ಮಲಯಾಳ ಭಾಷಾ ಬಿಲ್ಸ್ – 2025 ಕೇಂದ್ರ ಸರಕಾರದ ಭಾಷಾ ಅಲ್ಪ ಸಂಖ್ಯಾಕ ಸಹಾಯಕ ಆಯುಕ್ತರಿಂದ ಕೇರಳ ಸರಕಾರಕ್ಕೆ ಮರು ಪರಿಶೀಲಿಸಲು ಆದೇಶ ಪತ್ರ
ಕೇರಳ ಸರಕಾರವು (ಮಲಯಾಳ ಭಾಷಾ ಬಿಲ್ಸ್- 2025) ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಕೈಬಿಡಲು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸುತ್ತಿದೆ. ಭಾಷಾ ಅಲ್ಪಸಂಖ್ಯಾಕರ ರಕ್ಷಣೆಗೆ ಸಂವಿಧಾನವು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಭಾಷಾ ಹಕ್ಕುಗಳನ್ನು ವ್ಯವಸ್ಥಿತಗೊಳಿಸಿದೆ.ಭಾಷಾ ಅಲ್ಪಸಂಖ್ಯಾಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕುಗಳಿಗೆ ಧಕ್ಕೆಯಾಗದಂತೆ ನೀತಿ – ಕಾನೂನುಗಳನ್ನು ರೂಪಿಸಬೇಕಾಗುತ್ತದೆ. ಭಾಷಾ ಅಲ್ಪ ಸಂಖ್ಯಾಕರ ಮಕ್ಕಳಿಗೆ…