Avatar

Shramitha bejja

ಮಣ್ಣಗುಂಡಿ ಎಂಬಲ್ಲಿ ಗುಡ್ಡ ಕುಸಿತದ ಪರಿಣಾಮ ಬೆಂಗಳೂರು-ಮಂಗಳೂರು ಸಂಚಾರ ವ್ಯತ್ಯಯ !

ಮಂಗಳೂರು : ವಿಪರೀತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ ಗುಡ್ಡ ಕುಸಿತಗೊಂಡ ಪರಿಣಾಮ ಬೆಂಗಳೂರು-ಮಂಗಳೂರು ಸಂಚಾರ ಬಂದ್ ಆಗಿರುವ ಘಟನೆ ಮಣ್ಣಗುಂಡಿ ಎಂಬಲ್ಲಿ ನಡೆದಿದೆ. ರಸ್ತೆಗೆ ರಾಶಿ ರಾಶಿ ಮಣ್ಣು ಹಾಗೂ ಮರ ಬಿದ್ದಿರುವುದರಿಂದ ಸೋಮವಾರ ಬೆಳಗಿನ ಜಾವದಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಣ್ಣು ತೆರವು ಕಾರ್ಯಾಚರಣೆ ಬಳಿಕ ಸದ್ಯ ವಾಹನಗಳು ಸಂಚರಿಸುತ್ತಿವೆ ಎಂದು ತಿಳಿದು ಬಂದಿದೆ. ಕಳೆದ ವಾರ ಕೂಡ ಅದೇ ಜಾಗದಲ್ಲಿ ಗುಡ್ಡ ಕುಸಿತವಾಗಿದ್ದು, ಸ್ಥಳೀಯರು ಕಳಪೆ…

Read More

ಉಪ್ಪಳ ಶಾರದಾ ನಗರದಲ್ಲಿ ಭೀಕರ ಕಡಲ್ಕೊರೆತ .ಹಲವಾರು ಮನೆಗಳು ಅತಂತ್ರ .ಕಡಲ್ಕೊರೆತ ಪ್ರದೇಶಕ್ಕೆ ಕೆ ಆರ್ ಜಯಾನಂದ ನಿಯೋಗ ಭೇಟಿ.ತುರ್ತು ಪರಿಹಾರಕ್ಕೆ ಆಗ್ರಹ

ಉಪ್ಪಳ : ಭೀಕರ ಕಡಲ್ಕೊರೆತದಿಂದ ಉಪ್ಪಳ ಪರಿಸರದ ಶಾರದಾನಗರದಿಂದ ಹನುಮಾನ್ ನಗರ, ಐಲ ಕಡಪ್ಪರ, ಪೆರಿಂಗಡಿ ವರೆಗಿನ 5ಕಿ.ಮೀ ಪ್ರದೇಶದ ಕಡಲ ತಡೆಗೋಡೆ ಸಹಿತ ಪುಲಿಮುಟ್ಟು ಸಮುದ್ರ ಕೊಚ್ಚಿ ಕೊಂಡೊಯ್ದು ಸುಮಾರು 400 ಕೂಟುಂಬಗಳ ಬದುಕಿನ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದೆ. ಇಡೀ ಪ್ರದೇಶವನ್ನು ಕಢಲುಆಕ್ರಮಿಸಿ, ರೌದ್ರ ತೆರೆಗಳೊಂದಿಗೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಜನರು ಭೀತಿಯೊಂದಿಗೆ ಬದುಕುತ್ತಿದ್ದಾರೆ. ಈ ಪ್ರದೇಶಗಳಿಗೆ ಆದಿತ್ಯವಾರ ಸಂಜೆ ಸಿಪಿಎಂ ಸೆಕ್ರೇಟರಿಯೇಟ್ ಸದಸ್ಯ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ ನೇತೃತ್ವದ ನಿಯೋಗ…

