Avatar

NAMMA MEDIA 24X7

ಜಾಗತಿಕ ಯುದ್ಧ ಭೀತಿ ವಿರುದ್ಧ ಮಂಗಳೂರಿನಲ್ಲಿ ಮೌನ ಕೂಗು

“ಭೂಮಿಗೆ ಶಾಂತಿ ಬೇಕು” ಸಂದೇಶದೊಂದಿಗೆ ಹಂಪನಕಟ್ಟೆಯಲ್ಲಿ ಮೌನ ಧರಣಿ ಮಂಗಳೂರು: ಜಾಗತಿಕ ಯುದ್ಧ ಭೀತಿ, ಮಾನವೀಯ ಮೌಲ್ಯಗಳ ಕುಸಿತ ಹಾಗೂ ಪರಿಸರ ಹಾನಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ ಮಂಗಳೂರು ಹಂಪನಕಟ್ಟೆಯ ಕ್ಲಾಕ್ ಟವರ್ ಎದುರು ಮೌನ ಧರಣಿ ನಡೆಸಲಾಯಿತು. ನಮ್ಮ ಭೂಮಿ ಕುಂದಾಪುರ ಸಂಸ್ಥೆಯ ಪ್ರಮುಖರಾದ ರಾಮಾಂಜಿ ಅವರ ನೇತೃತ್ವದಲ್ಲಿ “ಈ ಶಾಂತಿ ಅಭಿಯಾನದಲ್ಲಿ ಭೂಮಿ ಮೇಲೆ ಶಾಂತಿ ನೆಲೆಸಬೇಕು, ಮಾನವೀಯ ಸಂಬಂಧಗಳು ಉಳಿಯಬೇಕು, ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆ ಆಗಬೇಕು ಹಾಗೂ ಮಕ್ಕಳ ಭವಿಷ್ಯಕ್ಕಾಗಿ…

Read More

ಪತ್ರಕರ್ತರ ರಕ್ಷಣೆ ಸರ್ಕಾರದ ಕರ್ತವ್ಯ: ಐವನ್ ಡಿಸೋಜಾ

ಮಂಗಳೂರು, ಮೇ 25: ಸಮಾಜದ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತರು ನಿಭಾಯಿಸುತ್ತಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಪೊಲೀಸರಷ್ಟೇ ವೇಗವಾಗಿ ಘಟನಾ ಸ್ಥಳಗಳಿಗೆ ತೆರಳಿ, ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ವಿವೇಚನೆಯಿಂದ ವರದಿ ಮಾಡುವ ಪತ್ರಕರ್ತರ ಬದ್ಧತೆ ಶ್ಲಾಘನೀಯ” ಎಂದು…

Read More

“ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲ” ಎಂದ ಉದಯನಿಧಿ

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಉದಯನಿಧಿ ಸ್ಟಾಲಿನ್ ತಮ್ಮ ಹಳೆಯ ಮೈತ್ರಿ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ಸನ್ನು ಯಾವತ್ತೂ ನಂಬಬಾರದು. ಅವರು ಬೆನ್ನಿಗೆ ಚೂರಿ ಇರಿಯುವವರು. ಅವರಿಗೆ ಕೃತಜ್ಞತೆ ಹಾಗೂ ಸಭ್ಯತೆ ಎಂಬುದೇ ಇಲ್ಲ” ಎಂದು ಕಿಡಿಕಾರಿದರು. ಡಿಎಂಕೆ ಕಾರ್ಯಕರ್ತರ ಶ್ರಮದಿಂದಲೇ ಕಾಂಗ್ರೆಸ್‌ಗೆ ಐದು ಕ್ಷೇತ್ರಗಳಲ್ಲಿ ಗೆಲುವು ದೊರಕಿದೆ ಎಂದು ಆರೋಪಿಸಿದ ಉದಯನಿಧಿ ಸ್ಟಾಲಿನ್, “ಜನರು ಎಂ. ಕೆ….

