Avatar

NAMMA MEDIA 24X7

ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ಮೂವರು ಸಾವು

ವಾಷಿಂಗ್ಟನ್; ಅಮೆರಿಕಾದ ಆಸ್ಟಿನ್ ಸಾಮೂಹಿಕ ಗುಂಡಿನ ದಾಳಿಯಲ್ಲಿ ಭಾರತೀಯ-ಅಮೆರಿಕನ್ ವಿದ್ಯಾರ್ಥಿ ಸಾವಿಗೀಡಾಗಿದ್ದಾರೆ. ದಾಳಿಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ. ಗುಂಡು ಹಾರಿಸಿದ ಶೂಟರ್ ನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್‌ನ ವೆಸ್ಟ್ ಸಿಕ್ಸ್ತ್ ಸ್ಟ್ರೀಟ್‌ನಲ್ಲಿರುವ ಬುಫೋರ್ಡ್‌ನಲ್ಲಿ ಭಾನುವಾರ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಸಾವನ್ನಪ್ಪಿದವರನ್ನು ಭಾರತೀಯ-ಅಮೆರಿಕನ್ ವಿದ್ಯಾರ್ಥಿ 21 ವರ್ಷದ ಸವಿತಾ ಶಾನ್ ಮತ್ತು ಇನ್ನೊಬ್ಬಳು 19 ವರ್ಷದ ರೈಡರ್ ಹ್ಯಾರಿಂಗ್ಟನ್ ಎಂದು ಗುರುತಿಸಲಾಗಿದೆ. ಸವಿತಾ ಶಾನ್ ಆಸ್ಟಿನ್ ಪೊಲೀಸ್ ಇಲಾಖೆ ಗುಂಡಿನ…

Read More

ಏಳ್ ಬೂಡುದ ಸತ್ಯ ಶ್ರೀ ವರ್ಣಾರ ಪಂಜುರ್ಲಿ ದೈವ 🙏

ಈ ದೈವವು ಬೆಳ್ಳಿ ಬಂಗಾರಕ್ಕೆ ಬಯಸಿದ ದೈವ 🙏 ಈ ದೈವಕ್ಕೆ ಆವರ ತೆಗೆದು ಕೊಳ್ಳುವವರೆಗೆ ಬಾಯಿ ಬರುವುದಿಲ್ಲ, ಅಬೂಬ ಅಬೂಬ ಅಂತ ಹೇಳುತ್ತದೆ, ಆವರದ ನಂತರ, ಪಟ್ಟದ ಆಯುಧ ಕೈಗೆತ್ತಿದ ಮೇಲೆ ಮಾತನಾಡುತ್ತದೆ 🙏 ಮಲಾರ್ ಬೂಡುವಿನಲ್ಲಿದ್ದ ಮಲಾರ ಪಂಜುರ್ಲಿ ದೈವವು ವರ್ಣಾರ ಬೂಡುಗೆ ದೃಷ್ಟಿ ಹಾಕುತ್ತದೆ ಅಲ್ಲಿಗೆ ಹೋಗಬೇಕೆಂದು ಜೋಗಿ ಪುರುಷನ ಒರುವಾಗುತ್ತದೆ 🙏 ವರ್ಣಾರ ಬೂಡುವಿನಲ್ಲಿ ಎತ್ತುಗಳು ಇಲ್ಲದ ಕಾರಣ, ಬೂಡು ಅರಸರು(ಬಳ್ಳಾಕ್ಲು )ವರ್ಣಾರ ಬೀಮು ಎಂಬವನನ್ನು ಸುಬ್ರಮಣ್ಯಕ್ಕೆ ಎತ್ತುಗಳನ್ನು ತರಲು ಕಳುಹಿಸುತ್ತಾರೆ…

Read More

ಶಬರಿಮಲೆ ವಿವಾದ: ಹಳೆಯ ಪದ್ಧತಿ ಮುಂದುವರಿಸಲು ಅಧಿಕೃತ ನಿಲುವು

ಕೇರಳ : ಶಬರಿಮಲೆ ದೇವಸ್ಥಾನದಲ್ಲಿ ಅಸ್ತಿತ್ವದಲ್ಲಿರುವ ಹಳೆಯ ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಲಿದೆ ಎಂದು ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್‌ ತಿಳಿಸಿದ್ದಾರೆ.ದೇವಸ್ಥಾನದ ನಿರ್ವಹಣೆಯನ್ನು ನೋಡಿಕೊಳ್ಳುವ ಟ್ರಾವಂಕೂರ್ ದೇವಸ್ವಂ ಬೋರ್ಡ್ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನೀಡದ ಹಳೆ ಸಂಪ್ರದಾಯವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ. 2018ರಲ್ಲಿ ಮಹಿಳೆಯರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿದ್ದ ಸುಪ್ರಿಂ‌ ಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಪುನರ್‌ಪರಿಶೀಲನಾ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಕಳೆದ ತಿಂಗಳು ನ್ಯಾಯಾಲಯವು…

Read More

ಮಾರ್ಚ್ 5 ಕ್ಕೆ ಗೋ ನಂದಿ ಪರಿವಾರ ರಥಯಾತ್ರೆಗೆ ಚಾಲನೆ … !

