Avatar

NAMMA MEDIA 24X7

ಮಂಗಳೂರಿನಲ್ಲಿ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆ

ಮಂಗಳೂರು, ಮೇ 23: ಬಡತನ ನಿರ್ಮೂಲನೆ ಹಾಗೂ ಸಮಾಜದಲ್ಲಿ ಸಮಾನತೆ ಸಾಧಿಸಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಹೇಳಿದರು. ಮೇರಿಹಿಲ್‌ನ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಲ್ಯಾಂಡ್ ಲಿಂಕ್ಸ್ ಸಂಸ್ಥೆಯಿಂದ ನಿರ್ಮಿಸಲಾದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಶಿಕ್ಷಣ, ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಕೊಡುಗೆ ಶ್ಲಾಘನೀಯವಾಗಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ…

Read More

ಹಕ್ಕುಪತ್ರಕ್ಕಾಗಿ ಧರಣಿ: ಮೇ 26ರಂದು ಬಗರ್ ಹುಕುಂ ಸಭೆಯಲ್ಲಿ ವಿತರಣೆ ಭರವಸೆ

ಪುತ್ತೂರು, ಮೇ 23: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂರು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕುಪತ್ರ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಧರಣಿ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿಯ ಅಧ್ಯಕ್ಷ ಗಿರಿಧರ್ ನಾಯ್ಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ ಹಾಗೂ ಪುತ್ತೂರು ಮತ್ತು ಬಂಟ್ವಾಳ ಬಿಜೆಪಿ…

Read More

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಂಗಳೂರಿನಲ್ಲಿ ಬಂಧನ

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರಲ್ಲಿ ಬಂಧಿಸಲಾಗಿದೆ. ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಕ್ರಂ @ ಬೋಜ ಅಕ್ರಂ, ಬಂಧಿತ ವ್ಯಕ್ತಿ. ಉಪ್ಪಿನಂಗಡಿ ಠಾಣಾ ಅಕ್ರ:158/2015 ಕಲಂ:457, 380 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಕ್ರಂನನ್ನು ನಿನ್ನೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್ ಐ ಕೌಶಿಕ್ ಬಿಸಿ, ಸಿಬ್ಬಂದಿಯವರಾದ ಶಿವರಾಮ್ ರೈ, ಮಹದೇವ ರವರು ಮಂಗಳೂರಿನ ಪಣಂಬೂರಿನಲ್ಲಿ ದಸ್ತಗಿರಿ ಮಾಡಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ…

Read More

ಕೋಕ್ ಸಲ್ಪರ್ ಘಟಕ ವಿರುದ್ಧ ಹೋರಾಟ ತೀವ್ರ

ಹಸಿರು ವಲಯ ನಿರ್ಮಾಣ, ಪುನರ್ವಸತಿಗೆ ಆಗ್ರಹಿಸಿ 6ನೇ ದಿನಕ್ಕೂ ಧರಣಿ ಮುಂದುವರಿಕೆ ಮಂಗಳೂರು: ಎಂಆರ್‌ಪಿಎಲ್‌ನ ಕೋಕ್ ಸಲ್ಪರ್ ಘಟಕದಿಂದ ಉಂಟಾಗುತ್ತಿರುವ ಗಂಭೀರ ಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜೋಕಟ್ಟೆ, ಕೆಂಜಾರು ಹಾಗೂ ಕಳವಾರು ಭಾಗದ ಗ್ರಾಮಸ್ಥರು ನಡೆಸುತ್ತಿರುವ ಹಗಲು-ರಾತ್ರಿ ಧರಣಿ ಆರನೇ ದಿನಕ್ಕೂ ಮುಂದುವರಿದಿದೆ. ಕೋಕ್ ಸಲ್ಪರ್ ಘಟಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕ ಹೋರಾಟ ಸಮಿತಿ, ಜನವಸತಿ ಪ್ರದೇಶದಲ್ಲಿ ತಕ್ಷಣ ಹಸಿರು ವಲಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಸಂತ್ರಸ್ತರಿಗೆ ಪುನರ್ವಸತಿ…

