ಕೆನರಾ ಕಾಲೇಜಿಗೆ ʻಸ್ವಾಯತ್ತ’ ಮಾನ್ಯತೆ, ಉದ್ಯೋಗಾಧಾರಿತ ಹೊಸ ಕೋರ್ಸ್‌ಗಳು ಶೀಘ್ರದಲ್ಲಿ ಆರಂಭ
ಮಂಗಳೂರು: ಕಳೆದ ಐದು ದಶಕಗಳಿಂದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿರುವ Canara Collegeಗೆ ‘ಸ್ವಾಯತ್ತತೆ’ (Autonomy) ಸ್ಥಾನಮಾನ ಲಭಿಸಿದ್ದು, 2025-26ನೇ ಶೈಕ್ಷಣಿಕ ವರ್ಷದಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದರು. ನಗರದ The Ocean Pearl ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಹರ್ಷ ವ್ಯಕ್ತಪಡಿಸಿದ Canara High School Association ಅಧ್ಯಕ್ಷ ಡಿ. ವಾಸುದೇವ ಕಾಮತ್, “1973ರಲ್ಲಿ ಸ್ಥಾಪನೆಯಾದ ನಮ್ಮ ಕಾಲೇಜು ಇಂದು Mangalore University ವ್ಯಾಪ್ತಿಯಲ್ಲಿ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ…
