ಕಮೆಂಟ್‌ ಮಾಡಲಾಗಿದೆ. ಮೊಹಮ್ಮದ್ ರಿಯಾಜ್ ಕಡಂಬು ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡು, ‘ಆರೋಪಿಯನ್ನು ಪೊಲೀಸರು ಆದಷ್ಟು ಬೇಗ ಬಂಧಿಸಬೇಕೆಂದು ತಿಳಿಸಿದ್ದಾರೆ . ಯಾವುದಕ್ಕೂ ಉಳ್ಳಾಲ…

Read More

ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ರೀಗೆ ” ಭರತ ಭೂಷಣ ಆದರ್ಶ ಕನ್ನಡ ದಂಪತಿ”ರಾಷ್ಟ್ರ ಪ್ರಶಸ್ತಿ. ಘೋಷಣೆ.

ವಿಶ್ವ ರಾಮಕ್ಷತ್ರಿಯ ಮಹಾಸಂಘ ಉಪಾಧ್ಯಕ್ಷರು ಹಾಗೂ ಕನ್ನಡ ಭವನ ಕಾಸರಗೋಡು, ಸೀತಮ್ಮ ಪುರುಷನಾಯಕ ಸ್ಮಾರಕ ಗ್ರಂಥಾಲಯ, ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರು ಆದ ಕಾಸರಗೋಡು ನುಲ್ಲಿಪ್ಪಾಡಿಯ ಡಾ. ವಾಮನ್ ರಾವ್ ಬೇಕಲ್ ಇವರೀಗೆ ಕರ್ನಾಟಕ ರಾಜ್ಯ ಈ ಶ್ರೀ ಲಕ್ಕಮದೇವಿ ಕಲಾ ಪೋಷಕ ಸಂಘ (ರಿ.)ಭ್ಯಾಕೂಡ,ಈ ಸಂಸ್ಥೆ ಬೆಳಗಾವಿ ಯಲ್ಲಿ ನಡೆಯುವ ಅಖಿಲ ಕರ್ನಾಟಕ ಭಾವೈಕತಾ ಸಮ್ಮೇಳನದಲ್ಲಿ ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಾಂಸ್ಕೃತಿಕ ನಿಟ್ಟಿನಲ್ಲಿ ಸಾಧನೆ ಗೈಯುತ್ತಿರುವ…

Read More

ಗುರುಪುರ ಹೋಬಳಿಯಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಗೆ ಒತ್ತಾಯಿಸಿ ಸಿಪಿಐಎಂ ನಿಂದ ಪಾದಯಾತ್ರೆ

ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರ ಬಲಪಡಿಸಲು ಆಗ್ರಹ ಗಂಜಿಮಠ ಆರೋಗ್ಯ ಕೇಂದ್ರವನ್ನು ಗುರುಪುರ ಹೋಬಳಿಯ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು, ಹೋಬಳಿಯ ಕುಪ್ಪೆಪದವು, ಕೊಂಪದವು, ವಾಮಂಜೂರು ಆರೋಗ್ಯ ಕೇಂದ್ರಗಳಿಗೆ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಜಿಲ್ಲೆಯಲ್ಲಿ‌ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ಗುರುಪುರ ವಲಯ ಸಮಿತಿ ನೇತೃತ್ವದಲ್ಲಿ ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದವರಗೆ ಹಕ್ಕೊತ್ತಾಯ ಪಾದಯಾತ್ರೆ ನಡೆಯಿತು….

Read More

ದುಬೈ : ಅತಂತ್ರದಲ್ಲಿರುವ ಪ್ರವಾಸಿಗರಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ನೆರವು, ತುರ್ತು ಸಹಕಾರಕ್ಕಾಗಿ ಸರ್ಕಾರಕ್ಕೆ ಮನವಿ

ದುಬೈ :ಅನಿವಾಸಿ ಕನ್ನಡಿಗರ ಪೋಷಕರಾದ ರೊನಾಲ್ಡ್ ಕೊಲಸೋ ಅವರ ನೇತೃತ್ವದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು, ಯುಎಇಯಲ್ಲಿ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಲು ಹಾಗೂ ಇಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರ ಮಾಹಿತಿ ಸಂಗ್ರಹಿಸಲು ಮತ್ತು ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಳ್ಳಲು ಝೂಮ್ ಸಭೆಯನ್ನು ಆಯೋಜಿಸಿತು.ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಸುರಕ್ಷಿತವಾಗಿದ್ದು, ಇಲ್ಲಿನ ಸರ್ಕಾರ ಎಲ್ಲಾ ಅನಿವಾಸಿಗಳ ಸುರಕ್ಷತೆಯನ್ನು ಸಮರ್ಪಕವಾಗಿ ಕಾಪಾಡುತ್ತಿದೆ, ಯಾವುದೇ ಆತಂಕಕ್ಕೆ ಒಳಗಾಗದೆ, ಅನಧಿಕೃತ ಅಥವಾ ಅಪಪ್ರಚಾರದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಬಾರದು…

Read More

ಕಾಸರಗೋಡು ಗೋ-ಕುಟೀರಕ್ಕೆ ಲಾಂಛನ: ಹಿರಿಯ ಕಲಾವಿದ ಜಿ.ಎಂ. ಹೆಗಡೆ ತಾರಗೋಡ ರಚನೆ

ಕಾಸರಗೋಡು:- ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ. ),ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ “ಕಾಸರಗೋಡು ಗೋ- ಕುಟೀರ”ವನ್ನು ಸದಾ ನೆನಪಿಸುವ ಲಾಂಛನ (ಲೋಗೋ )ವನ್ನು ಖ್ಯಾತ ಹಿರಿಯ ಚಿತ್ರ ಕಲಾವಿದ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿ.ಎಂ.ಹೆಗಡೆ ತಾರಗೋಡ ಅವರು ರಚಿಸಿದ್ದಾರೆ. ಕರ್ನಾಟಕ ಕಲಾ ವಲಯದಲ್ಲಿ ಜಿ.ಎಂ. ಹೆಗಡೆ ತಾರಗೋಡ ಶಿರಸಿ ತಮ್ಮ ಕಲಾ ಪ್ರಕಾರಗಳ ಸಾಂಪ್ರದಾಯಿಕವಲ್ಲದೇ, ಆಧುನಿಕ ಶೈಲಿ, ನವ್ಯ ಹಾಗೂ ಸಂಪ್ರದಾಯಗಳ ಮಿಶ್ರಣದ ಶೈಲಿ ಇವರದೇ ಶೈಲಿಯಲ್ಲಿ…

Read More
error: Content is protected !!