ಮನೆಯ ಸಿಟ್ ಔಟ್ನಲ್ಲಿ ಪ್ರವಾಸಿ ಯುವಕನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು : ಚಿತ್ತಾರಿ ಪೋಯ್ಯಕ್ಕರ ಕಲ್ಲಿಂಗಾಲದ ನಿವಾಸಿ ಕೆ.ವಿ. ಕೃಪೇಶ್ (38) ಎಂಬುವವರು ಶನಿವಾರ ಮುಂಜಾನೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಗಲ್ಫ್ನಿಂದ ಊರಿಗೆ ಮರಳಿದ್ದ ಕೃಪೇಶ್, ಇಂದು ಬೆಳಗಿನ ಜಾವ 5:30 ರ ಸುಮಾರಿಗೆ ಮನೆಯ ಸಿಟ್ ಔಟ್ನಲ್ಲಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಮನೆಯವರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದರು. ವಿಷಯ ತಿಳಿಯುತ್ತಿದ್ದಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಇನ್ಕ್ವೆಸ್ಟ್ ನಡೆಸಿದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಮಧ್ಯಾಹ್ನ…