Read More

“ಅಲ್ಲಡ ಸ್ವರೂಪ” ರಾಜಧಾನಿಯಾದ ಮಡಿಯನ್ ಕುಲಂ

ಉತ್ತರ ಕೇರಳ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ನೆಲವಾಗಿದೆ. ತುಳುನಾಡು ಮತ್ತು ಮಲಬಾರ್ ಭಾಗಗಳಾಗಿ ವಿಭಜನೆಯಾಗಿದ್ದ ಈ ಪ್ರದೇಶವನ್ನು ಉತ್ತರದಲ್ಲಿ ತುಳು ಅರಸರುಗಳು ಹಾಗೂ ದಕ್ಷಿಣದಲ್ಲಿ “ನಡುವಾಳಿಗಳು” ಎಂದು ಕರೆಯಲ್ಪಟ್ಟ ಅಲ್ಲಡ ಸ್ವರೂಪ ರಾಜಮನೆತನಗಳು ಆಳುತ್ತಿದ್ದರು. ಚಂದ್ರಗಿರಿ ನದಿಯನ್ನು ಗಡಿಯಾಗಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದ ಅಲ್ಲಡ ಸ್ವರೂಪದ ರಾಜಧಾನಿಯೇ ಮಡಿಯನ್ ಕುಲಂ ಆಗಿತ್ತೆಂಬುದು ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿದೆ . ಅದಕ್ಕೆ ಪುಷ್ಟಿ ನೀಡುವಂತೆ ಇತಿಹಾಸಕಾರರ ದಾಖಲೆಗಳಲ್ಲಿ ಉಲ್ಲೇಖವಾಗಿದೆ . ದೇವಾಲಯದ ವಾಸ್ತು ಶೈಲಿ…

Read More

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದರೂ ಪ್ರಧಾನಿ ಮೋದಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಯಾರೂ ನೈತಿಕ ಹೊಣೆ ಹೊತ್ತಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ನೀಟ್ ಪರೀಕ್ಷೆ ರದ್ದುಗೊಂಡಿರುವ ಘಟನೆ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತ ನೀಡಿದ್ದು, ಇದು ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಕಾರಣವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಹಗರಣದಿಂದ ವಿದ್ಯಾರ್ಥಿಗಳ ಭವಿಷ್ಯವೇ ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿದ್ದು, ಅವರ ಕನಸು ನುಚ್ಚುನೂರಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ…

Read More

ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ SDPI ಪ್ರತಿಭಟನೆ

ಮಂಗಳೂರು: ರಾಜ್ಯ ಸರ್ಕಾರ ಕೈಗೊಂಡಿರುವ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ನೀತಿಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಜಿಲ್ಲಾ ಸಮಿತಿಯ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ SDPI ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಪ್ ಅಡ್ಡೂರು ಜಿಲ್ಲೆಯ ನಾಲ್ಕು ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಸುಪರ್ದಿಗೆ ಒಪ್ಪಿಸುವ ಬದಲು ಅಲ್ಲಿಗೆ ಸರಕಾರಿ ತಜ್ಞ ವೈದ್ಯರನ್ನು ನೇಮಿಸಿ, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಉತ್ತಮ ಆರೋಗ್ಯ ಸೇವೆ…

Read More

ಕೇರಳದಲ್ಲಿ ಮೂರನೇ ಪರ್ಯಾಯಕ್ಕೆ ಮನ್ನಣೆ: ವಿ.ಕೆ. ಸಜೀವನ್

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯದಲ್ಲಿ ಮೂರನೇ ಪರ್ಯಾಯಕ್ಕೆ ಸಿಕ್ಕ ಮನ್ನಣೆಯನ್ನು ಸೂಚಿಸುತ್ತದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ಹಾಗೂ ಕೋಝಿಕ್ಕೋಡ್ ಮೇಘಲಾ ಪ್ರಭಾರಿ ವಿ.ಕೆ. ಸಜೀವನ್ ಹೇಳಿದ್ದಾರೆ. ಡಾ. ಶ್ಯಾಮಪ್ರಸಾದ್ ಮುಖರ್ಜಿ ಭವನದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇರಳದಲ್ಲಿ 30 ಲಕ್ಷ ಮತಗಳು ಮತ್ತು ಮೂವರು ಶಾಸಕರು ಲಭಿಸಿರುವುದು ಜನತೆ ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿರುವುದಕ್ಕೆ ಪುರಾವೆಯಾಗಿದೆ. ಈ ಯಶಸ್ಸು ಬಿಜೆಪಿ ಮುನ್ನಡೆಸುತ್ತಿರುವ ಅಭಿವೃದ್ಧಿ ರಾಜಕಾರಣಕ್ಕೆ ಸಿಕ್ಕ ಮನ್ನಣೆಯೂ ಹೌದು….

Read More

ಬಂಟ್ವಾಳಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ; ರೈಲ್ವೆ ಅಭಿವೃದ್ಧಿಗೆ ಆರು ಬೇಡಿಕೆಗಳ ಮನವಿ

ಬಂಟ್ವಾಳ, ಮೇ 23: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನಿವಾಸಕ್ಕೆ ಭೇಟಿ ನೀಡಿ ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಯ ಕುರಿತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಚಿವರನ್ನು ಹೂಗುಚ್ಚ ಹಾಗೂ ಶಾಲು ಹೊದಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಹಾಗೂ…

Read More

ಪುಣಚ ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ: ಮಹಮ್ಮದ್ ಬಡಗನ್ನೂರು ಆರೋಪ

ಪುತ್ತೂರು: ಪುತ್ತೂರಿನಲ್ಲಿ ಶಾಸಕರ ನೇತೃತ್ವದಲ್ಲಿ ದಾಖಲೆ ಸಂಖ್ಯೆಯ ಅಕ್ರಮ-ಸಕ್ರಮ ಮಂಜೂರು, 94ಸಿ, ಸಿಸಿ ಹಕ್ಕುಪತ್ರ ವಿತರಣೆಯ ಕಾರ್ಯ ನಡೆಯುತ್ತಿದ್ದು, ಅದನ್ನು ಸಹಿಸದ ಬಿಜೆಪಿಯು ಪುಣಚದ ಪರಿಶಿಷ್ಟ ಪಂಗಡದ 3 ಕುಟುಂಬಗಳ ಹಕ್ಕುಪತ್ರದ ವಿಚಾರದಲ್ಲಿ ಕೀಳುಮಟ್ಟದ ರಾಜಕೀಯ ಪ್ರದರ್ಶಿಸಿ ಪ್ರತಿಭಟನೆಯ ನಾಟಕ ಮಾಡಿದೆ ಎಂದು ಪುತ್ತೂರು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಆರೋಪಿಸಿದರು. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪುತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಬಡವರ ಕಣ್ಣೀರು ಒರೆಸುವ ಕಾರ್ಯ…

Read More

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಕೇಂದ್ರ ಸರ್ಕಾರದ ವಿರುದ್ಧ ಎನ್‌ಎಸ್‌ಯುಐ ಆಕ್ರೋಶ

ಮಂಗಳೂರು: ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ ಮಾತನಾಡಿ, “ಸಾಮಾನ್ಯ ವಿಚಾರಗಳಿಗೂ ಬೀದಿಗಿಳಿದು ಪ್ರತಿಭಟನೆ ನಡೆಸುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಇಂದು ಮೌನ ವಹಿಸಿರುವುದು ಅರ್ಥವಾಗದ ಸಂಗತಿ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಭವಿಷ್ಯ ಕತ್ತಲಾದ ಕಾರಣ ನಾಲ್ಕಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ…

Read More
error: Content is protected !!