ಕೆ ಎಸ್ ಆರ್ ಟಿ ಸಿ ಸೀಟ್ ಕಥೆ ವ್ಯಥೆ ….!

ಚುನಾವಣೆಯಲ್ಲಿ ಸೀಟ್ ಯಾರಿಗೆ ಸಿಗುತ್ತೆ ಅಂತ ಚಿಂತೆ ಆದ್ರೆ ನನಗೆ ಪಯಣಿಸುವಾಗ ಬಸ್ಸ್ ನಲ್ಲಿ ಒಂದು ಸೀಟ್ ಇದ್ರೆ ಸಾಕಪ್ಪ ಎನ್ನುವ ಚಿಂತೆ ಕಾಡುತಿತ್ತು . ಬಾಲ್ಯದಿಂದಲೂ ಕೇರಳದ ಕೆ ಎಸ್ ಆರ್ ಟಿ ಸಿ ಕಂಡರೆ ಬಲು ಮೆಚ್ಚುಗೆ . ದೀರ್ಘವಾದ ಅದರ ದೇಹ , ಟಿನ್ ಟಿನ್ ಮಾಡುವ ಅದರ ಬೆಲ್ಲು , ವೇಗವಾದ ಪ್ರಯಾಣ , ಮಳೆಯಲ್ಲಂತೂ ಬಸ್ಸ ಪಯಣ ಖುಷಿಯ ದಿಬ್ಬಣವನ್ನೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡು ಹೋಗುತ್ತದೆ ….

Read More

ಹೊಸ ತನದ ಹುರುಪಿನಲ್ಲಿ ಮತ್ತೆ ಬಂದಿದೆ ಹೊಸ ವರ್ಷ

ಎಲ್ಲರಿಗೂ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ಹೌದು ಮತ್ತೆ ಬಂದೇ ಬಿಟ್ಟಿತ್ತು ಕ್ಯಾಲೆಂಡರ್ ಹೊಸ ವರ್ಷ. ಕಳೆದು ಹೋದ ದಿನಗಳಲ್ಲಿ ಅದೆಷ್ಟೋ ತುಂಬಿದ ಕ್ಷಣಗಳು ಬೇಸರದ ನಿಮಿಷಗಳು ಸಂತಸದ ಗಳಿಗೆಗಳು ಕಳೆದು ಹೋಗಿರಬಹುದು. ಅನುಭವದ ಸಂತೆಯಲ್ಲಿ ಆ ದಿನಗಳು ತನ್ನ ಛಾಪನ್ನು ಮೂಡಿಸಿರಬಹುದು. ಕೆಲವರಿಗೆ ಈ ವರ್ಷ ಹರ್ಷವನ್ನು ಇನ್ನು ಕೆಲವರಿಗೆ ಸಂಕಷ್ಟವನ್ನು ತಂದಿರಬಹುದು. ಏಳು ಬೀಳಿನ ಸುತ್ತ ಹೆಜ್ಜೆ ಹಾಕುವ ಜೀವನಕ್ಕೆ ಇದೆಲ್ಲಾ ಮಾಮೂಲಿ ಎಂದು ನೆನೆಯಬೇಕು. ಈ ವರ್ಷ ನನ್ನ ಜೀವನದಲ್ಲಿ ಸಂತಸದ ಸಮಯವನ್ನು ಜಾಸ್ತಿಯೇ…

Read More

ಜಾನಪದ ಕಂಬಳ ಟೀಕೆ ಟಿಪ್ಪಣಿಗಳಿಗೆ ಮುನ್ನುಡಿಯನ್ನು ಬರೆಯದಿರಲಿ , ಇತಿಹಾಸದ “ಅಸ್ಮಿತೆಯನ್ನು” ಕಾಪಾಡುವಂತಾಗಲಿ… !

ಮಂಗಳೂರು: ಕಂಬಳ ಈ ನಾಡಿನ ಪರಂಪರಾಗತವಾದ ಜಾನಪದ ಕ್ರೀಡೆ . ಇದು ಕರಾವಳಿ ಜನರ ನಾಡಿಮಿಡಿತದ ಪ್ರತಿಧ್ವನಿ . ಇದರ ಆಚರಣೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ಇಂಥಹಾ ಪರಂಪರಾಗತ ಕಂಬಳದ ಉಳಿವಿಗಾಗಿ ಅದೆಷ್ಟೋ ತೌಳವ ನಾಡಿದ ಮಹನೀಯರು ಶ್ರಮವನ್ನು ಪಟ್ಟಿದ್ದಾರೆ . ಆ ಸಾಲಿನಲ್ಲಿ ಅಗ್ರಗಣ್ಯರು, ಕಂಬಳದ ಭೀಷ್ಮ ಖ್ಯಾತಿಯ ಗುಣಪಾಲ ಕಡಂಬರು ಕೂಡ ಒಬ್ಬರು ಎನ್ನುವ ಸಂಗತಿ ಸರ್ವರಲ್ಲಿಯೂ ಜಗತ್ ಜಾಹಿರ. ಇತ್ತೀಚಿಗೆ ನಡೆದ ಕೆಲವು ಘಟನೆಗಳು ಕಂಬಳದ ಆಚರಣೆಗೆ ಧಕ್ಕೆಯನ್ನು ತಂದಿತೇ ಎನ್ನುವ…

Read More

ಬಾಡಿಗೆ ಬದುಕು…….. !!!

ಬದುಕ್ಕೆನ್ನುವುದು ಹುಟ್ಟು ಸಾವಿನ ನಡುವೆ ಬರುವ ಒಂದು ಅಮೂಲ್ಯವಾದ ಕ್ಷಣವಾಗಿದೆ. ಇಲ್ಲಿ ಧರ್ಮ ಅಧರ್ಮದ ಲೆಕ್ಕಾಚಾರದಲ್ಲಿ ಕರ್ಮಫಲವು ಪ್ರಾಪ್ತಿಯಾಗುವುದು. ಎಷ್ಟೋ ಮಂದಿ ಚಿರಂಜೀವಿ ಎನ್ನುವ ಯೋಚನೆಯಲ್ಲಿ ಬದುಕುತ್ತಾರೆ. ಧನ ಕನಕ ವಜ್ರ ವೈಡೂರ್ಯ ಆಸ್ತಿಯ ಮೇಲೆ ಅತಿಯಾದ ವ್ಯಮೋಹ, ವಸ್ತುವಿನ ಮೇಲೆ ಅತಿಯಾದ ಬಯಕೆ, ಅಧಿಕಾರದ ದುರಂಹಕಾರ ಇರುತ್ತದೆ. ಅವರು ಅದನ್ನು ಅನುಭವಿಸುವ ಹೊತ್ತಿನಲ್ಲಿ ನಾನು ಶಾಶ್ವತ ಅದು ಶಾಶ್ವತ ಎನ್ನುವಷ್ಟರ ಮಟ್ಟಿಗೆ ಅದರಲ್ಲಿ ಲೀನರಾಗ ಹೋಗುತ್ತಾರೆ. ತನ್ನ ಪಕ್ಕದ ಮನೆಯಲ್ಲಿ ಸಾವಾಗಿದ್ರು ಕೂಡ ತನ್ನನ್ನು ಸಾವು…

Read More

ಸಮಸ್ಯೆ ಅದು ಸಮಸ್ಯೆಯೇ ಅಲ್ಲ…..!

ದಿನವೂ ಒಂದಲ್ಲ ಒಂದು ಕಷ್ಟಗಳು ಬರುತ್ತಾ ಇರುತ್ತದೆ. ಕಷ್ಟಗಳು ನಷ್ಟಗಳು ಸಾಗರದ ಅಲೆಗಳಂತೆ ಬಂದು ಬದುಕ್ಕೆನ್ನುವ ದಡಕ್ಕೆ ನಿರಂತರವಾಗಿ ಬಡೆಯುತ್ತಲೇ ಇರುತ್ತದೆ. ಆದರೆ ಆ ಅಲೆಗಳಿಗೆ ಹೆದರಿದರೆ ಬಾಳು ಸೋತು ಹೋಗುತ್ತದೆ. ಅಲೆಗಳನ್ನು ಧೈರ್ಯದಿಂದ ಎದುರು ಹಾಕಿ ಮುನ್ನುಗ್ಗಿ ಈಜಿದರೆ ಗೆಲುವು ನಮ್ಮದಾಗುತ್ತದೆ . ಪ್ರತಿ ಸಮಸ್ಯೆಗಳು ಎದುರಾದ ಸಮಯದಲ್ಲಿ ನಮಗೆ ಬೇಕಾಗಿರುವುದು ಧೈರ್ಯ, ಆತ್ಮವಿಶ್ವಾಸ . ಇದನ್ನು ನಾವು ಒಮ್ಮೆ ಕಳೆದುಕೊಂಡರೆ ಮುಂದೆ ಎದುರಾಗುವ ಸಮಸ್ಯೆಗಳನ್ನು ಹಿಮ್ಮೆಟ್ಟಲು ಕಷ್ಟವಾಗುತ್ತದೆ. ಹಾಗಾಗಿ ಆತ್ಮವಿಶ್ವಾಸವನ್ನು ನಾವು ಯಾವತ್ತಿಗೂ ಯಾವ…

Read More

ನಂಬಿ ಕೆಡಬೇಡಿ …. ನಂಬಿ ಮೂರ್ಖನಾಗಬೇಡಿ….!

ಮೋಸ ಹೋಗುವ ಮನಸಿನವರು ಪ್ರತಿ ಬಾರಿ ಮೋಸ ಹೋಗ್ತಾನೇ ಇರುತ್ತಾರೆ. ಅದು ತಿಳಿಯದೆ, ಅರಿಯದೆ, ಎಂಬುದಕ್ಕಿಂದ ಅತಿಯಾದ ವಿಶ್ವಾಸದಿಂದಲೇ ಆಗಿರುತ್ತದೆ. ಅದು ಅರಿವಿಗೆ ಬಂದಾಗ ಮನಸ್ಸಿಗೆ ತೀವ್ರ ಘಾಸಿಯಾಗುತ್ತದೆ. ಅದು ಕನಸಿನ ಕೋರಿಕೆಗೆ, ಮನಸ್ಸಿನ ಬೇಡಿಕೆಗೆ, ತನುವಿನ ಉಲ್ಲಾಸಕ್ಕೆ ತಣ್ಣೀರು ಎರಚುವುದಂತೂ ಖಂಡಿತಾ. ಕೆಲವು ಸಾರಿ ಅರಿಯದೆ, ಯಾರನ್ನೋ ಅರಿತುಕೊಳ್ಳಬೇಕೆನ್ನುವ ಮಹದಾಸೆಯಿಂದ ಗೆಳೆತನ ಮಾಡಿಬಿಡುತ್ತೇವೆ. ಆದರೆ ಮುಂದೆ ಗೊತ್ತಾಗುವಾಗ ತಡವಾಗುತ್ತದೆ, ಆ ಪರಿಚಯವೇ ಬಾಳಿಗೆ ಮುಳುವಾಗಿರುತ್ತದೆ. ಪ್ರತಿ ಬಾರಿಯೂ ಹಾಗೆಂದಲ್ಲ, ಆದರೆ ಅನೇಕರಿಗೆ ಇದರ ಅನುಭವ ಆಗಿಯೇ…

Read More

ನಗರದ ಪ್ರಮುಖ ರಸ್ತೆಯ ನಾಮ ಫಲಕದ ನಾಮವೇ ಕಾಣೆ ….. !

ಸ್ಟಾರ್ಟ್ ಸಿಟಿಯೆಂದು ಕರೆಸಿಕೊಳ್ಳುವ ಮಂಗಳೂರಿನ ರಸ್ತೆಗಳ ಅವ್ಯವಸ್ಥೆಗಳ ವ್ಯಥೆಯ ಕಥೆ ಒಂದೆಡೆಯಾದರೆ , ಸ್ಥಳ ನಾಮ ಫಲಕಗಳ ಅಕ್ಷರಗಳು ಅಳಿಸಿಹೋದರು ಅದನ್ನು ಮತ್ತೆ ಸರಿ ಮಾಡುವ ಪ್ರಯತ್ನವೇ ಅಲ್ಲಿ ನಡೆದಿರುವುದಿಲ್ಲ . ನಗರದ ಹಂಪನ್ ಕಟ್ಟೆಯ ಸಿಗ್ನಲ್ ಬಳಿಗೊಂದು ನಾಮ ಫಲಕದ ಇದ್ದು ಅದರ ನಾಮವೇ ಮಾಯವಾಗಿದೆ . ದಿನನಿತ್ಯ ಈ ಹಾದಿಯಾಗಿ ಹೊಸಬರು ಸಂಚಾರವನ್ನು ನಡೆಸುತ್ತಾರೆ. ಅಂಥವರಿಗೆ ಈ ಅಸ್ಪಷ್ಟವಾಗಿ ಗೋಚರಿಸುವ ನಾಮ ಫಲಕವು ಸ್ಪಷ್ಟವಾದ ಮಾಹಿತಿ ಎಷ್ಟರ ಮಟ್ಟಿಗೆ ನೀಡುತ್ತೆ ಎನ್ನುವ ಗೊಂದಲವಿದೆ ….

Read More

ಹಂಪೋ ಇದೋ ಜಂಪೋ ಇದೋ ……. ?

ಮಂಗಳೂರು ನಗರದ ಹೆಚ್ಚಿನ ರಸ್ತೆಗಳ ಸ್ಥಿತಿ ಅದೋಗತಿಗೆ ತಲುಪುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ . ಒಮ್ಮೆ ರೋಡಿನಲ್ಲಿ ಗುಂಡಿ ಬಿದ್ದರೆ , ಡಾಮರ್ ಕಿತ್ತೆದ್ದರೆ ಅದನ್ನು ಮತ್ತೆ ದುರಸ್ತಿ ಮಾಡುವ ಕಾರ್ಯ ನಡೆಯುವುದೇ ಅಲ್ಲೊಂದು ಅಪಘಾತದಿಂದ ಸಾವಾದ ಬಳಿಕವಷ್ಟೇ. ಹಿಂದೊಂದು ಅಪಘಾತವನ್ನು ಸಂಭವಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ರಸ್ತೆಯ ಬಗ್ಗೆ ಸರಕಾರ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ನಗರದ ವೆನ್ಲಾಕ್ ಆಸ್ಪತ್ರೆಯ ಹಿಂಬದಿ ರೈಲ್ವೇ ನಿಲ್ದಾಣ, ಅತ್ತಾವರದ ಕಡೆಗೆ ಹೋಗುವ ಮಾರ್ಗವೊಂದಿದೆ. ಈ ಮಾರ್ಗದ ಮಧ್ಯೆ ವೇಗವನ್ನು…

Read More

ಬೀಡಿ ಸೂಪಿನಲ್ಲಿ ಅರಳಿದ ರಾಂಕ್ ಕನಸ್ಸು

ಕರಾವಳಿ , ಮಲಬಾರ್ ಭಾಗದಲ್ಲಿ ಹೆಚ್ಹಾಗಿ ತಮ್ಮ ಜೀವನೋಪಾಯ ಸಾಧಿಸಲು ಅದೆಷ್ಟೋ ವನಿತೆಯರು ಬೀಡಿಯನ್ನು ಕಟ್ಟುತ್ತಾರೆ. ಆ ಬೀಡಿಯ ಸೂಪಿನಲ್ಲಿ ಅದೆಷ್ಟೋ ಜನರ ಬದುಕು ಬೆಳಕಾಗಿದೆ, ಅದೆಷ್ಟೋ ಸಾಧಕರು ಜನ್ಮ ಪಡೆದಿದ್ದಾರೆ. ನಾನು ಕೂಡ ಬಾಲ್ಯದಿಂದಲೂ ಈ ಬೀಡಿ ಕಟ್ಟುವುದನ್ನು ಕಂಡವ .ನನ್ನ ಮನೆಯಲ್ಲೂ ಬೀಡಿ ಕಟ್ಟುತ ಕಣ್ಣ ರೆಪ್ಪೆಯಂತೆ ಸಲಹುವ ಒಬ್ಬಳು ಮಹಾ ತಾಯಿ ಇದ್ದಾರೆ. ಮಡಿಲಲ್ಲಿ ನಾ ಆಸರೆ ಪಡೆಯುವ ದಿನದಿಂದ ಅವರ ಮೇಲೆ ಬೀಡಿಯ ಸೂಪು ಇರುತ್ತಿತ್ತು. ಮಳೆಗಾಲ ಇರಲಿ, ಚಳಿಗಾಲ ಇರಲಿ,…

Read More

ಗುರುಭ್ಯೋ ನಮಃ

ಅಂಧಕಾರದ ಕತ್ತಲನ್ನು ದೂರ ಮಾಡಿ ಬದುಕಿಗೆ ಜ್ಞಾನಜ್ಯೋತಿಯ ಬೆಳಗಿಸಿ ಜಗದ ಮಾಯೊಳಗಿನ ಮಹಿಮೆಯ ತಿಳಿಸಿದ ನನ್ನೆಲ್ಲಾ ಗುರುಗಳಿಗೆ ಪ್ರಣಾಮಗಳು. ಇಂದು ನನ್ನ ಬದುಕಿನ ಸುಂದರ ಕ್ಷಣಕ್ಕೆ ಕಾರಣರಾದ ನನ್ನ ಗುರುಗಳ ಬಗ್ಗೆ ನಾನು ಹೇಳಲೇಬೇಕು. ಸೋಮಾರಿಯಾದ ನನ್ನಂಥಹಾ ವಿದ್ಯಾರ್ಥಿಯಲ್ಲೂ ಬರವಣಿಗೆಯ ಅಭಿರುಚಿಯನ್ನು ಬೆಳಸಿ, ನನ್ನಿಂದ ಅಸಾಧ್ಯ ಎಂದುಕೊಂಡಿದ್ದ ಸಾಹಿತ್ಯ ರಚನೆಗೆ ನೆರಳಾಗಿ, ಪ್ರತೀ ಅಕ್ಷರದ ಹಿಂದಿನ ಶಕ್ತಿಯಾಗಿ , ಬಾಳಿಗೆ ನವ ಕನಸನ್ನು ಕಾಣಲು – ಅದರ ಸಾಕ್ಷಾತ್ಕಾರ ಮಾಡಲು ಸಾಧ್ಯ ಪಡಿಸುವ ಸೂರ್ತಿಯಾಗಿ, ಪತ್ರಕರ್ತ ದಿಟ್ಟ…

Read More
error: Content is protected !!