ದೈವಾರಾಧನೆ

ದೈವರಾಧನೆಯಲ್ಲಿ “ತೆoಬರೆ” ಬಹಳ ಮುಖ್ಯವಾದದ್ದು, ಎಣ್ಣೆ ಬೂಲ್ಯ ಹಿಡಿಯುವಾಗದಿಂದ ಹಿಡಿದು ದೈವ ಬಿರಿಯುವವರೆಗೆ ಇದು ದೈವ ನರ್ತಕರ ಕೈಯಲ್ಲಿ ಶಬ್ದ ಮಾಡುತ್ತಿರ ಬೇಕಾಗುತ್ತದೆ. ದೈವ ಅರ್ಧಲ ಹಾಕುವಾಗ ದೈವ ನರ್ತಕನ ಹೆಂಡತಿ ಅಥವಾ ಅಮ್ಮ ಇದನ್ನು ಬಡಿಯುತ್ತಾ ಪಾಡ್ದನ ಹೇಳುತ್ತಿರುತ್ತಾರೆ. ಒಂದೊಂದು ದೈವದ ಪಾಡ್ದನಕ್ಕೆ ಹಲವು ರೀತಿಯ ಶಬ್ದಗಳಿರುತ್ತದೆ, ಸೇರಿದ ಜನಗಳು ಮೌನವಾಗಿದ್ದರೆ, ಇದರ ಶಬ್ದ ಹಾಗೂ ಪಾಡ್ದನವನ್ನು ಕೇಳಲು ಒಳ್ಳೇದಾಗುತ್ತದೆಮೊದಲಿನ ಕಾಲದಲ್ಲಿ ದೈವ ಕೋಲವನ್ನು ನೆರೆಕರೆಯ ಮನೆ ಮನೆಗೆ ಹೋಗಿ ಹೇಳುತ್ತಿರಲಿಲ್ಲ, ತೆoಬರೆಯ ಶಬ್ದ ಕೇಳಿ…

Read More

ಮನುಜರೆಲ್ಲಾ ಒಂದೇ

ದೇವನೊಬ್ಬ ನಾಮ ಹಲವು ಎಂಬುದ ತಿಳಿದು ಬದುಕಿರಿಜಾತಿ ಮತ ಹಲವಿಹುದು ಕುಲವೊಂದೇ ಎಂದು ನಂಬಿರಿದೇಹಾಕೃತಿ ವ್ಯತ್ಯಾಸ ಹರಿವ ರಕ್ತ ಒಂದೇ ಅಗಿದೆ ತಿಳಿಯಿರಿಬದುಕು ಬಹುವಿದ ಜೀವದುಸಿರು ಸಮಾನವೆಂದು ಬಾಳಿರಿ ಭೇದ ಭಾವವ ತೋರುತಾ ಮನದಲಿ ಕಲ್ಮಶವ ತುಂಬದಿರಿದ್ವೇಷ ಅಸೂಯೆಯಿಂದ ಬೆರೆತ ಬದುಕು ನಾಶ ಮಾಡದಿರಿಮೇಲು ಕೀಳೆoದು ವ್ಯರ್ಥ ಕಿತ್ತಾಡಿ ಕುಲ ಜಗಳ ಗೈಯ್ಯದಿರಿಪಡೆದು ಬಂದ ಜೀವನದ ಪುಟಗಳನು ಸಾರ್ಥಕ ಗೊಳಿಸಿರಿ ಬರುವಾಗ ಕತ್ತಲೆ ಹೋಗುವಾಗ ಬೆತ್ತಲೆ ನಿಜ ಮರೆಯದಿರಿಹುಟ್ಟುವುದು ಆಕಸ್ಮಿಕ ಸಾವು ಶಾಶ್ವತ ಎಂಬುದನು ತಿಳಿದಿರಿಹುಟ್ಟು ಸಾವಿನ…

