Avatar

NAMMA MEDIA 24X7

ಬಂಟ್ವಾಳದಲ್ಲಿ ಮಳೆ ಅವಾಂತರ: ಮನೆಗಳ ಸಂಪರ್ಕ ರಸ್ತೆ ಬಂದ್

ಬಂಟ್ವಾಳ: ಬಂಟ್ವಾಳ ಪರಿಸರದಾದ್ಯಂತ ಸೋಮವಾರ ಬೆಳಗ್ಗೆ ಗಾಳಿ ಮಳೆಯಾಗಿದ್ದು, ಬಿ.ಮೂಡ ಗ್ರಾಮದ ಪೆಲತ್ತಿಮಾರ್ ಅರ್ಕಮೆ ಎಂಬಲ್ಲಿ ಕುಲಾಲ್ ಭವನ ಸಹಿತ ಕೆಲವು ಮನೆಗಳನ್ನು ಸಂಪರ್ಕಿಸುವ ರಸ್ತೆಗೆ ವಿದ್ಯುತ್ ತಂತಿ ಸಮೆತ ಮರ ಉರುಳಿಬಿದ್ದಿದೆ. ಸ್ಥಳಕ್ಕೆ ಕಂದಾಯ, ಮೆಸ್ಕಾಂ ಸಹಿತ ನಾನಾ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಮೂಡ ಗ್ರಾಮದ ಪೆಲತ್ತಿಮಾರು ಅರ್ಕಮೆಯ ಈ ಭಾಗದಲ್ಲಿ ಘಟನೆಯಿಂದ ಸ್ಥಳೀಯರು ನಡೆದುಕೊಂಡು ಹೋಗಲೂ ಪರದಾಡುವಂಥ ಸ್ಥಿತಿ ತಲೆದೋರಿದೆ. ಬೆಳಗ್ಗೆಯಿಂದ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟದಲ್ಲೂ ಏರಿಳಿತವಾಗುತ್ತಿದೆ.

Read More

ಆರೋಗ್ಯವೇ ಭಾಗ್ಯ: ಕುಂಜತ್ತೂರಿನಲ್ಲಿ ಜನಮೆಚ್ಚುಗೆ ಪಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಮಂಜೇಶ್ವರ: ಸಮಾಜ ಸೇವೆಯೇ ನನ್ನ ಗುರಿ ಮತ್ತು ನಾಡಿನ ಜನತೆಯ ಆರೋಗ್ಯವೇ ನನ್ನ ಧ್ಯೇಯ” ಎಂಬ ಉದಾತ್ತ ಉದ್ದೇಶದೊಂದಿಗೆ, ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜತ್ತೂರು ಅಂಡರ್ ಪಾಸ್ ಸಮೀಪದ ಕೆ.ಪಿ.ಎಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ಕ್ಲಿನಿಕ್ ವತಿಯಿಂದ ಭಾನುವಾರದಂದು ಆಯೋಜಿಸಲಾದ ಉಚಿತ ವೈದ್ಯಕೀಯ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು ಹಾಗೂ ಸ್ಥಳೀಯ ಸಾರ್ವಜನಿಕರ ಗಮನ ಸೆಳೆಯಿತು. ​ಬೆಳಿಗ್ಗೆಯಿಂದಲೇ ಹರಿದುಬಂದ ಜನಸಂದಣಿ​ಶಿಬಿರದ ಆರಂಭದಿಂದಲೇ, ಅಂದರೆ ಬೆಳಿಗ್ಗೆಯಿಂದಲೇ ಕ್ಲಿನಿಕ್‌ನಲ್ಲಿ ರೋಗಿಗಳ ಹಾಗೂ ಸಾರ್ವಜನಿಕರ ಭಾರೀ ಜನಸಂದಣಿ ಕಂಡುಬಂತು. ಸುತ್ತಮುತ್ತಲಿನ…

