ಫೆ 10 ರಿಂದ ಮಾರ್ಚ್ 10 ರ ತನಕ ಎಸ್‌ಡಿಪಿಐ ಸದಸ್ಯತ್ವ ಅಭಿಯಾನ: ಜನಸಾಮಾನ್ಯರ ಧ್ವನಿಗೆ ಶಕ್ತಿ ನೀಡಲು ಎಸ್‌ಡಿಪಿಐ ಸೇರಿ : ನವಾಝ್ ಕಟ್ಟೆ ಕರೆ
ಮಂಗಳೂರು: ದೇಶದಲ್ಲಿ ಶೋಷಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಧ್ವನಿಯಾಗಿ ನಿರಂತರ ಹೋರಾಟ ನಡೆಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷವು ಫೆಬ್ರವರಿ 10 ರಿಂದ ಮಾರ್ಚ್ 10 ರವರೆಗೆ ಎಸ್‌ಡಿಪಿಐ ಸೇರೋಣ ಜನ ಸಾಮಾನ್ಯರ ಧ್ವನಿಗೆ ಶಕ್ತಿ ನೀಡೋಣ ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2009ರಲ್ಲಿ ಪಕ್ಷ ಸ್ಥಾಪನೆಯಾದ ದಿನದಿಂದಲೂ ಎಸ್‌ಡಿಪಿಐ ಕೇವಲ ಅಧಿಕಾರಕ್ಕಾಗಿ ರಾಜಕಾರಣ…