Read More

ಬಾಳಿನ ಚಿತ್ರಣ

ಸೊಗದ ಚೆಲುವ ಪ್ರಕೃತಿಯಲಿಮೊಗ್ಗು ಅರಳಿದೆ ಸುಮವಾಗಿಉದಯ ನೇಸರನ ಕಿರಣಗಳುಹೊಳೆವುದು ಹೊನ್ನ ಬೆಳಕಾಗಿ ನವಿಲ ಸುಂದರ ನರ್ತನ ಕಂಡುತುಂಬಿದ ಮನವು ಪುಳಕವಾಗಿಮಾಮರದಿ ಸ್ವರ ಕೋಗಿಲೆಯುಧ್ವನಿ ಗೂಡಿಸಿದೆ ಸುಶ್ರಾವ್ಯವಾಗಿ ಮುಂಜಾನೆಯು ಇಬ್ಬನಿ ಸುರಿದುಮಂಜು ಕವಿದು ಧರೆ ಮಸುಕಾಗಿನವ ದಿನವೊಂದು ಉದಯಿಸಿತುಬಾಳುವ ಸುಂದರ ಬದುಕಿಗಾಗಿ ಕರ್ತವ್ಯ ಪಾಲನೆಯ ಕಾಯಕದಿದಿನವೊಂದು ಕಳೆಯೇ ಕ್ಷಣವಾಗಿಸುಖ ಸಂತೋಷವು ಜೊತೆಗಿರಲುಜಾರಿತು ಕಷ್ಟಗಳು ಕರಗಿ ನೀರಾಗಿ ವರ್ಷಗಳು ಸಾಗಿ ಸರಿಯುತಿಹುದುದಿನದಗಳ ತೆರದಿ ಬಹಳ ವೇಗವಾಗಿದೊರೆತ ಜೀವನ ಅಂತ್ಯಗೊಳುವುದುಪಡೆದಿಹ ಆಯುಷ್ಯವು ಕಡಿಮೆಯಾಗಿ ಬರವಣಿಗೆ: ಡಾ. ವಾಣಿಶ್ರೀ ಕಾಸರಗೋಡುಗಡಿನಾಡ ಕನ್ನಡತಿ

Read More

ಇಂದು ವಿಶ್ವ ಚಾಕೊಲೇಟ್ ದಿನ; ನಿಮ್ಮ ನೆಚ್ಚಿನ ಸಿಹಿತಿಂಡಿಯ ಬಗ್ಗೆ ಈ 7 ಕುತೂಹಲಕಾರಿ ಸಂಗತಿಗಳು ನಿಮಗೆ ಗೊತ್ತೇ?*

ಚಾಕೊಲೇಟ್ ಎಂದರೆ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಅಚ್ಚುಮೆಚ್ಚಿನ ಸಿಹಿತಿಂಡಿ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಸಿದಾಗ ಅನೇಕ ಮಂದಿಗೆ ಮೊದಲಿಗೆ ನೆನಪಾಗುವುದು ಚಾಕೊಲೇಟ್. ಚಾಕೊಲೇಟ್ ಕೇಕ್, ಚಾಕೊಲೇಟ್ ಐಸ್‌ಕ್ರೀಮ್, ಹಾಟ್ ಚಾಕೊಲೇಟ್, ಡೆತ್ ಬೈ ಚಾಕೊಲೇಟ್, ಚಾಕೊಲೇಟ್ ಫ್ಲೇವರ್ ಪಾನೀಯಗಳು, ಚಾಕೊಲೇಟ್ ಟೀ, ಚಾಕೊಲೇಟ್ ಆರ್ಟ್ ಹೀಗೆ ಚಾಕೊಲೇಟ್ ರುಚಿ ಎಲ್ಲರ ಮನಸನ್ನೂ ಗೆದ್ದಿದೆ. ವಿಶ್ವ ಚಾಕೊಲೇಟ್ ದಿನದ ಅಂಗವಾಗಿ, ನಿಮ್ಮ ನೆಚ್ಚಿನ ಸಿಹಿತಿಂಡಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ: 1. ಒಂದು ಕಾಲದಲ್ಲಿ ಚಾಕೊಲೇಟ್ ಹಣದಂತೆ…

Read More

ಗೌರಿ

ತಲೆ ಬಾಚಿ ಎರಡು ಜುಟ್ಟು ಹಾಕಿ, ಯೂನಿಫಾರ್ಮ್ ಹಾಕಿಸಿ ನಾನು ಪಿಂಕಿಯನ್ನು ರೆಡಿ ಮಾಡಿದೆ . ಅಷ್ಟು ಹೊತ್ತಿಗೆ “ಗೌರಿ ಆಯ್ತೆನೇ?” ಎಂದು ರವಿ ಕೂಗಿದ. ಹಾ… ಆಯ್ತು ಎಂದು ಉತ್ತರಿಸುತ್ತಾ, ಶಾಲೆಯಲ್ಲಿ ಅಳಬೇಡ, ಎಲ್ಲರ ಜೊತೆ ಚೆನ್ನಾಗಿ ಮಾತಾಡು, ಫ್ರೆಂಡ್ಸ್ ಮಾಡಿಕೊ…. ಎಂದು ಬುದ್ಧಿಮಾತುಗಳನ್ನು ಹೇಳುತ್ತಾ ಕೈ ಹಿಡಿದು ಹೊರಗೆ ಕರೆತಂದೆ.ಇಂದು ನನ್ನ ಮಗಳು ಪಿಂಕಿಗೆ ಶಾಲೆಯ ಮೊದಲ ದಿನ, ತುಂಬಾ ಖುಷಿಯಿಂದ ಅವಳು ಟೆಡ್ಡಿ ಬೇರ್ ಬ್ಯಾಗನ್ನು ಬೆನ್ನಿಗೆ ಹಾಕಿಕೊಳ್ಳುತ್ತಾ ಅಪ್ಪನೊಂದಿಗೆ ಬೈಕಿನಲ್ಲಿ ಹತ್ತಿ…

Read More

ಭರವಸೆಯೇ ಸುಳ್ಳಾದರೆ ಭಾವನೆ ಸಾಯುತ್ತದೆ

ಭರವಸೆ ಒಂದು ವಸ್ತುವಿನ ಮೇಲೆಯಾಗಲಿ, ಒಬ್ಬರ ಮೇಲೆಯಾಗಲಿ ಮೂಡಲು ಸಲ್ಪ ಸಮಯ ಹಿಡಿಯುತ್ತದೆ . ಆದರೆ ಆ ಭಾವನೆ ಹುಸಿಯಾಗಲು ಮಹಾ ತಪ್ಪಸ್ಸಿನ ಸಮಯ ಬೇಕಾಗಿರುವುದಿಲ್ಲ . ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಭಾವನೆ ಹುಸಿಯಾಗಲು ಅರೆ ನಿಮಿಷಗಳು ಸಾಕಾಗುತ್ತೆ. ಈ ಕ್ಷಣ ಬೆಟ್ಟದಷ್ಟು ನಿರೀಕ್ಷೆಯ ಭರವಸೆ ಜರಿದೇ ಹೋಗುತ್ತದೆ. ಒಮ್ಮೆ ಭರವಸೆಗಳು ಸುಳ್ಳಾದರೆ ಅದು ಅರ್ಥ ಹೀನವಾಗಿ ಹೋಗುವುದು ಖಂಡಿತ.ಜೀವನದಲ್ಲಿ ಅದೆಷ್ಟೋ ಬಾರಿ ಈ ರೀತಿಯಾಗಿ ಬದುಕು ಸಾಗಬೇಕು,ಇವರೊಂದಿಗೆ ಬದುಕು ಸಾಗಬೇಕು, ಆಸೆಯು ಆಸೆಯಾಗಿ…

Read More

ದಲಿತ ಚಳುವಳಿಯ ಜೊತೆಗೆ ಕಮ್ಯುನಿಸ್ಟ್ ಚಳುವಳಿಯನ್ನು ಬೆಸುಗೆ ಹಾಕಿದ ದೇಶದ ಮೊದಲ ದಲಿತ ಕಮ್ಯುನಿಸ್ಟ್ RB ಮೋರೆಯವರ ಜೀವನ ಚರಿತ್ರೆ ನಿಜಕ್ಕೂ ರೋಮಾಂಚನಕಾರಿ ಅನುಭವ

ಎಳೆಯ ಪ್ರಾಯದಲ್ಲೇ ಜಾತಿ ತಾರತಮ್ಯ, ಅಸ್ಪ್ರಶ್ಯತೆಯ ನೋವನ್ನುಂಡು ದಲಿತ ಸಮುದಾಯಕ್ಕಾಗುವ ಅವಮಾನ ಬೇಗುದಿಗಳನ್ನು ಸ್ವತಃ ಅನುಭವಿಸಿದ ಕಾಂ.ಆರ್ ಬಿ ಮೋರೆ ಈ ದೇಶ ಕಂಡಂತಹ ಮೊದಲ ದಲಿತ ಕಮ್ಯುನಿಸ್ಟ್. ಕಡು ಬಡತನ, ತೀವ್ರ ಸಂಕಷ್ಟಗಳನ್ನು ಎದುರಿಸಿದ ಮೋರೆಯವರು ಬಾಲ್ಯದಲ್ಲಿ ಶಿಕ್ಷಣ ಪಡೆಯಲಿಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದರು.ದಲಿತರ ನೋವಿಗೆ ಧ್ವನಿಯಾದ ಮೋರೆಯವರು ದಲಿತ ಚಳುವಳಿಗಾಗಿ ತನ್ನನ್ನು ತಾನು ಸಮರ್ಪಿಸುವ ಮೂಲಕ ಡಾ.ಬಿ ಆರ್ ಅಂಬೇಡ್ಕರ್ ರವರಿಗೆ ಅತ್ಯಂತ ಸನಿಹದ ಸಹವರ್ತಿಯಾದರು.ಮಹಾಡ್ ಚಳುವಳಿಗೆ ಅಂಬೇಡ್ಕರ್ ರವರನ್ನು ಕರೆತರುವ ಮೂಲಕ ಅಂಬೇಡ್ಕರ್ ರವರು…

Read More

ಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಬಲಗೊಂಡರೆ ಮಾತ್ರ ಸ್ವಚ್ಛ ಪರಿಸರ ನಿರ್ಮಾಣಗೊಳ್ಳಲು ಸಾಧ್ಯ – ಸಿ.ಅರ್ಪಿತಾ

ಮನುಷ್ಯ ತನ್ನ‌ ಸ್ವಾರ್ಥಕ್ಕಾಗಿ ಪರಿಸರವನ್ನೇ ಹಾಳುಗೆಡಹುತ್ತಿದ್ದು,ಅದರ ಪರಿಣಾಮ ಇಡೀ ಭೂಮಂಡಲದ ಮೇಲೆ ಬೀರುತ್ತಿದೆ.ಉಳ್ಳವರ ಸ್ವಾರ್ಥಲಾಲಸೆಗಾಗಿ ಇಡೀ ಪರಿಸರವನ್ನೇ ಬಲಿಕೊಡಲಾಗುತ್ತಿದೆ.ಇಂತಹ ಸಂದರ್ಭದಲ್ಲಿ ಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದಾಗ ಮಾತ್ರವೇ ಭವಿಷ್ಯತ್ತಿನಲ್ಲಿ ಸ್ವಚ್ಛ ಪರಿಸರ ನಿರ್ಮಾಣಗೊಳ್ಳಲು ಸಾಧ್ಯ ಎಂದು ಜೆಪ್ಪು ಸಂತ ಜೆರೋಸಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪೂಜ್ಯನೀಯ ಸಿಸ್ಟರ್ ಅರ್ಪಿತಾರವರು ಅಭಿಪ್ರಾಯಪಟ್ಟರು. ಅವರು ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೆಪ್ಪು ಸಂತ ಜೆರೋಸಾ ಫ್ರೌಢಶಾಲೆಯಲ್ಲಿ ಜರುಗಿದ ಗಿಡ ಬೆಳೆಸೋಣ,ನಾಡು ಉಳಿಸೋಣ…