Read More

ಉಪ್ಪಳದಲ್ಲಿ ‘ಸಮರಸ ಸಂಕಲ್ಪ ಅಭಿಯಾನ’ ರಾಜ್ಯ ಮಟ್ಟದ ಉದ್ಘಾಟನೆ ಆಗಸ್ಟ್‌ 5ಕ್ಕೆ

ಉಪ್ಪಳ: ಸಂತ ಶಿರೋಮಣಿ ಗುರು ರವಿದಾಸ್ ಮಹಾರಾಜರ 650ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ದೇಶವ್ಯಾಪಿಯಾಗಿ ನಡೆಯುತ್ತಿರುವ “ಸಮರಸ ಸಂಕಲ್ಪ ಅಭಿಯಾನ”ದ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮ 2026ರ ಆಗಸ್ಟ್ 5ರಂದು (ಬುಧವಾರ) ಬೆಳಿಗ್ಗೆ 10.00 ಗಂಟೆಗೆ ಉಪ್ಪಳದ ಕೊಂಡೇವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಲಿದೆ. ಜಾತಿ, ವರ್ಣ, ಭಾಷೆ ಹಾಗೂ ವೃತ್ತಿಯ ಹೆಸರಿನಲ್ಲಿ ನಡೆಯುವ ಭೇದಭಾವವನ್ನು ವಿರೋಧಿಸಿ, “ಎಲ್ಲಾ ಮನುಷ್ಯರೂ ಸಮಾನರು” ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಜಗತ್ತಿಗೆ ಸಾರಿದ ಮಹಾನ್ ಭಕ್ತಿ ಸಂತ ಮತ್ತು…

Read More

ಗ್ರಾಮ ಸ್ವರಾಜ್ ಪ್ರತಿಷ್ಠಾನದ ವತಿಯಿಂದ ಗ್ರಾಮೀಣ ಕ್ರೀಡಾ ಸಂಸ್ಕೃತಿಗೆ ಮತ್ತೊಂದು ಹೆಜ್ಜೆ:ಕುಳಾಲು ಸುಭಾಶ್ಚಂದ್ರ ಶೆಟ್ಟಿ ನೇತೃತ್ವದಲ್ಲಿ ಗ್ರಾಮಮಟ್ಟದ ವಾಲಿಬಾಲ್ ಪಂದ್ಯಾಟ ಯಶಸ್ವಿ

ಕೊಳ್ನಾಡು: ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ), ಮಂಗಳೂರು ಹಾಗೂ ಸೌಹಾರ್ಧ ಫ್ರೆಂಡ್ಸ್, ಕೊಳ್ನಾಡು–ಸಾಲೆತ್ತೂರು ಇವರ ಜಂಟಿ ಆಶ್ರಯದಲ್ಲಿ ಎರಡನೇ ವರ್ಷದ ಗ್ರಾಮಮಟ್ಟದ ವಾಲಿಬಾಲ್ ಪಂದ್ಯಾಟವು ಸಾಲೆತ್ತೂರು ಪೇಟೆಯ ಮೈದಾನದಲ್ಲಿ ಉತ್ಸಾಹಭರಿತವಾಗಿ ನಡೆಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷರೂ ಶಾಸಕರೂ ಆದ ಶ್ರೀ ಮಂಜುನಾಥ ಭಂಡಾರಿಯವರ ಕ್ರೀಡಾ ಮಾರ್ಗದರ್ಶನದಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಆಯೋಜಿಸಲಾದ ಈ ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಪಂದ್ಯಾಟವನ್ನು ಉದ್ಘಾಟಿಸಿ…

Read More

ಕಾಸರಗೋಡು ಜಿಲ್ಲೆಯಲ್ಲಿ ಮಳೆ ಅಬ್ಬರ: ಮಂಜೇಶ್ವರ-ಉಪ್ಪಳ ತೀರದಲ್ಲಿ ಸಮುದ್ರ ಆರ್ಭಟ, ಆತಂಕದಲ್ಲಿ ಕರಾವಳಿ ಜನತೆ