Read More

ಬಕ್ರೀದ್ ಹಿನ್ನೆಲೆ: ಗೋವಂಶ ಅಕ್ರಮ ಸಾಗಾಣಿಕೆ ತಡೆಗೆ ವಿಹಿಂಪ ಮನವಿ

ಮಂಬರಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಾನೂನುಬಾಹಿರವಾಗಿ ಗೋವಂಶದ ಸಾಗಾಣಿಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋವಂಶ ಬಲಿ ಬಲಿ(ಕುರ್ಬಾನಿ) ನಡೆಯುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಜಾನುವಾರು ಸಾಗಾಟ ನಿಯಮಾವಳಿ 2021 ಅನ್ವಯ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಪುತ್ತೂರು ಗ್ರಾಮಾಂತರ ವತಿಯಿಂದ ವತಿಯಿಂದ ಇಂದು ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…

Read More

ನಿರ್ಮಾಣ ಹಂತದ ಬಾವಿಯ ದಂಡೆಯ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವು

ಉಡುಪಿ: ನಿರ್ಮಾಣ ಹಂತದ ಬಾವಿ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಮಲ್ಪೆ ಕೊಡವೂರು ಸಮೀಪದ ಉದ್ದಿನಹಿತ್ಲು ಎಂಬಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದೆ. ಕಾರ್ಮಿಕ ಕೊಪ್ಪಳ ಮೂಲದ ರಮೇಶ್ (25) ಮೃತದುರ್ದೈವಿ. ಕಾರ್ಮಿಕರು ಬಾವಿಯಿಂದ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಬಿಡುವ ವೇಳೆ ರಮೇಶ ಬಾವಿಯಲ್ಲಿ ಮಣ್ಣು ತೆಗೆಯುತ್ತಿರುವಾಗ ಬಾವಿಯ ದಂಡೆಯ ಮಣ್ಣು ಒಮ್ಮೆಲೆ ಕುಸಿದಿದ್ದು, ಇದರಿಂದ ರಮೇಶ ಅವರ ಮೈಮೇಲೆ ಮಣ್ಣು ಬಿದ್ದು, ಅವರು ಮಣ್ಣಿನಲ್ಲಿ…

Read More

ಕಟೀಲು ಯಕ್ಷಗಾನ ಮೇಳಗಳ 189 ದಿನಗಳ ತಿರುಗಾಟ ಅಂತಿಮ ಹಂತಕ್ಕೆ

ಕಟೀಲು: ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಪ್ರವರ್ತಿತ ಏಳು ಯಕ್ಷಗಾನ ಮೇಳಗಳ 189 ದಿನಗಳ ತಿರುಗಾಟ ಇದೀಗ ಅಂತಿಮ ಹಂತ ತಲುಪಿದೆ. 2025ರ ನವೆಂಬರ್ 17ರಂದು ಆರಂಭಗೊಂಡ ಮೇಳಗಳ ತಿರುಗಾಟವು 2026ರ ಮೇ 25ರ ಪತ್ತನಾಜೆಯವರೆಗೆ ನಡೆಯಲಿದ್ದು, ಒಟ್ಟು 1323 ಬಯಲಾಟ ಪ್ರದರ್ಶನಗಳು ದಾಖಲಾಗಲಿವೆ. ಮೇ 26ರಂದು ಕಟೀಲು ಕ್ಷೇತ್ರದಲ್ಲಿ ಏಳು ಮೇಳಗಳ ಸೇವೆಯಾಟದೊಂದಿಗೆ ಮೇಳ ಒಳಗಾಗುವ ಹಾಗೂ ಗೆಜ್ಜೆ ಬಿಚ್ಚುವ ಸಂಪ್ರದಾಯ ದೇವಿಯ ಸನ್ನಿಧಿಯಲ್ಲಿ ನೆರವೇರಲಿದೆ. ಭಾನುವಾರದ ವೇಳೆಗೆ ಏಳು ಮೇಳಗಳ ‘ಶ್ರೀ ದೇವೀ ಮಹಾತ್ಮೆ’…

Read More

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಮೂಲಸೌಕರ್ಯ ಕೊರತೆ …… ! ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಕೊರತೆ; ವಾಹನ ದಟ್ಟಣೆ ಸಮಸ್ಯೆ ಗಂಭೀರ: ಅಝೀಝ್ ಪರ್ತಿಪಾಡಿ

