ಉಡುಪಿ ಕಂಬಳಕ್ಕೆ ಭೂಮಿ ಹಸ್ತಾಂತರವಾಗಿಲ್ಲ; ಭೂಮಿ ಪೂಜೆ ಕಾನೂನು ಬಾಹಿರ-ವಿನಯಕುಮಾರ್ ಸೊರಕೆ
ಉಡುಪಿ: 80 ಬಡಗುಬೆಟ್ಟುವಿನಲ್ಲಿ ನಡೆಯುವ ಉಡುಪಿ ಕಂಬಳಕ್ಕೆ ಜಿಲ್ಲಾಡಳಿತದಿಂದ 6.30 ಎಕರೆ ಭೂಮಿ ಕಂಬಳ ಸಮಿತಿಗೆ ಹಸ್ತಾಂತರವಾಗಿಲ್ಲ. ಆದ್ದರಿಂದ ಫೆ.28ರಂದು ಕಾಪು ಶಾಸಕರ ನೇತೃತ್ವದಲ್ಲಿ ನಡೆದ ಕಂಬಳ ಕರೆಯ ಭೂಮಿ ಪೂಜೆ ಕಾನೂನು ಬಾಹಿರವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಕಂಬಳ ನಡೆಸುವುದಕ್ಕೆ ತನ್ನ ಅಭ್ಯಯಂತರವಿಲ್ಲ. ಆದರೆ ಅದು ಬಿಜೆಪಿ ಪಕ್ಷದ ಕಂಬಳ ಆಗಬಾರದು. ಜಿಲ್ಲಾಡಳಿತ ಕಂಬಳ ಆಗಬೇಕು. ಸ್ಥಳೀಯ ಜನರಿಗೆ ಕಂಬಳದಿಂದ ತೊಂದರೆ ಆಗದಂತೆ ಸೂಕ್ತ…