ನಮ್ಮ ಮೂಗಿನೊಳಗೆ ನಾಸಲ್ ಮ್ಯೂಕೋಸಾ (Nasal Mucosa) ಎಂಬ ಸೂಕ್ಷ್ಮವಾದ ಪದರ ಇರುತ್ತದೆ. ಧೂಳು, ಹೊಗೆ, ವೈರಸ್, ಬ್ಯಾಕ್ಟೀರಿಯಾ ಅಥವಾ ಯಾವುದೇ ತೀಕ್ಷ್ಣವಾದ ವಾಸನೆ ಈ ಪದರವನ್ನು ಕೆರಳಿಸಿದಾಗ, ಅಲ್ಲಿರುವ ನರಗಳು ತಕ್ಷಣ ಮೆದುಳಿಗೆ ಸಂದೇಶ ಕಳುಹಿಸುತ್ತವೆ. ಮೆದುಳಿನ ‘ಸ್ನೀಜ್ ಸೆಂಟರ್’ ಸೀನು ಮಾಡಲು ದೇಹಕ್ಕೆ ಆದೇಶ ನೀಡುತ್ತದೆ.

ಆಗ ಶ್ವಾಸಕೋಶಗಳು ಆಳವಾದ ಉಸಿರನ್ನು ತೆಗೆದುಕೊಂಡು, ಎದೆ, ಗಂಟಲು ಮತ್ತು ಮುಖದ ಸ್ನಾಯುಗಳು ಒಟ್ಟಾಗಿ ಹಠಾತ್ ಒತ್ತಡವನ್ನು ಸೃಷ್ಟಿಸುತ್ತವೆ. ಇದರಿಂದ ಮೂಗು ಮತ್ತು ಬಾಯಿಯಿಂದ ಗಾಳಿಯು ಅತ್ಯಂತ ವೇಗವಾಗಿ ಹೊರಬಂದು, ಹೊರಗಿನ ಕಣಗಳನ್ನು ಹೊರಹಾಕುತ್ತದೆ.
ಅಂದರೆ, ಸೀನು ನಮ್ಮ ಉಸಿರಾಟದ ವ್ಯವಸ್ಥೆಯನ್ನು (Respiratory System) ಸುರಕ್ಷಿತವಾಗಿಡುವ ಒಂದು ಕ್ಲೀನಿಂಗ್ ಪ್ರಕ್ರಿಯೆ.
ಸೀನಿಗೆ ಕಾರಣಗಳೇನು?
ಧೂಳು ಮತ್ತು ಮಣ್ಣು, ಪರಾಗ (Pollen Allergy), ಶೀತ-ನೆಗಡಿ ಅಥವಾ ವೈರಲ್ ಸೋಂಕು, ತೀಕ್ಷ್ಣವಾದ ಪರ್ಫ್ಯೂಮ್ ಅಥವಾ ರಾಸಾಯನಿಕದ ವಾಸನೆ, ಹೊಗೆ ಮತ್ತು ಮಾಲಿನ್ಯ, ಸಾಕುಪ್ರಾಣಿಗಳ ಕೂದಲು, ಪ್ರಖರವಾದ ಬಿಸಿಲು (Photic Sneezing), ತಣ್ಣನೆಯ ಗಾಳಿ, ಮಸಾಲೆಯುಕ್ತ ಆಹಾರ ಸೇವನೆಯಿಂದಲೂ ಕೆಲವರಿಗೆ ಸೀನು ಬರುತ್ತದೆ.