Read More

ಕಾವ್ಯದ ಮಾತು ಧ್ವನಿಯಾಗಬೇಕು- ಡಾ ಪುರುಷೋತ್ತಮ ಬಿಳಿಮಲೆ

ಭಾವನೆಗಳಿಗೆ ಅನುಗುಣವಾಗಿ ಭಾಷೆಯನ್ನು ಹೊಸತುಗೊಳಿಸಿ. ಕಾಲದ ಓಗಕ್ಕೆ ಅನುಗುಣವಾಗಿ ಬರವಣಿಗೆಗಳು ಬದಲಾಗಬೇಕು. ಕವನಗಳು ಓದುವಾಗ ಪ್ರಶ್ನೆಗಳು ಮೂಡಬೇಕು.ಕಾವ್ಯದ ಮಾತು ಧ್ವನಿ ಯಾಗಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ಭಾಷೆಯನ್ನು ಅನುಸರಿಸಿದಾಗ ಆಶಯಗಳು ಪ್ರತಿಧ್ವನಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ರಂಗಮಂಡಲ ಹಾಗೂ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಸಮಿತಿ ಆಶ್ರಯದಲ್ಲಿ ನಡೆದ ಕಾವ್ಯ ಸಂಸ್ಕೃತಿ ಯಾನ ಜನರೆಡೆಗೆ ಕಾವ್ಯ ಹನ್ನೊಂದನೆಯ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದ ಸರ್ವಾಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ…

Read More

ಧರ್ಮಸ್ಥಳ ಹತ್ಯಾ ಪ್ರಕರಣ. ಸಮಗ್ರ ತನಿಖೆಗೆ ವಿಮನ್ ಇಂಡ್ಯಾ ಮೂಮೆಂಟ್ ಆಗ್ರಹ

ಮಂಜೇಶ್ವರ: ಕರ್ನಾಟಕದ ಧರ್ಮಸ್ಥಳದಲ್ಲಿ ಮಲಯಾಳಿಗಳು ಸೇರಿದಂತೆ ನೂರಾರು ಮಹಿಳೆಯರ ಹತ್ಯೆಯಾಗಿರುವ ಬಗ್ಗೆ ಶುಚೀಕರಣ ಕಾರ್ಮಿಕರೊಬ್ಬರು ಬಹಿರಂಗಪಡಿಸಿದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ವಿಮನ್ ಇಂಡ್ಯಾ ಮೂಮೆಂಟ್ ರಾಜ್ಯ ಖಜಾಂಚಿ ಮಂಜುಷಾ ಮಾವಿಲಾಡಂ ಆಗ್ರಹಿಸಿದರು. ಧರ್ಮಸ್ಥಳದ ಶುಚೀಕರಣ ಕಾರ್ಮಿಕರೊಬ್ಬರು ಹೇಳುವಂತೆ ಬಾಲಕಿಯರು ಹಾಗೂ ಯುವತಿಯರು ಸೇರಿದಂತೆ 450 ಕ್ಕೂ ಹೆಚ್ಚು ಮಂದಿಯನ್ನು ಕೆಲವು ಜನರ ಸೂಚನೆಯ ಮೇರೆಗೆ ಸಮಾಧಿ ಮಾಡಲಾಗಿದೆ ಎಂದು ಬಹಿರಂಗಪಡಿಸಿರುವುದು ಆಘಾತಕಾರಿ ಸಂಗತಿ . ಕಳೆದ ಕೆಲವು ವರ್ಷಗಳಲ್ಲಿ…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೀತಾಂಗೋಳಿ ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯು ಭಾನುವಾರ ಸೀತಾಂಗೋಳಿ ಸಮೀಪದ ಪೆರಡಾನಮೂಲೆ ಕಮ್ಯುನಿಟಿ ಹಾಲ್’ನಲ್ಲಿ ನಡೆಯಿತು . ಒಕ್ಕೂಟದ ಅಧಕ್ಷರಾದ ಶ್ರೀಮತಿ ಸುಕೇಶಿನಿ ದೀಪ ಬೆಳಗಿಸಿ ಉದ್ಘಾಟಿಸಿದರು . ಈ ಒಕ್ಕೂಟ ಸಭೆಯಲ್ಲಿ ವಲಯದ ಮೇಲ್ವಿಚಾರಕರದ ಶ್ರೀ ಗೋಪಾಲಕೃಷ್ಣ , ಕೃಷಿ ಮೇಲ್ವಿಚಾರಕರದ ಶ್ರೀ ಜಯರಾಮ , ಸೀತಾಂಗೋಳಿ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಸರಿತಾ ಸೀತಾಂಗೋಳಿ , ಹಾಗೂ ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಪೆರಡಾನಮೂಲೆ ,…