ಮಂಗಳೂರು:ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿರುವ ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ.) ವತಿಯಿಂದ ಗೋ ನಂದಿ ಪರಿವಾರ ರಥಯಾತ್ರೆಯು ಅಡ್ಯಾರು ಕಟ್ಟೆಯಿಂದ ಮಾರ್ಚ್ 5 ಕ್ಕೆ ಉದ್ಘಾಟನೆಗೊಂಡು ಅಡ್ಯಾರಿನ ವೀರಾಂಜನೇಯ ದೇವಸ್ಥಾನದಲ್ಲಿ ಸಪ್ತಾಹದ ಆಚರಣೆಗೆ ಅಣಿಯಾಗಲಿದೆ ಎಂದು ಗೋಸೇವಾ ಗತಿವಿಧಿಯ ದಕ್ಷಿಣ ಪ್ರಾಂತ ಗೋ-ಸೇವಾ ಸಂಯೋಜಕ ಪ್ರವೀಣ್ ಸರಳಾಯ ತಿಳಿಸಿದರು ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಗೋ ನಂದಿ ಪರಿವಾರ ರಥಯಾತ್ರೆಯ ಪ್ರಮುಖ ಉದ್ದೇಶ ಗೋ ರಕ್ಷಣೆಯಾಗಿದೆ . ಗೋ…

Read More

ಬಿಜೈ ವಾರ್ಡ್‌ನಲ್ಲಿ ರಾಜ್ಯ ಕಾಲುವೆಗೆ ತಡೆಗೋಡೆ ನಿರ್ಮಾಣಕ್ಕೆ ರೂ.30 ಲಕ್ಷ: ಐವನ್ ಡಿ’ಸೋಜಾ ಸ್ಥಳ ಪರಿಶೀಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 31ನೇ ಬಿಜೈ ವಾರ್ಡ್‌ನ ಆನೆಗುಂಡಿ ಆಶ್ರಯ ರಸ್ತೆಯ ಬಳಿ ಹಾಗೂ ನಂದಗೋಕುಲ ಅಪಾರ್ಟ್‌ಮೆಂಟ್ ಸಮೀಪದ ರಾಜ್ಯ ಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗಾಗಿ ರೂ.30 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಅವರು ಇಂದು ಪಾಲಿಕೆಯ ಅಧಿಕಾರಿಗಳು ಹಾಗೂ ಪಕ್ಷದ ನಾಯಕರೊಂದಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಓವರ್‌ಟೇಕ್ ವೇಳೆ ಅಪಘಾತ: ಅಡ್ಯಾರು ನಿವಾಸಿ ಜಯರಾಮ ಮೃತ್ಯು

ಬಂಟ್ವಾಳ: ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ನಡೆದಿದೆ. ಅಡ್ಯಾರು ನಿವಾಸಿ ಜಯರಾಮ (65) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ಬಡಗುಂಡಿ ಎಂಬಲ್ಲಿ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಸವಾರನಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ‌ಸ್ಕೂಟರ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟ ಬಗ್ಗೆ…

Read More

ಮಂಗಳೂರು ವಿಮಾನ ಪ್ರಯಾಣಿಕರಿಗೆ ಶಾಕ್: ಗಲ್ಫ್ ಸಂಪರ್ಕ ತಾತ್ಕಾಲಿಕ ಸ್ಥಗಿತ

ಮಂಗಳೂರು : ಇಸ್ರೇಲ್-ಇರಾನ್ ಸಂಘರ್ಷದ ಕಾರಣ ಮಾ. 4ರ ವರೆಗೆ ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಣ ವಿಮಾನ ಸಂಚಾರವನ್ನು ರದ್ದು ಮಾಡಲಾಗಿದೆ. ಮಾ. 3ರ ಮಂಗಳೂರು-ದೋಹಾ (ಐಎಕ್ಸ್ 821), ದೋಹಾ-ಮಂಗಳೂರು (ಐಎಕ್ಸ್ 822), ಮಂಗಳೂರು-ದುಬೈ (ಐಎಕ್ಸ್813), ಮಾ.4ರ ದುಬೈ-ಮಂಗಳೂರು(ಐಎಕ್ಸ್ 814), ಮಾ.3ರ ಮಂಗಳೂರು-ಕುವೈಟ್ (ಐಎಕ್ಸ್ 851), ಮಾ.4ರ ಕುವೈಟ್-ಮಂಗಳೂರು (ಐಎಕ್ಸ್ 852), ಮಾ.3ರ ಮಂಗಳೂರು-ದಮ್ಮಾಮ್ (ಐಎಕ್ಸ್ 847), ಮಾ.4ರ ದಮ್ಮಾಮ್-ಮಂಗಳೂರು (ಐಎಕ್ಸ್ 848), ಮಾ.3ರ ಮಂಗಳೂರು-ಅಬುಧಾಬಿ, ಮಾ.4ರ ಅಬುಧಾಬಿ-ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ…

