Avatar

Shramitha bejja

ಜನವರಿ 11 ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ರಾಮಕ್ಷತ್ರಿಯ ಸಮಾಜದ ಯುವ ಸಂಭ್ರಮ ಕ್ರೀಡೋತ್ಸವ ಕಾರ್ಯಕ್ರಮ

ಮಂಗಳೂರು:ಯುವ ಕ್ಷಾತ್ರ ಅಬ್ಬಕ್ಕನಾಡು, ಉಳ್ಳಾಲ , ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ.), ಉಳ್ಳಾಲ , ರಾಮರಾಜ ಕ್ಷತ್ರಿಯ ಮಹಿಳಾ ಸಂಘ ಉಳ್ಳಾಲಅರ್ಪಿಸುವ ಕೃಷ್ಣ ಜೆ. ಪಾಲೆಮಾ‌ರ್ ಇವರ ಭವ್ಯ ಸಾರಥ್ಯದಲ್ಲಿ ರಾಮಕ್ಷತ್ರಿಯ ಸಮಾಜದ ಯುವ ಸಂಭ್ರಮ ಕ್ರೀಡೋತ್ಸವ ಕಾರ್ಯಕ್ರಮವು ಜನವರಿ 11 ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಮುಂಜಾನೆ 7.00 ರಿಂದ ನಡೆಯಲಿದೆ ಮತ್ತು ಸಂಜೆ 6.00ಕ್ಕೆ ‘ಪದಗ್ರಹಣ ಕಾರ್ಯಕ್ರಮ’ ನಡೆಯಲಿದೆ . ಯುವ ಸಂಭ್ರಮ ಕ್ರೀಡೋತ್ಸವದಲ್ಲಿ ಓವರ್-ಆರ್ಮ್ ಕ್ರಿಕೆಟ್ ಮತ್ತು…

Read More

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆ … !

ನವದೆಹಲಿ : ಜಾಗತಿಕ ಅಸ್ಥಿರತೆಯ ನಡುವೆಯೇ ಭಾರತ ಸದಾ ಶಾಂತಿಯ ಪರವಾಗಿಯೇ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸ್ಪಷ್ಟಪಡಿಸಿದರು. ಹೈದರಾಬಾದ್ ಹೌಸ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಅವರೊಡನೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಮೋದಿ, ಉಕ್ರೇನ್-ರಷ್ಯಾ ಸಂಘರ್ಷದ ನಡುವೆ “ಭಾರತ ತಟಸ್ಥವಲ್ಲ, ಆದರೆ ಶಾಂತಿಯೊಂದಿಗಿದೆ” ಎಂದು ಜಗತ್ತಿಗೆ ಸಂದೇಶ ರವಾನಿಸಿದರು.ಉಕ್ರೇನ್ ಯುದ್ಧವನ್ನು ನೇರವಾಗಿ ಉಲ್ಲೇಖಿಸಿದ ಅವರು, “ರಷ್ಯಾ-ಉಕ್ರೇನ್ ಮತ್ತೆ ಶಾಂತಿಯ ಹಾದಿಗೆ ಮರಳುತ್ತದೆ ಎಂಬ ನಂಬಿಕೆ ನನಗಿದೆ. ನಾನು ಭೇಟಿಯಾದ…

Read More

ವಿಧಿಯೇ ನೀನೆಷ್ಟು ಕ್ರೂರಿ …. !

ಮಂಗಳೂರು: ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ ಮಗು ಹಿಂತಿರುಗಿ ಬರುತ್ತಿದ್ದಾಗ ಕಾರು ಡಿಕ್ಕಿಯಾಗಿ ಮೃತ ಪಟ್ಟ ದಾರುಣ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.ಅಜ್ಜನ ಜೊತೆಗೆ ಕೈ ಹಿಡಿದು ತಿಂಡಿಗೆ ತೆರಳಿದ್ದ ಮಗು ಹೆದ್ದಾರಿಯಲ್ಲಿ ಕೈ ಬಿಟ್ಟು ಹಿಂದಕ್ಕೆ ತೆರಳಿದ ವೇಳೆ ಕಾರು ಡಿಕ್ಕಿಯಾಗಿ ಮೂರು ವರ್ಷದ ಮಗು ದಾರುಣ ಮೃತಪಟ್ಟಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಘಟನೆ ನಡೆದಿದೆ.ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಅವರ ಮೂರು ವರ್ಷದ…

Read More

ಗಾಂಧಿನಗರದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆ …. !

