ವಿನೂತನ ಕಾರ್ಯಯೋಜನೆ ಯೊಂದಿಗೆ ನೂತನ ಶೈಕ್ಷಣಿಕ ವರ್ಷ.

2025-26 ನೇ ಸಾಲಿನ ನೂತನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ನೈತಿಕತೆ ಮತ್ತು ಸನ್ನಡತೆಯ ಶಿಕ್ಷಣಕ್ಕೆ ಸರಕಾರ ಮುಂದಾಗಿದ್ದು ನೂತನ ಕಾರ್ಯ ಯೋಜನೆ ಯನ್ನು ಜಾರಿಗೆ ತರಲಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಾಗಿ ಶಾಲಾ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಡ್ರಗ್ಸ್ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಹೆಚ್ಚಾಗಿ ಬಲಿಯಾಗಿ ಆದರ್ಶವಾಗಿರಬೇಕಾದ ವಯಸ್ಸಿನಲ್ಲಿ ತನ್ನ ಜೀವನವನ್ನೇ ಬಲಿ ಕೊಟ್ಟ ಅದೆಷ್ಟೋ ಪ್ರಸಂಗಗಳು ನಡೆದಿದೆ.
ಈ ನಿಟ್ಟಿನಲ್ಲಿ 2025 -26 ನೇ ಸಾಲಿನ ನೂತನ ಶೈಕ್ಷಣಿಕ ವರ್ಷದಲ್ಲಿ ಕೇರಳ ಶಿಕ್ಷಣ ಇಲಾಖೆಯೂ ಇದೆ ಮೊದಲ ಬಾರಿಗೆ ಶೈಕ್ಷಣಿಕ ವರ್ಷ ಆರಂಭದಲ್ಲಿ ಮಕ್ಕಳಿಗೆ ನೈತಿಕ ಮತ್ತು ಸನ್ನಡತೆಯ ಶಿಕ್ಷಣ ನೀಡಲು ನಿರ್ಧರಿಸಿದೆ. ಇದರ ಅಂಗವಾಗಿ ಶಾಲಾ ಆರಂಭದಲ್ಲಿ ಪಠ್ಯಪುಸ್ತಕದ ಪಾಠದ ಬದಲಾಗಿ ಮೊದಲ 15 ದಿನ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯದ ಬಗ್ಗೆ ತರಗತಿ ನಡೆಸಲು ನಿರ್ಧರಿಸಿದೆ. ಮೊದಲ ಎರಡು ವಾರ ಅಂದರೆ 15 ದಿನ ಪಠ್ಯಪುಸ್ತಕದ ಪಾಠವನ್ನು ಹೇಳದೆ ಜೀವನ ಮೌಲ್ಯ ಮತ್ತು ನೈತಿಕತೆಯ ಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ.


ಇದು ಒಂದರಿಂದ ಹತ್ತನೇ ತರಗತಿವರೆಗೆ ಅನ್ವಯವಾಗಲಿದೆ ಭವಿಷ್ಯದ ಪ್ರಜೆಗಳಾಗಬೇಕಾದ ವಿದ್ಯಾರ್ಥಿಗಳಲ್ಲಿ ಅಮಲು ಪದಾರ್ಥದ ಬಳಕೆಯ ದುಷ್ಪರಿಣಾಮದ ಬಗ್ಗೆ ಅತಿಯಾದ ಮೊಬೈಲ್ ಬಳಕೆ, ಹಿಂಸಾ ಪ್ರವೃತ್ತಿ, ಶುಚಿತ್ವ, ಭಾವನೆಗಳ ನಿಯಂತ್ರಣ, ಕಾನೂನು ಪರಿಪಾಲನೆ, ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವುದೇ ಇದರ ಉದ್ದೇಶವಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ರೂಪರೇಷೆ ತಯಾರಿಸಿದ್ದು ಪೊಲೀಸ್, ಅಬಕಾರಿ ಇಲಾಖೆ, ಮಕ್ಕಳ ಹಕ್ಕು ಗಳ ಆಯೋಗ, ಸಮಾಜ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್, ವನಿತಾ ಶಿಶು ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಈ ಕಾರ್ಯಯೋಜನೆ ಅನುಷ್ಠಾನಗೊಳ್ಳಲಿದೆ. ಈ ರೀತಿಯಾಗಿ ವಿದ್ಯಾರ್ಥಿಗಳುನೇರವಾಗಿ ಪಾಠಗಳಿಗೆ ಹೋಗದೆ ಆರಂಭದಲ್ಲಿ ನೈತಿಕ ಶಿಕ್ಷಣದ ಪಾಠವನ್ನು ಕೇಳಲಿದ್ದಾರೆ. ಹೈಯರ್ ಸೆಕೆಂಡರಿ ವಿಭಾಗದಲ್ಲಿ ಇರುವ ವಿವಿಧ ಕ್ಲಬ್ ಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ಕಾಣುವ ಪರೀಕ್ಷಾ ಭಯ, ಆತ್ಮಹತ್ಯಾ ಚಿಂತನೆ, ತಿಳುವಳಿಕೆ ಮೂಡಿಸುವ ಕಾರ್ಯವು ನಡೆಯಲಿದೆ. ಅಂತೂ ಶಿಕ್ಷಣ ಇಲಾಖೆಯ ಈ ಕಾರ್ಯಯೋಜನೆ ನಿಜಕ್ಕೂ ಶ್ಲಾಘನೀಯವಾದದ್ದು.


ಶಿಕ್ಷಣ ಇಲಾಖೆಯ ಈ ರೀತಿಯ ನೂತನ ಕಾರ್ಯ ಯೋಜನೆ ಯಾವರೀತಿ ಯಾಗಿ . ವಿದ್ಯಾರ್ಥಿಗಳ ಮೇಲೆ ಪರಿಣಾಮಕಾರಿಯಾಗಬಹುದೆಂಬುದನ್ನು ಕಾದು ನೋಡಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!