Read More

ಹೋಳಿ ಹಬ್ಬದ ವೇಳೆ ಗೋಮಾತೆಗೆ ಬಲವಂತವಾಗಿ ಮದ್ಯ ಕುಡಿಸಿದ ಕಟುಕ ಕುಡುಕರ ತಂಡ

ಹರಿಯಾಣ : ದೇಶಾದ್ಯಂತ ಜನರು ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವಾಗ ಹರಿಯಾಣದಲ್ಲಿ ಮದ್ಯದ ಅಮಲಿನಲ್ಲಿದ್ದ ಕೆಲವು ಯುವಕರ ತಂಡವೊಂದು ಮೃಗೀಯ ರೀತಿಯಲ್ಲಿ ವರ್ತಿಸಿದ ಘಟನೆ ನಡೆದಿದೆ, ಗೋಮಾತೆಯ ಬಾಯಿಯನ್ನು ಬಲವಂತವಾಗಿ ತೆರೆದು ಬಲವಂತವಾಗಿ ಮದ್ಯವನ್ನು ಸುರಿಯುತ್ತಿರುವುದು ಕಂಡುಬಂದಿದೆ. ಮದ್ಯದ ನಶೆಯಿಂದ ಹಸು ತತ್ತರಿಸುತ್ತಿದ್ದರೂ ಬಿಡದ ಕಿಡಿಗೇಡಿಗಳು, ಬಳಿಕ ಆ ಹಸುವನ್ನು ಎತ್ತಿನ ಬಂಡಿಗೆ ಕಟ್ಟಿ ಬಲವಂತವಾಗಿ ಓಡಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ ಗೋವಿಗೆ ಮದ್ಯ ಕುಡಿಸಿದ ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು ಆ ಹಸುವಿಗೆ ಗಾಡಿಯನ್ನು ಎಳೆಯುವಂತೆ…

Read More

ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವಕ್ಕೆ ಭವ್ಯ ಚಾಲನೆ

ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಬಲ್ಲಂಗುಡೇಲು ಶ್ರೀ ಪಾಡಾoಗರೆ ಭಗವತೀ ಕ್ಷೇತ್ರ ಪಟ್ಟತ್ತೂರುವಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಳಿಯಾಟ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಾರ್ಚ್ 1ರಿಂದ ಪ್ರಾರಂಭವಾಗುವ ಕಳಿಯಾಟ ಉತ್ಸವವು ಮಾರ್ಚ್ 08ರ ವರೆಗೆ ನಡೆಯಲಿದೆ . ತರುವಾಯ ನಿನ್ನೆ ಬೆಳಗ್ಗೆ 5:30ಕ್ಕೆ ಕೆಂಡಸೇವೆ , ಬಲಿ ಮೂರ್ತಿದರ್ಶನ, 9:00ಕ್ಕೆ ಧ್ವಜಾರೋಹಣ ಮದ್ಯಾಹ್ನ 12:00ರಿಂದ ಕ್ಷೇತ್ರದ ವತಿಯಿಂದ ಅನ್ನದಾನ ಸೇವೆ ನಡೆಯಿತು,ಮಧ್ಯಾಹ್ನ 2:00ಗೆ “ಚೀರುoಭ ಭಗವತಿ ” ಭಜನಾ ತಂಡ ಉಳ್ಳಾಲ ಇವರಿಂದ ಭಜನೆ…

Read More

ಬ್ರಹ್ಮರಕೋಟ್ಲು ಟೋಲ್ ಗೇಟ್ ಮುಚ್ಚಲು ಬಂಟ್ವಾಳದಲ್ಲಿ ಭಾರೀ ಧರಣಿ

ಬಂಟ್ವಾಳ: ಕಳೆದ 23 ವರ್ಷಗಳಿಂದ ಟೋಲ್ ಸಂಗ್ರಹಿಸುತ್ತಿರುವ ,ಅಂತರದ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ,ಮಾಜಿ ಸಚಿವ ಬಿ.ರಮಾನಾಥ ರೈ ನೇತ್ರತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಧರಣಿ ನಡೆಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ನಿಯಮಬಾಹಿರವಾದ ,ಕಾನೂನು ಬಾಹಿರವಾದ ಸುಲಿಗೆಯ ಕೇಂದ್ರವಾಗಿರುವ ಬ್ರಹ್ಮರಕೋಟ್ಲು ಟೋಲ್ ತೆರವು ಹೋರಾಟಕ್ಕೆ ಎಲ್ಲರ ಸಹಮತವಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.ಟೋಲ್ ತೆರವು ಮಾಡಿ ಎಂಬುದು ನಮ್ಮ ಪೂರ್ಣಪ್ರಮಾಣದ ನ್ಯಾಯಯುತವಾದ ಬೇಡಿಕೆಯಾಗಿದೆ….

Read More
error: Content is protected !!