Read More

ಬಾಡುತ್ತಿರುವ ಹಸಿರು ಕನಸು: ಮಳೆಯಿಲ್ಲದ ಮಣ್ಣಿನ ಆಕ್ರಂದನ ಮತ್ತು ರೈತನ ಬದುಕಿನ ಪರೀಕ್ಷೆ

ಬೆಳಗಿನ ಜಾವದಲ್ಲಿ ಎದ್ದು ತೋಟದ ಅಂಚಿಗೆ ಬಂದು ನಿಂತಾಗ, ಮಣ್ಣಿನ ಒಡಲಲ್ಲಿ ತೇವಾಂಶದ ಹದವೊಂದನ್ನೇ ನಿರೀಕ್ಷಿಸುವ ರೈತನ ಕಣ್ಣುಗಳಿಗೆ ಈಗ ಆಕಾಶವು ಅತಿದೊಡ್ಡ ವಂಚನೆಯಂತೆ ಕಾಣುತ್ತಿದೆ. ನೆನೆದ ಮಣ್ಣಿನ ಸುವಾಸನೆ ಮರೆತೇ ಹೋಯಿತೇನೋ ಎಂಬ ಆತಂಕ, ದಿನದಿಂದ ದಿನಕ್ಕೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯೊಂದು ಹೊರಹಾಕಿರುವ ಸತ್ಯವೇನೆಂದರೆ, ದೇಶಾದ್ಯಂತ ಮುಂಗಾರು ಮಳೆಯು ಶೇ. 42ರಷ್ಟು ಕೊರತೆಯನ್ನು ಎದುರಿಸುತ್ತಿದೆ ಮತ್ತು ಈ ಪರಿಸ್ಥಿತಿ ಅಷ್ಟು ಸುಲಭಕ್ಕೆ ಚೇತರಿಸಿಕೊಳ್ಳುವುದು ಕಷ್ಟಕರವಾಗಿದೆ. ಜೂನ್ ತಿಂಗಳು ಮಳೆಹನಿಗಳ ಸಂಭ್ರಮದ ತಿಂಗಳಾಗಬೇಕಿತ್ತು,…

Read More

ಅಪ್ಪನ ಕೈ ಮೇಲಿರಲಿ… ಮೊದಲ ಸಂಬಳದ ಹಿಂದೆ ಅಡಗಿದ ಕಣ್ಣೀರು…!

ಇಂಜಿನಿಯರಿಂಗ್‌ ಓದಿ ಉದ್ಯೋಗ ಪಡೆದು, ಜೀವನದ ಮೊದಲ ಸಂಬಳ ಕೈಗೆ ಬಂದ ದಿನ. ಅವನ ಕಣ್ಣುಗಳಲ್ಲಿ ಸಂತೋಷದ ಹೊಳಪು, ಹೃದಯದಲ್ಲಿ ಕೃತಜ್ಞತೆಯ ಅಲೆ. ಮನೆಗೆ ಬಂದು ಆ ಸಂಬಳವನ್ನು ತಾಯಿಯ ಕೈಯಲ್ಲಿಟ್ಟು, ಅಮ್ಮಾ… ಇದನ್ನು ಅಪ್ಪನಿಗೆ ಕೊಡಿ ಎಂದನು. ಆಗ ತಾಯಿ ಮೃದುವಾಗಿ ನಗುತ್ತಾ ಹೇಳಿದಳು: ಮಗನೇ, ನೀನೇ ನಿನ್ನ ಕೈಯಿಂದ ಕೊಡು. ಅದು ನಿನ್ನ ಅಪ್ಪನಿಗೆ ತುಂಬಾ ಸಂತೋಷ ಕೊಡುತ್ತದೆ… ಆದರೆ ಮಗನ ಕಣ್ಣುಗಳು ತೇವಗೊಂಡವು. ಗಂಟಲು ಬಿಗಿಯಿತು. ನಿಧಾನವಾಗಿ ಹೇಳಿದನು: “ಇಲ್ಲ ಅಮ್ಮಾ… ನೀವೇ…

Read More
error: Content is protected !!