Read More

ಡಾ. ಸದಾಶಿವ ಶೆಟ್ಟಿ ಪ್ರಾಯೋಜಕತ್ವದ ಉಚಿತ ವಿಮೆ ಪಾಲಿಸಿ ವಿತರಣಾ ಕಾರ್ಯಕ್ರಮ:

ಮಂಜೇಶ್ವರ : ತನ್ನ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಅರ್ಪಿಸಬೇಕು, ಆ ನಿಟ್ಟಿನಲ್ಲಿ ಸಮಾಜದಲ್ಲಿರುವ ಅಶಕ್ತರ ಪಾಲಿಗೆ ಬೆಳಕಾಗಬೇಕೆಂದು ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿರುವ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿಯವರ ಕನಸಿನ ಕೂಸಾದ ಉಚಿತ ಆರೋಗ್ಯ ವಿಮೆ/ ಅಪಘಾತ ವಿಮೆಯ ಯೋಜನೆಯು ಈಗಾಗಲೇ ಕೈಗೂಡಿದ್ದು ಇದರ ಅಪಘಾತ ವಿಮಾ ಪಾಲಿಸಿ ವಿತರಣೆ ಚಿಗುರುಪಾದೆಯಲ್ಲಿರುವ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ಕಚೇರಿಯಲ್ಲಿ ಜರಗಿತು. ಕುಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ…

Read More

ಕೊಂಡೆವೂರು ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ.ಶಾಸ್ತ್ರ ಮತ್ತು ಶಸ್ತ್ರ ಕ್ಕೆ ಅವಿನಾಭಾವ ಸಂಬಂಧ ಇದೆ :ಅಜಿತ್ ಹನುಮಕ್ಕ ನವರ್

ಉಪ್ಪಳ :ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ವನ್ನು ಆಚರಿಸಲಾಯಿತು . ಕಾರ್ಯಕ್ರಮವನ್ನು ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿ ಆಶೀರ್ವಚನ ನೀಡಿದರು.ಈ ಸಂಧರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕ ನವರು ಮುಖ್ಯ ಭಾಷಣ ಮಾಡುತ್ತಾ ಭಾರತೀಯ ಸೇನೆ ಪ್ರಪಂಚದ ಅತ್ಯುನ್ನತ ನೈತಿಕತೆಯ ಸೇನೆಯಾಗಿದ್ದು ನಾವೆಲ್ಲಾ ಸುರಕ್ಷಿತ ವಾಗಿರುವುದಕ್ಕೆ ಭಾರತೀಯ ಯೋಧರ ನಿಷ್ಕಳಂಕ ಸೇವೆಯೇ ಕಾರಣವೆಂದರು. ನಮ್ಮ…