ಮಂಜೇಶ್ವರ / ಕಾಸರಗೋಡು : ಜಿಲ್ಲೆಯಲ್ಲಿ ಮಳೆಯ ತೀವ್ರತೆ ತುಸು ತಗ್ಗಿದೆಯಾದರೂ, ಕಡಲ ಅಲೆಗಳ ತೀವ್ರ ಆರ್ಭಟ ಮುಂದುವರಿದಿದ್ದು, ಮಂಜೇಶ್ವರ ಹಾಗೂ ಉಪ್ಪಳ ಭಾಗದ ಕರಾವಳಿ ತೀರದ ಜನತೆಯನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಸಮುದ್ರದ ಅಬ್ಬರಕ್ಕೆ ತೀರಪ್ರದೇಶವು ಕೊರೆದುಹೋಗುತ್ತಿದ್ದು, ಹತ್ತಕ್ಕೂ ಹೆಚ್ಚು ವಸತಿಗಳು ಅಪಾಯದ ಅಂಚಿನಲ್ಲಿವೆ. ​​ಉಪ್ಪಳದ ಶಾರದಾ ನಗರ ಪ್ರದೇಶದಲ್ಲಿ ಈಗಾಗಲೇ ಒಂದು ಮನೆ ಸಂಪೂರ್ಣ ಕುಸಿದುಬಿದ್ದಿದ್ದು, ಸಮೀಪದ ಮೂರು ಪ್ರಮುಖ ಮನೆಗಳು ಯಾವಾಗ ಬೇಕಾದರೂ ಸಮುದ್ರ ಪಾಲಾಗುವ ಗಂಭೀರ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಡಲು ದಿನದಿಂದ…

Read More

ಕೇವಲ ವಾರದ ಮಳೆಗೆ ಅಡಿಕೆ ತೋಟಗಳಲ್ಲಿ ಕೊಳೆರೋಗ; ರೈತರಲ್ಲಿ ಮತ್ತೆ ಆತಂಕ

ಬಂಟ್ವಾಳ: ಈ ವರ್ಷ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿದ್ದರೂ, ಕೇವಲ ಒಂದು ವಾರ ಸುರಿದ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗಗಳ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಳ್ಳಲು ಆರಂಭಿಸಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.ಕಳೆದ ವರ್ಷ ಅವಧಿಗೂ ಮುನ್ನ ಆರಂಭವಾದ ಭಾರೀ ಮಳೆ ಮತ್ತು ನಿರಂತರ ಮಳೆಯ ಪರಿಣಾಮ ತಾಲೂಕಿನ ಬಹುತೇಕ ಅಡಿಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಕವಾಗಿ ಹರಡಿತ್ತು. ಇದರಿಂದ ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸಿದ್ದರು. ನಿರಂತರ ಮಳೆಯಿಂದಾಗಿ ತೋಟಗಳಿಗೆ ತೆರಳಿ ಬೋರ್ಡ್ ದ್ರಾವಣ ಸಿಂಪಡಣೆ…

Read More

ಎಸ್‌ಡಿಪಿಐ –S I R ಮಂಗಳೂರು ಗ್ರಾಮಾಂತರ ಜಿಲ್ಲಾ ಲೀಗಲ್ ಸೆಲ್ ರಚನೆ

ಬಿ ಸಿ ರೋಡ್ : ವಿಶೇಷ ತೀವ್ರ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಎನ್ಯೂಮರೇಷನ್ ಫಾರ್ಮ್ ಸಲ್ಲಿಕೆ ಅವಧಿ ಮುಕ್ತಾಯಗೊಂಡ ನಂತರ ನಡೆಯಲಿರುವ ವಿವಿಧ ಪ್ರಕ್ರಿಯೆಗಳು ಹಾಗೂ ಮತದಾರರ ಹಕ್ಕುಗಳ ರಕ್ಷಣೆಗಾಗಿ ಅಗತ್ಯ ಕಾನೂನು ನೆರವು ಮತ್ತು ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಒಳಗೊಂಡ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ S I R ಜಿಲ್ಲಾ ಲೀಗಲ್ ಸೆಲ್ ಅನ್ನು ರಚಿಸಿದೆ. ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್…

