ಮಂಗಳೂರು:ಯುವ ಕ್ಷಾತ್ರ ಅಬ್ಬಕ್ಕನಾಡು, ಉಳ್ಳಾಲ , ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ.), ಉಳ್ಳಾಲ , ರಾಮರಾಜ ಕ್ಷತ್ರಿಯ ಮಹಿಳಾ ಸಂಘ ಉಳ್ಳಾಲ
ಅರ್ಪಿಸುವ ಕೃಷ್ಣ ಜೆ. ಪಾಲೆಮಾರ್ ಇವರ ಭವ್ಯ ಸಾರಥ್ಯದಲ್ಲಿ ರಾಮಕ್ಷತ್ರಿಯ ಸಮಾಜದ ಯುವ ಸಂಭ್ರಮ ಕ್ರೀಡೋತ್ಸವ ಕಾರ್ಯಕ್ರಮವು ಜನವರಿ 11 ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಮುಂಜಾನೆ 7.00 ರಿಂದ ನಡೆಯಲಿದೆ ಮತ್ತು ಸಂಜೆ 6.00ಕ್ಕೆ ‘ಪದಗ್ರಹಣ ಕಾರ್ಯಕ್ರಮ’ ನಡೆಯಲಿದೆ .
ಯುವ ಸಂಭ್ರಮ ಕ್ರೀಡೋತ್ಸವದಲ್ಲಿ ಓವರ್-ಆರ್ಮ್ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ ಕೂಟದ ಜೊತೆಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಾದ ರಂಗೋಲಿ ಸ್ಪರ್ಧೆ ,ಸಂಗೀತ ಸ್ಪರ್ಧೆ , ಚಿತ್ರಕಲಾ ಸ್ಪರ್ಧೆ , ಸಮೂಹ ರಸಪ್ರಶ್ನೆ ಸ್ಪರ್ಧೆ ಆಯಾ ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಯಲಿದೆ . ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು ., ರಾಮರಾಜ ಕ್ಷತ್ರಿಯ ಸಮಾಜದ ಬಾಂಧವರು ಮಾತ್ರ ವಿವಿಧ ಸ್ಪರ್ಧೆ ಮತ್ತು ಪಂದ್ಯಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ .