Avatar

NAMMA MEDIA 24X7

ರೇಷನ್ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕಾಸರಗೋಡಿನಲ್ಲಿ ಧರಣಿ

ಕಾಸರಗೋಡು : ರೇಷನ್ ವಲಯದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿಯೇಷನ್ ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಯಿತು. ಉದುಮ ಶಾಸಕ ಕೆ. ನೀಲಕಂಠನ್ ಪ್ರತಿಭಟನೆಯನ್ನು ಉದ್ಘಾಟಿಸಿದರು. ​ಡಿಬಿಟಿ ಪದ್ಧತಿ ಹಾಗೂ ಎಎವೈ ಕಾರ್ಡ್‌ದಾರರ ಧಾನ್ಯ ಕಡಿತದ ಯತ್ನವನ್ನು ಕೈಬಿಡಬೇಕು, ಒಬ್ಬ ವ್ಯಕ್ತಿಗೆ ತಿಂಗಳಿಗೆ 13.5 ಕಿಲೋ ಆಹಾರ ಧಾನ್ಯ ನೀಡಬೇಕು, ಸೀಮೆಎಣ್ಣೆ-ಸಕ್ಕರೆ ಕಡಿತ ಹಿಂಪಡೆಯಬೇಕು ಮತ್ತು ಎಲ್ಲಾ ಕಾರ್ಡ್‌ದಾರರಿಗೆ 10…

Read More

ದೆಹಲಿಯ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯಲ್ಲಿ ಮುಸ್ಲಿಂ ಲೀಗ್‌ಗೆ ಕಡೆಗಣನೆ: ಕಾಂಗ್ರೆಸ್ ನಾಯಕರಿಂದಲೂ ಅಸಮಾಧಾನ

ತಿರುವನಂತಪುರಂ: ದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯಲ್ಲಿ ಮುಸ್ಲಿಂ ಲೀಗ್‌ಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂಬ ದೂರಿಗೆ ಕಾಂಗ್ರೆಸ್ ನಾಯಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಲೀಗ್ ಪ್ರತಿನಿಧಿಗೆ ಮಾತನಾಡಲು ಹೈಕಮಾಂಡ್ ಅವಕಾಶ ನೀಡಿಲ್ಲ ಎಂಬುದು ಪ್ರಮುಖ ಆರೋಪವಾಗಿದೆ.ಹೈಕಮಾಂಡ್ ವಿರುದ್ಧ ಮುಸ್ಲಿಂ ಲೀಗ್ ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಶಾಸಕ ಕೆ.ಪಿ. ನೌಶಾದ್ ಅಲಿ ಕೂಡ ಬೆಂಬಲ ಸೂಚಿಸಿದ್ದಾರೆ. ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನ ಅತ್ಯಂತ ಹಳೆಯ ಮಿತ್ರಪಕ್ಷ ಮುಸ್ಲಿಂ ಲೀಗ್ ಎಂದು ನೌಶಾದ್ ಅಲಿ ಹೇಳಿದ್ದಾರೆ. ಮೈತ್ರಿಕೂಟ…

Read More

ಪಾಂಗಪ್ಪಾರದಲ್ಲಿ ಪ್ಲಸ್ ಒನ್ ವಿದ್ಯಾರ್ಥಿ ಕೊಲೆ ಪ್ರಕರಣ: ಯುವತಿ ಸೇರಿದಂತೆ ಮೂವರ ಬಂಧನ

ತಿರುವನಂತಪುರಂ: ಪಾಂಗಪ್ಪಾರದಲ್ಲಿ ಪ್ಲಸ್ ಒನ್ ವಿದ್ಯಾರ್ಥಿ ಅಭಿರಾಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಡಿಯಲ್ಲಿದ್ದ ಯುವತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಣಕ್ಕಾಡ್ ನಿವಾಸಿ, ಐಟಿಐ ವಿದ್ಯಾರ್ಥಿನಿ ಅನಂದ, ಶ್ರೀಕಾರ್ಯಂ ನಿವಾಸಿ ಉಮರ್ ಹಾಗೂ ಅಭಿರಾಮ್‌ನ ಸ್ನೇಹಿತನಾಗಿರುವ 17 ವರ್ಷದ ಬಾಲಕನ ಬಂಧನವನ್ನು ದಾಖಲಿಸಲಾಗಿದೆ. ಅಭಿರಾಮ್‌ನನ್ನು ಘಟನಾ ಸ್ಥಳಕ್ಕೆ ಕರೆಸಿಕೊಳ್ಳಲು ಅನಂದಳ ಇನ್‌ಸ್ಟಾಗ್ರಾಂ ಖಾತೆಯನ್ನು ಬಳಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಆರಂಭಿಕ ತನಿಖೆಯಲ್ಲಿ ಲೋಪಗಳಾಗಿವೆ ಎಂದು ಅಭಿರಾಮ್‌ನ ತಂದೆ ಮಧುಕುಮಾರ್ ಆರೋಪಿಸಿದ್ದಾರೆ. ಅಭಿರಾಮ್‌ನ ಮರಣೋತ್ತರ ಪರೀಕ್ಷೆ ಶೀಘ್ರದಲ್ಲೇ…