ಮಂಗಳೂರು, ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಅದರ ಎದುರು ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ವಾಹನ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ (ರಿ.) ಮಂಗಳೂರು ಅಧ್ಯಕ್ಷ ಅಝೀಝ್ ಪರ್ತಿಪಾಡಿ ಆರೋಪಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎದುರು ನಾಲ್ಕು ದಿಕ್ಕುಗಳಿಂದ ರಸ್ತೆ ಸಂಪರ್ಕವಿದ್ದರೂ, ಸಮರ್ಪಕ ಸರ್ಕಲ್‌ ಅಥವಾ ಸಂಚಾರ ನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ವಾಹನ ದಟ್ಟಣೆ…

Read More

ಮುಂಗಾರು ಎಚ್ಚರಿಕೆ: ವಾಹನ ಚಾಲಕರಿಗೆ ಬಸ್ ಮಾಲಕರ ಸಂಘದ ಸುರಕ್ಷತಾ ಸಲಹೆ

ಮಂಗಳೂರು, ಮೇ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಗ್ರೀಸ್, ಆಯಿಲ್, ಡೀಸೆಲ್‌ ಸೇರಿದಂತೆ ಜಾರುವ ಪದಾರ್ಥಗಳಿಂದ ಅಪಘಾತಗಳ ಸಾಧ್ಯತೆ ಹೆಚ್ಚಿರುವುದರಿಂದ ವಾಹನ ಚಾಲಕರು ಮತ್ತು ಪ್ರಯಾಣಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ (ರಿ.) ಮಂಗಳೂರು ಮನವಿ ಮಾಡಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ, ಮಳೆಯ ಸಮಯದಲ್ಲಿ ರಸ್ತೆಗಳಲ್ಲಿ ಹೊಂಡಗಳು, ಜಾರಿ ಪ್ರದೇಶಗಳು ಹಾಗೂ ಇತರೆ ಅಡೆತಡೆಗಳು…

Read More

ಮರೆತವರ ಮಡಿಲಲ್ಲಿ ಮರೆಯಾಗುತ್ತಿದೆ ಬಂಗ್ರ ಮಂಜೇಶ್ವರ: ಅಭಿವೃದ್ಧಿಗಾಗಿ ಎಚ್ಚೆತ್ತುಕೊಳ್ಳುವುದೇ ಆಡಳಿತ?

​ಮಂಜೇಶ್ವರ: ಭವ್ಯ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಕೋಮು ಸೌಹಾರ್ದದ ಪ್ರತೀಕವಾಗಿರುವ ‘ಬಂಗ್ರ ಮಂಜೇಶ್ವರ’ ಇಂದು ಅಭಿವೃದ್ಧಿಯ ದೃಷ್ಟಿಯಿಂದ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ದಶಕಗಳಿಂದಲೂ ಇಲ್ಲಿನ ಜನಾಂಗದ ಆಶೋತ್ತರಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಸುಳಿಯಲ್ಲಿ ಸಿಲುಕಿ ನಲುಗುತ್ತಿವೆ. ​ಐತಿಹಾಸಿಕ ಹಿರಿಮೆ ಮತ್ತು ಸಾಂಸ್ಕೃತಿಕ ಸಂಪತ್ತು​ಬಂಗ್ರ ಮಂಜೇಶ್ವರವು ಕೇವಲ ಒಂದು ಪ್ರದೇಶವಲ್ಲ, ಇದೊಂದು ಇತಿಹಾಸದ ಭಂಡಾರ. ಇಲ್ಲಿನ 161 ವರ್ಷಗಳ ಹಳೆಯದಾದ ಕಟ್ಟಡವು ಇಂದಿಗೂ ಯಾವುದೇ ಹಾನಿಗಳಿಲ್ಲದೆ ಅಚಲವಾಗಿ ನಿಂತಿದ್ದು, ಅಂದಿನ ವಾಸ್ತುಶಿಲ್ಪದ ವೈಭವವನ್ನು ಸಾರುತ್ತಿದೆ. ಒಂದು ಕಾಲದಲ್ಲಿ ಭವ್ಯವಾಗಿ ನಡೆಯುತ್ತಿದ್ದ…

Read More
error: Content is protected !!