ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ 16/7/26ರಂದು ಬಿಸಿರೋಡ್ ನಲ್ಲಿ ನಡೆದ ಲಾವಣ್ಯ ಎಂಬ ಮುಗ್ದ ಬಾಲಕಿಯನ್ನು ಬರ್ಬರವಾಗಿ ಹತ್ಯೆಯು ಅಂತ್ಯತ ಕ್ರೂರ ಮತ್ತು ಹೇಯ ಕೃತ್ಯವಾಗಿದ್ದು ಇಂತಹ ಭರ್ಜರ ಕೊಲೆ ಮಾಡಿದ ರಾಕ್ಷಸ ಮಾನಸಿಕತೆಯ ಚೇತನ್ ಎಂಬವನ ಪರವಾಗಿ ಗೌರವಾನ್ವಿತ ನ್ಯಾಯವಾದಿಗಳು ವಕಾಲತ್ತು ವಹಿಸದಂತೆ ಬಂಟ್ವಾಳ ವಕೀಲರ ಸಂಘಕ್ಕೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಇಂದು ಮನವಿ ನೀಡಲಾಯಿತು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ಮತ್ತು ಪುತ್ತೂರು ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