Read More

ಬೈಕ್ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ 17 ವರ್ಷದ ವಿದ್ಯಾರ್ಥಿ: ಎಂಟು ಅಂಗಾಂಗಗಳ ದಾನಕ್ಕೆ ಕುಟುಂಬದ ನಿರ್ಧಾರ

ತಿರುವನಂತಪುರಂ: ರಾಜ್ಯದಲ್ಲಿ ಮತ್ತೊಂದು ಅಂಗಾಂಗ ದಾನ ಕಾರ್ಯ ನಡೆದಿದೆ. ಬೈಕ್ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ 17 ವರ್ಷದ ವಿದ್ಯಾರ್ಥಿಯ ಎಂಟು ಅಂಗಾಂಗಗಳನ್ನು ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ತಿರುವನಂತಪುರಂನಿಂದ ಏರ್ ಆಂಬುಲೆನ್ಸ್ ಮೂಲಕ ಹೃದಯವನ್ನು ಕೊಚ್ಚಿಗೆ ಸಾಗಿಸಲಾಗುತ್ತದೆ. ತಿರುವನಂತಪುರಂ ಕರಮನ ನಿವಾಸಿ, ಪಿಯುಸಿ (ಪ್ಲಸ್ ಟು) ವಿದ್ಯಾರ್ಥಿ ರುದ್ರೇಶ್ ಎಸ್.ಆರ್. ಅವರ ಹೃದಯವನ್ನು ದಾನ ಮಾಡಲಾಗುತ್ತಿದೆ. ತಿರುವನಂತಪುರಂನ ಪಿಆರ್‌ಎಸ್ ಆಸ್ಪತ್ರೆಯಿಂದ ಕೊಚ್ಚಿಯ ಲಿಸಿ ಆಸ್ಪತ್ರೆಗೆ ಹೃದಯವನ್ನು ಕೊಂಡೊಯ್ಯಲಾಗುತ್ತದೆ. ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 43 ವರ್ಷದ ವ್ಯಕ್ತಿಗೆ…

Read More

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿ 95 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸಂಘಕ್ಕೆ ಮತ್ತೊಂದು ಗರಿ; ಜಗದೀಶ್ ಅಂಚನ್ ಹರ್ಷ

ಮಂಗಳೂರು: ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಸಮರ್ಥ ಹಾಗೂ ದಕ್ಷ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನೌಕರರ ಸಹಕಾರ ಸಂಘವು ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸುಮಾರು 95 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸಂಘವು ಸಹಕಾರ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಗೆ ಈ ಗೌರವ ಲಭಿಸಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸತತ ಒಂಬತ್ತು ಬಾರಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವ…

Read More

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಪಂಚಾಯಿತಿ, ನಗರಸಭೆಗಳು ಬಲಿ; ಬಂಡಲ್ ಬಡಾಯಿ ಬಿಟ್ಟು ಅಭಿವೃದ್ಧಿ ಮಾಡಿ, ಮಿತಿಮೀರಿ ಮಾತನಾಡಿದರೆ ಮನೆ ಮುಂದೆ ಪ್ರತಿಭಟನೆ: ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆಯಲ್ಲಿ ಶಾಸಕ ಅಶೋಕ್ ರೈ ವಿರುದ್ಧ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಖಡಕ್ ವಾಗ್ದಾಳಿ

ಪುತ್ತೂರು: ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ನೆಪವೊಡ್ಡಿ ಅಧಿಕಾರಕ್ಕೆ ಬಂದು ಬಡವರ ರಕ್ತ ಹೀರುತ್ತಿದ್ದು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣವಾಗಿ ದಿವಾಳಿ ಎಬ್ಬಿಸಿದೆ. ಇನ್ನೊಂದೆಡೆ ಪುತ್ತೂರು ಶಾಸಕರು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಬಂಡಲ್ ಬಡಾಯಿ, ರೀಲ್ಸ್ ಹಾಗೂ ಬಿಜೆಪಿಯ ಹಿರಿಯರನ್ನು ಏಕವಚನದಲ್ಲಿ ನಿಂದಿಸುವ ಚಾಳಿ ಮುಂದುವರಿಸಿದರೆ ಅವರ ಮನೆ ಮುಂದೆಯೇ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ನೇರ ಎಚ್ಚರಿಕೆ…

Read More

ಎ.ಕೆ.ಪಿ.ಎ ವೆಸ್ಟ್ ಯುನಿಟ್ ವತಿಯಿಂದ ನವಂಬರ್ 1 ಕೇರಳಪಿರವಿ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (AKPA) ಕಾಸರಗೋಡು ವೆಸ್ಟ್ ಯುನಿಟ್ ನೇತೃತ್ವದಲ್ಲಿ ಕೇರಳಪಿರವಿ ದಿನಾಚರಣೆಯನ್ನು ಆಯೋಜಿಸಲಾಯಿತು. ಯುನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ಕಲಾವಿದ ಶ್ರೀ. ಕುಲ್ಸು ಅಬ್ದುಲ್ಲಾ ಅವರನ್ನು ಸನ್ಮಾನಿಸಲಾಯಿತು. 1973 ರಿಂದ ಕಾಸರಗೋಡಿನ ಕುಲ್ಸು ಆರ್ಟ್ಸ್ ಸಂಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕುಲ್ಸು ಅಬ್ದುಲ್ಲಾ ಅವರು ನಾಟಕ-ರಂಗಸಜ್ಜಿಕೆ ಕ್ಷೇತ್ರಗಳಲ್ಲಿ ನೀಡಿದ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು ಎಕೆಪಿಎ ಕಾಸರಗೋಡು ವಲಯ ಉಪಾಧ್ಯಕ್ಷ…

