ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ: ಅವಿಸ್ಮರಣೀಯ ಅನುಭವ- ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು:ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿರುವುದು, ಅವರೊಂದಿಗೆ ಸಂವಾದ ನಡೆಸಿರುವುದು ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಅಭಿಪ್ರಾಯಿಸಿದ್ದಾರೆ.ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಕೊರಗ ಸಮುದಾಯ ಬಂಧುಗಳ ಮನೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡ ಶಾಸಕರು ಆ ಪ್ರದೇಶದ ಜನತೆಯ ಸಮಸ್ಯೆಗಳು ಮತ್ತು ಬುಡಕಟ್ಟು ಜನರು ಎದುರಿಸು ತ್ತಿರುವ ಸಮಸ್ಯೆಗಳ ಸಾಕ್ಷಾತ್ ಮಾಹಿತಿ ಪಡೆದರು. ಸಮಸ್ಯೆ ಅರಿಯಲು ಗಂಟಿಹೊಳೆ ಅವರು ತಮ್ಮ ಗ್ರಾಮದಲ್ಲಿ ವಾಸ್ತವ್ಯದ ಮಾಡಿರುವ ಬಗ್ಗೆ ಮದುಕೊಡ್ಲು ಪರಿಸರದ ಕೊರಗ…