Read More

ಅಮೆರಿಕಾದ ಅಂತರಾಷ್ಟ್ರೀಯ ವಿಧಾಯಕರುಗಳ ಸಮ್ಮೇಳನಕ್ಕೆ ಶಾಸಕ ಮಂಜುನಾಥ ಭಂಡಾರಿ ಆಯ್ಕೆ

ಮಂಗಳೂರು: ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆಯ (NLC) ಆಶ್ರಯದಲ್ಲಿ ಅಮೆರಿಕಾದ ಬೋಸ್ಟನ್ ನಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷರ (ಸ್ಪೀಕರ್) ನೇತೃತ್ವದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಹಿರಿಯ ರಾಜಕಾರಣಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರು ಅವಕಾಶ ಪಡೆದಿದ್ದಾರೆ. ಕರ್ನಾಟಕದ ವಿಧಾನಸಭೆಯ 224 ಸದಸ್ಯರುಗಳಲ್ಲಿ 14 ಶಾಸಕರು ಆಯ್ಕೆಯಾಗಿದ್ದು ಅದರಲ್ಲಿ ಭಂಡಾರಿ ಓರ್ವರಾಗಿರುತ್ತಾರೆ.ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನೀತಿ ನಿರೂಪಕರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು ಪ್ರಜಾತಂತ್ರ ಗಟ್ಟಿಗೊಳಿಸುವಿಕೆಯಲ್ಲಿ ಶಾಸನ ಸಭೆಗಳ ಪಾತ್ರ ಶಾಸನ…

Read More

“ಎಲ್ಟು ಮುತ್ತಾ ಕನ್ನಡ ಚಲನಚಿತ್ರ ತೆರೆಗೆ ಸಿದ್ದ

ಮಂಗಳೂರು: “ಎಲ್ಟು ಮುತ್ತಾ ಎಂಬ ಕೊಡಗಿನ ಹಿನ್ನಲೆಯುಳ್ಳ ಕನ್ನಡ ಚಲನಚಿತ್ರವು ಹೈ ಫೈವ್ ಸ್ಟುಡಿಯೋಸ್ ಮತ್ತು ಎಸಿಇ 22 ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿಡುಗಡೆಗೆ ಸಿದ್ಧಗೊಂಡಿದ್ದು ಇದರ ಟೀಸರ್ ನವಿಲು ಮತ್ತು ಕಾಳಿಂಗ ಹಾವಿನ ಕಥೆ ಹೇಳಿ ಬಹಳ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಾ ಇದೆ. ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾದ ಕಥಾವಸ್ತುವನ್ನು ತೆರೆಯ ಮೇಲೆ ತರಲು ನಿರ್ದೇಶಕ ರಾ ಸೂರ್ಯ ಬಹಳಷ್ಟು ಶ್ರಮವಹಿಸಿದ್ದಾರೆ“…

Read More

“ಇಡಿ ಇಲಾಖೆ ದುರ್ಬಳಕೆ ಮಾಡಿದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ಖಚಿತ ”

ಮಂಗಳೂರು: “ಇಡಿ ಇಲಾಖೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿರುವ ಬಿಜೆಪಿ ದೇಶದ ಸಂವಿಧಾನವನ್ನು ಗಾಳಿಗೆ ತೂರಿದೆ. ಬಿಜೆಪಿಗೆ ದೇಶದಲ್ಲಿ ಆಡಳಿತ ನಡೆಸಲು ಅರ್ಹತೆ ಇಲ್ಲ. ಸುಪ್ರೀಂ ಕೋರ್ಟ್ ಇಡಿ ದುರ್ಬಳಕೆ ಮಾಡಿರುವುದನ್ನು ಹೇಳಿದ್ದರಿಂದ ಬಿಜೆಪಿ ಹಣೆಬರಹ ಜಗಜ್ಜಾಹೀರಾಗಿದೆ“ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ”ಇಡಿಯನ್ನು ಮುಂದಿಟ್ಟುಕೊಂಡು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯವರ ಶ್ರೀಮತಿಯವರ ಹೆಸರನ್ನು ದುರ್ಬಳಕೆ ಮಾಡಲಾಯಿತು. ಮುಡಾ ಪ್ರಕರಣದಲ್ಲಿ ಮನಿ ಲ್ಯಾಂಡಿಂಗ್ ನಡೆದಿಲ್ಲ, ಹಣ ತೆಗೆದುಕೊಂಡ ದೂರಿಲ್ಲ ಹೀಗಿರುವಾಗ ಮುಖ್ಯಮಂತ್ರಿಯವರ ಶ್ರೀಮತಿ ವಿರುದ್ಧ…

Read More
error: Content is protected !!