Read More

ಐದು ದಶಕಗಳ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇವೆಗೆ ಸಂದ ಗೌರವರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಿಟ್ಟಣ್ಣ ರೈ ಅವರಿಗೆ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅಭಿನಂದನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಮೂರ್ಜೆಬೆಟ್ಟು ನಿವಾಸಿ, ಹಿರಿಯ ಸಾಮಾಜಿಕ ಹಾಗೂ ರಾಜಕೀಯ ಮುಖಂಡರಾದ 83 ವರ್ಷದ ಬಾಲಕೃಷ್ಣ ರೈ (ಕಿಟ್ಟಣ್ಣ ರೈ) ಅವರು 2026-27ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಅವರ ಸುದೀರ್ಘ ಸೇವಾ ಜೀವನಕ್ಕೆ ಸಂದ ಗೌರವವಾಗಿದೆ. ಬಿ.ಎ. ಪದವೀಧರರಾಗಿರುವ ಕಿಟ್ಟಣ್ಣ ರೈ ಅವರು ರಾಜ್ಯಮಟ್ಟದ ವಾಲಿಬಾಲ್ ಆಟಗಾರರಾಗಿಯೂ ಗುರುತಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಮಾರು 50–60 ವರ್ಷಗಳ ಸುದೀರ್ಘ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಜೀವನ ಹೊಂದಿರುವ ಅವರು…

Read More

ಕಾಸರಗೋಡು ಕನ್ನಡ ಭವನದಲ್ಲಿ ಮುರಳಿ ಪಾರೆಕಟ್ಟೆಗೆ ಕನ್ನಡ ರಾಜ್ಯೋತ್ಸವ ಗೌರವ

ಕಾಸರಗೋಡು: ಕನ್ನಡ ಸಂಘ (ನೋಂ), ವಾಣಿಜ್ಯ ತೆರಿಗೆಗಳ ಇಲಾಖೆ, ಬೆಂಗಳೂರು ಹಾಗೂ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಸಹಯೋಗದಲ್ಲಿ ಕಾಸರಗೋಡಿನ ಕನ್ನಡ ಭವನದ ವೇದಿಕೆಯಲ್ಲಿ ನವೆಂಬರ್ 1ರಂದು ಆಯೋಜಿಸಲಾದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸಂಘಟಕ ಮುರಳಿ ಪಾರೆಕಟ್ಟೆ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಭವನದ ಸಂಸ್ಥಾಪಕ ಡಾ. ವಾಮನ್‌ರಾವ್ ಬೇಕಲ್, ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಟಿ.ಆರ್. ಕೃಷ್ಣಕುಮಾರ್, ಪದ್ಮಾಕರ ಆರ್. ಕುಲಕರ್ಣಿ, ರಮೇಶ್ ಕುಮಾರ್, ವಿ. ಕುಮಾರ್, ಸಹಾಯಕ ಆಯುಕ್ತರಾದ ಕೆ….

Read More

ನಾಳೆಯಿಂದ ಕೇರಳದಲ್ಲಿ ಖಾಸಗಿ ಬಸ್ ಮುಷ್ಕರ; ಪ್ರಿಯದರ್ಶಿನಿ ಯೋಜನೆ ವಿರುದ್ಧ ಬಸ್ ಮಾಲೀಕರ ಸಮರ

ತಿರುವನಂತಪುರಂ: ಪ್ರಿಯದರ್ಶಿನಿ ಯೋಜನೆಯನ್ನು ವಿರೋಧಿಸಿ ಖಾಸಗಿ ಬಸ್ ಮಾಲೀಕರು ಘೋಷಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಳೆಯಿಂದ ಆರಂಭವಾಗಲಿದೆ. ಆರು ಬಸ್ ಮಾಲೀಕರ ಸಂಘಟನೆಗಳನ್ನು ಒಳಗೊಂಡ ಜಂಟಿ ಹೋರಾಟ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಪ್ರಿಯದರ್ಶಿನಿ ಯೋಜನೆಯ ಅನುಷ್ಠಾನದಿಂದ ಖಾಸಗಿ ಬಸ್‌ಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಸುಳಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಸ್ ಮಾಲೀಕರು ಆರೋಪಿಸಿದ್ದಾರೆ. ಸರ್ಕಾರಿ ಬಸ್‌ಗಳ ಮಾದರಿಯಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಬೇಕು ಹಾಗೂ ಇದರಿಂದ ಉಂಟಾಗುವ ಆರ್ಥಿಕ…

Read More
error: Content is protected !!