ಬೆಂಗಳೂರು:ನಗರದ ಗಾಂಧಿನಗರದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಉದ್ಘಾಟಿಸಿದರು. ಗಾಂಧಿನಗರದ ಆಚಾರ್ಯ ತುಳಸಿ ಮಾರ್ಗದಲ್ಲಿ ರೂ 32 ಕೋಟಿ ವೆಚ್ಚದಲ್ಲಿ ಈ ಬಹುಮಹಡಿ ಕಟ್ಟಡವನ್ನು ನಿರ್ಮಿಸಲಾಗಿದೆ. ಒಟ್ಟು 2,618 ಚದರ ಮೀಟರ್ ಅಳತೆಯ ನಿವೇಶನದಲ್ಲಿ ತಲೆಯೆತ್ತಿರುವ ಈ ಕಟ್ಟಡವು ಎರಡು ನೆಲ ಅಂತಸ್ತುಗಳು, ನೆಲ ಅಂತಸ್ತು, ಐದು ಮಹಡಿಗಳು ಹಾಗೂ ತಾರಸಿ ಮಹಡಿಯನ್ನು ಒಳಗೊಂಡಿದೆ. ಲೋಯರ್ ಬೇಸ್ ಮೆಂಟ್ ನಲ್ಲಿ 58 ಕಾರುಗಳು ಹಾಗೂ ಅಪ್ಪರ್ ಬೇಸ್…

Read More

ಕಾಂತಾರ ಸಿನೆಮಾಗೆ ಜಯ ತಂದ ಬಾರೆಬೈಲು ಪಂಜುರ್ಲಿ-ಪರಿವಾರ ದೈವಗಳಿಗೆ ರಿಷಬ್ ಶೆಟ್ಟಿ ಕೋಲ

ಮಂಗಳೂರು: ‘ಕಾಂತಾರ-1’ ಸಿನಿಮಾ ಯಶಸ್ಸಿನ ಸಂಭ್ರಮವು ಚಲನಚಿತ್ರರಂಗದಾಚೆಗೂ ದೈವ ನಂಬಿಕೆಯ ಮೈದಾನಕ್ಕೆ ವಿಸ್ತರಿಸಿದ್ದಂತಹ ದೃಶ್ಯ ಗುರುವಾರ ರಾತ್ರಿ ಮಂಗಳೂರಿನಲ್ಲಿ ಕಂಡುಬಂತು. ನಟ-ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ ಕುಟುಂಬ ಸಮೇತರಾಗಿ ಬಾರಬೈಲ್ ದೈವಸ್ಥಾನದಲ್ಲಿ ಹರಕೆಯ ಕೋಲ ಸಮರ್ಪಿಸಿದರು. ವರಾಹ ಪಂಜುರ್ಲಿ, ಜಾರಂದಾಯ ಹಾಗೂ ಬಂಟ ದೈವಗಳಿಗೆ ನಡೆದ ಈ ನೇಮದಲ್ಲಿ ರಿಷಬ್ ಶೆಟ್ಟಿ ತಮ್ಮ ಮನದಾಳದ ಕೃತಜ್ಞತೆಯನ್ನು ದೈವಕ್ಕೆ ಅರ್ಪಿಸಿದರು. ‘ಕಾಂತಾರ’ ಸಿನಿಮಾದಲ್ಲಿ ದೈವ-ನಂಬಿಕೆ ಮಹತ್ವದ ಅಂಶವಾಗಿದ್ದುದರಿಂದ, ಚಿತ್ರದ ಯಶಸ್ಸಿನ ನಂತರ ಈ ಹರಕೆ ನೆರವೇರಿಸುವುದು ವಿಶಿಷ್ಟ ಅರ್ಥವನ್ನೂ…

Read More

ನಾಗರಕಟ್ಟೆ ಯಲ್ಲಿನ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ಲೋಕಾರ್ಪಣೆ … !

ಕಾಸರಗೋಡು ಕೋಟೆಯ ಪೂರ್ವ ಭಾಗದಲ್ಲಿ ಸ್ಥಿತಿ ಗೊಂಡಿರುವ ನಾಗರಕಟ್ಟೆ ಯಲ್ಲಿನ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ನಿರ್ಮಿಸಿ ಸಮರ್ಪಿಸಲಾಯಿತು. ಕನ್ನಡ ಭವನದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ಸನತ್ ಕುಮಾರ್ ಬಿ. ಇ. ಕಾರ್ತಿಕ್ ಕಾಸರಗೋಡು ಬಿ. ಇ. ಇವರ ಆರ್ಥಿಕ ವಿನಿಯೋಗದಲ್ಲಿ ಪ್ರಾರ್ಥನಾ ಮಂಟಪ ಅತೀ ಸುಂದರ, ಭವ್ಯವಾಗಿ ಮೂಡಿ ಬಂದಿದೆ. ಎಡನೀರು ಮಠ ಅದೀಶರಾದ ಶ್ರೀ ಶ್ರೀ…

Read More

ಬಿಜೆಪಿಯಲ್ಲಿ ಹೈಕಮಾಂಡ್ ಇದೆ ಅವರನ್ನು ಏಜೆಂಟ್‌ ಎನ್ನುತ್ತೀರಾ ಆರ್‌.ಅಶೋಕ…. ? ಎಂದು ಪ್ರಶ್ನೆ ಮಾಡಿದ ಮಾಜಿ ಸಚಿವ ಬಿ.ರಮಾನಾಥ ರೈ

ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರ ಏಜೆಂಟ್‌’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿರುವುದು ಸರಿಯಲ್ಲ ಬಿಜೆಪಿಯಲ್ಲಿ ಕೂಡ ಹೈಕಮಾಂಡ್ ಇದೆ ಅವರನ್ನು ಈ ರೀತಿಯಾಗಿಯೇ ಟೀಕಿಸುತ್ತಾರೆಯೇ ಎಂದು ಆರ್‌.ಅಶೋಕ್ ಗೆ ಮಾಜಿ ಸಚಿವರಾದ ಬಿ.ರಮಾನಾಥ ರೈ ಪ್ರಶ್ನೆ ಮಾಡಿದರು . ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಅಶೋಕ್ ಅವರು ಕಿಡಿಕೇಡಿ ತನದ ಹೇಳಿಕೆಯನ್ನು ನೀಡಿದ್ದಾರೆ .ಪ್ರಬುದ್ಧತೆ ಇಲ್ಲದಂತಹ ಮಾತುಗಳನ್ನು ತುಟಿ ಬಿಚ್ಚಿ…

Read More

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.9ರಂದು ಸ್ವಚ್ಛತಾ ಪೌರ ಕಾರ್ಮಿಕರಿಂದ ಕಾಲ್ನಡಿಗೆ ಜಾಥಾ…. !

ದ.ಕ. ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಸಂಜೀವಿನಿ ಒಕ್ಕೂಟ ಗುತ್ತಿಗೆದಾರರ ಮೂಲಕ ದುಡಿಯುತ್ತಿರುವ ಸ್ವಚ್ಛತಾ ಪೌರಕಾರ್ಮಿಕರು ಡಿ.9ರಂದು ತಮ್ಮ ಕೆಲಸ ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೇಡಿಹಿಲ್‌ನ ಪತ್ರಿಕಾ ಭವನದ ಬಳಿಯಿಂದ ಜಿಪಂ ತನಕ ಕಾಲ್ನಡಿಗೆ ಜಾಥಾ ನಡೆಸಲಿರುವರು ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಆನಂದ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ಕ್ಕೆ ಕಾಲ್ನಡಿಗೆ ಜಾಥಾ ಮೂಲಕ ಸಾಗಿ ಪ್ರತಿಭಟನೆ…

Read More

ತಡರಾತ್ರಿ ಮನೆಗೆ ಅಕ್ರಮ ಪ್ರವೇಶಿಸಿ ಹಲ್ಲೆ ಆರೋಪ ಕಡಬ ಠಾಣಾ ಹೆಡ್ ಕಾನ್‌ಸ್ಟೇಬಲ್ ರಾಜು ನಾಯ್ಕ ಬಂಧನ – ಹುದ್ದೆಯಿಂದ ಅಮಾನತು

ಕಡಬ: ತಡರಾತ್ರಿ ಮನೆಗೆ ಅಕ್ರಮ ಪ್ರವೇಶಿಸಿ ಮನೆಯ ಸದಸ್ಯರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಡಬ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜು ನಾಯ್ಕ್ ಎಂಬಾತನನ್ನು ಬಂಧಿಸಲಾಗಿದ್ದು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಡಬ ತಾಲೂಕು ಕೊಯಿಲ ನಿವಾಸಿ ಬಾಬು ಗೌಡ ಎಂಬವರ ಮನೆಯ ಸಮೀಪವಿರುವ ಅವರ ಸಹೋದರ ಹರೀಶ ಎಂಬವರ ಮನೆಗೆ ಡಿ.3ರಂದು ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಅಕ್ರಮ ಪ್ರವೇಶಿಸಿದ್ದು ಮನೆಯ ಸದಸ್ಯರು ಆತನನ್ನು ಹಿಡಿದುಕೊಂಡಿದ್ದು, ಈ ವೇಳೆ ಆತ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮನೆಯ ಸದಸ್ಯ ಚೇತನ್ ಎಂಬಾತನಿಗೆ ಕೈಯಿಂದ ಹಲ್ಲೆ…

Read More

ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ಗೆ ಪ್ರಧಾನಿ ನರೇಂದ್ರ ಮೋದಿ ಭಗವದ್ಗೀತೆ ಉಡುಗೊರೆ…. !

ಹೊಸದಿಲ್ಲಿ ಭಾರತ-ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಅವರು ಗುರುವಾರ(ಡಿ.4) ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಖುದ್ದು ದೆಹಲಿ ಏರ್ಪೋಟ್‌್ರಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರನ್ನು ಬರಮಾಡಿಕೊಂಡರು.ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭಗವದ್ಗೀತೆಯ ರಷ್ಯನ್ ಆವೃತ್ತಿಯನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಅವರು X ನಲ್ಲಿ ಆ ಕ್ಷಣದ ಛಾಯಾಚಿತ್ರವನ್ನು ಹಂಚಿಕೊಂಡಿದ್ದು, ಅಧ್ಯಕ್ಷ ಪುಟಿನ್ ಅವರಿಗೆ…

Read More
error: Content is protected !!