Read More

ಇರಾನ್ ಮೇಲಿನ ದಾಳಿಗೆ ಬ್ರೇಕ್: ಗಲ್ಫ್ ನಾಯಕರ ಸಲಹೆಗೆ ಟ್ರಂಪ್ ಮನ್ನಣೆ

ವಾಷಿಂಗ್ಟನ್: ಇರಾನ್ ಮೇಲೆ ಭಾರೀ ಸೇನಾ ದಾಳಿ ನಡೆಸುವ ಯೋಜನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ನಾಯಕರ ಸಲಹೆಯ ಮೇರೆಗೆ ಯುದ್ಧಕ್ಕಿಂತ ರಾಜತಾಂತ್ರಿಕ ಮಾತುಕತೆಗೆ ಆದ್ಯತೆ ನೀಡಲು ಈ ನಿರ್ಧಾರ ಕೈಗೊಂಡಿದ್ದಾರೆ. ಟ್ರಂಪ್ ಅವರ ಪ್ರಕಾರ, ಎರಡನೇ ವಿಶ್ವಯುದ್ಧದ ಬಳಿಕದ ಅತಿದೊಡ್ಡ ದಾಳಿಯ ಯೋಜನೆ ಸಿದ್ಧವಾಗಿದ್ದರೂ, ಗಲ್ಫ್ ರಾಷ್ಟ್ರಗಳ ಮಧ್ಯಸ್ಥಿಕೆಯಿಂದ ಅದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಅಮೆರಿಕ ಹಾಗೂ ಇರಾನ್ ನಡುವಿನ ಮಾತುಕತೆಗಳು…

Read More

ಮಂಗಳೂರು: ಕಾಲುಸಂಕ ದಾಟುವಾಗ ತೋಡಿಗೆ ಬಿದ್ದು ವ್ಯಕ್ತಿ ಕೊಚ್ಚಿಹೋದ ಶಂಕೆ; ಎನ್‌ಡಿಆರ್‌ಎಫ್ ಶೋಧ ಮುಂದುವರಿಕೆ

ಮಂಗಳೂರು: ರಾಯಿ ಗ್ರಾಮದ ಪಾಂಚಕೋಡಿ ಎಂಬಲ್ಲಿ ಧಾರಾಕಾರ ಮಳೆಯ ನಡುವೆ ಕಾಲುಸಂಕ ದಾಟುತ್ತಿದ್ದ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಅವರ ಪತ್ತೆಗಾಗಿ ಎನ್‌ಡಿಆರ್‌ಎಫ್ (NDRF) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭಾನುವಾರ ದಿನವಿಡೀ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ರಾಯಿ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಅವರ ಪುತ್ರ ಜೀವನ್ ಪಿಂಟೋ (48) ನಾಪತ್ತೆಯಾದ ವ್ಯಕ್ತಿ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜೀವನ್ ಅವರು ಕೆಲ ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು, ಇದೇ ಆಗಸ್ಟ್ ತಿಂಗಳಿನಲ್ಲಿ ಮರಳಿ…

Read More

ಕಾಮನ್‌ವೆಲ್ತ್ 2026: 39 ಪದಕಗಳೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

ನವದೆಹಲಿ: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಯಶಸ್ವಿಯಾಗಿ ಅಂತ್ಯಗೊಂಡಿದ್ದು, ಒಟ್ಟು 39 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಕ್ರೀಡಾಕೂಟದ 11ನೇ ಹಾಗೂ ಅಂತಿಮ ದಿನ ಭಾರತಕ್ಕೆ ಯಾವುದೇ ಪದಕ ಲಭಿಸಲಿಲ್ಲ. ಜೂಡೋ ಸ್ಪರ್ಧೆಯಲ್ಲಿ ಮಹಿಳೆಯರ –78 ಕೆಜಿ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಇಶ್ರೂಪ್ ನಾರಂಗ್ ಸೋಲು ಕಂಡರೆ, ಪ್ಯಾರಾ ಸೈಕ್ಲಿಂಗ್‌ನ ಮಹಿಳೆಯರ C4–C5…

Read More
error: Content is protected !!