ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೀತಾಂಗೋಳಿ ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯು ಭಾನುವಾರ ಸೀತಾಂಗೋಳಿ ಸಮೀಪದ ಪೆರಡಾನಮೂಲೆ ಕಮ್ಯುನಿಟಿ ಹಾಲ್’ನಲ್ಲಿ ನಡೆಯಿತು . ಒಕ್ಕೂಟದ ಅಧಕ್ಷರಾದ ಶ್ರೀಮತಿ ಸುಕೇಶಿನಿ ದೀಪ ಬೆಳಗಿಸಿ ಉದ್ಘಾಟಿಸಿದರು .

ಈ ಒಕ್ಕೂಟ ಸಭೆಯಲ್ಲಿ ವಲಯದ ಮೇಲ್ವಿಚಾರಕರದ ಶ್ರೀ ಗೋಪಾಲಕೃಷ್ಣ , ಕೃಷಿ ಮೇಲ್ವಿಚಾರಕರದ ಶ್ರೀ ಜಯರಾಮ , ಸೀತಾಂಗೋಳಿ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಸರಿತಾ ಸೀತಾಂಗೋಳಿ , ಹಾಗೂ ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಪೆರಡಾನಮೂಲೆ , ಕೋಶಾಧಿಕಾರಿ ಶ್ರೀಮತಿ ಪವಿತ್ರ ಮಾಯಿಪ್ಪಾಡಿ , ಸಂಘದ ಎಲ್ಲಾ ಸದಸ್ಯರು , ಮಧೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ಶ್ರೀ ಪ್ರದೀಪ ಸೀತಾಂಗೋಳಿ ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು . ಕೃಷಿ ಮೇಲ್ವಿಚಾರಕರದ ಶ್ರೀ ಜಯರಾಮ ಅವರು ಕೃಷಿ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು . ಪರಿಸರ ಮಾಹಿತಿ ಕಾರ್ಯಕ್ರಮದ ಸಲುವಾಗಿ ಶ್ರೀ ಸ್ವಾಮಿ ಕೊರಗತನಿಯ ಪುಣ್ಯ ಸನ್ನಿಧಿ ಪೆರಡಾನಮೂಲೆ ಪರಿಸರದಲ್ಲಿ ಗಿಡನಾಟಿ ಕಾರ್ಯಕ್ರಮ ಮಾಡಲಾಯಿತು .

ಒಕ್ಕೂಟದ ಸಭೆಯ ಜವಾಬ್ದಾರಿಯನ್ನು ಶ್ರೀ ನಾಗರಾಜ ಹಾಗೂ ಶ್ರೀ ತುಳಸಿ ಸ್ವ-ಸಹಾಯ ಸಂಘ ಪೆರಡಾನಮೂಲೆ ಸಂಘದವರು ವಹಿಸಿಕೊಂಡರು . ಶ್ರೀ ನಾಗರಾಜ ಸಂಘದ ವರದಿಯನ್ನ ಶ್ರೀ ರಾಮ ಮಂಡಿಸಿದರು . ಈ ಒಕ್ಕೂಟ ಸಭೆಯನ್ನ ಶ್ರೀ ನಾಗರಾಜ ಸಂಘದ ಸದಸ್ಯರಾದ ಶ್ರೀ ಮಾಧವ ನಿರೂಪಿಸಿದರು . ಶ್ರೀ ರಾಮ ಸ್ವಾಗತಿಸಿ , ಶ್ರೀ ಮಾಧವ ವಂದಿಸಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!