ನಗರದ ಪ್ರಮುಖ ರಸ್ತೆಯ ನಾಮ ಫಲಕದ ನಾಮವೇ ಕಾಣೆ ….. !

ಸ್ಟಾರ್ಟ್ ಸಿಟಿಯೆಂದು ಕರೆಸಿಕೊಳ್ಳುವ ಮಂಗಳೂರಿನ ರಸ್ತೆಗಳ ಅವ್ಯವಸ್ಥೆಗಳ ವ್ಯಥೆಯ ಕಥೆ ಒಂದೆಡೆಯಾದರೆ , ಸ್ಥಳ ನಾಮ ಫಲಕಗಳ ಅಕ್ಷರಗಳು ಅಳಿಸಿಹೋದರು ಅದನ್ನು ಮತ್ತೆ ಸರಿ ಮಾಡುವ ಪ್ರಯತ್ನವೇ ಅಲ್ಲಿ ನಡೆದಿರುವುದಿಲ್ಲ . ನಗರದ ಹಂಪನ್ ಕಟ್ಟೆಯ ಸಿಗ್ನಲ್ ಬಳಿಗೊಂದು ನಾಮ ಫಲಕದ ಇದ್ದು ಅದರ ನಾಮವೇ ಮಾಯವಾಗಿದೆ . ದಿನನಿತ್ಯ ಈ ಹಾದಿಯಾಗಿ ಹೊಸಬರು ಸಂಚಾರವನ್ನು ನಡೆಸುತ್ತಾರೆ. ಅಂಥವರಿಗೆ ಈ ಅಸ್ಪಷ್ಟವಾಗಿ ಗೋಚರಿಸುವ ನಾಮ ಫಲಕವು ಸ್ಪಷ್ಟವಾದ ಮಾಹಿತಿ ಎಷ್ಟರ ಮಟ್ಟಿಗೆ ನೀಡುತ್ತೆ ಎನ್ನುವ ಗೊಂದಲವಿದೆ ….

Read More

ಹಂಪೋ ಇದೋ ಜಂಪೋ ಇದೋ ……. ?

ಮಂಗಳೂರು ನಗರದ ಹೆಚ್ಚಿನ ರಸ್ತೆಗಳ ಸ್ಥಿತಿ ಅದೋಗತಿಗೆ ತಲುಪುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ . ಒಮ್ಮೆ ರೋಡಿನಲ್ಲಿ ಗುಂಡಿ ಬಿದ್ದರೆ , ಡಾಮರ್ ಕಿತ್ತೆದ್ದರೆ ಅದನ್ನು ಮತ್ತೆ ದುರಸ್ತಿ ಮಾಡುವ ಕಾರ್ಯ ನಡೆಯುವುದೇ ಅಲ್ಲೊಂದು ಅಪಘಾತದಿಂದ ಸಾವಾದ ಬಳಿಕವಷ್ಟೇ. ಹಿಂದೊಂದು ಅಪಘಾತವನ್ನು ಸಂಭವಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ರಸ್ತೆಯ ಬಗ್ಗೆ ಸರಕಾರ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ನಗರದ ವೆನ್ಲಾಕ್ ಆಸ್ಪತ್ರೆಯ ಹಿಂಬದಿ ರೈಲ್ವೇ ನಿಲ್ದಾಣ, ಅತ್ತಾವರದ ಕಡೆಗೆ ಹೋಗುವ ಮಾರ್ಗವೊಂದಿದೆ. ಈ ಮಾರ್ಗದ ಮಧ್ಯೆ ವೇಗವನ್ನು…

Read More

ಬೀಡಿ ಸೂಪಿನಲ್ಲಿ ಅರಳಿದ ರಾಂಕ್ ಕನಸ್ಸು

ಕರಾವಳಿ , ಮಲಬಾರ್ ಭಾಗದಲ್ಲಿ ಹೆಚ್ಹಾಗಿ ತಮ್ಮ ಜೀವನೋಪಾಯ ಸಾಧಿಸಲು ಅದೆಷ್ಟೋ ವನಿತೆಯರು ಬೀಡಿಯನ್ನು ಕಟ್ಟುತ್ತಾರೆ. ಆ ಬೀಡಿಯ ಸೂಪಿನಲ್ಲಿ ಅದೆಷ್ಟೋ ಜನರ ಬದುಕು ಬೆಳಕಾಗಿದೆ, ಅದೆಷ್ಟೋ ಸಾಧಕರು ಜನ್ಮ ಪಡೆದಿದ್ದಾರೆ. ನಾನು ಕೂಡ ಬಾಲ್ಯದಿಂದಲೂ ಈ ಬೀಡಿ ಕಟ್ಟುವುದನ್ನು ಕಂಡವ .ನನ್ನ ಮನೆಯಲ್ಲೂ ಬೀಡಿ ಕಟ್ಟುತ ಕಣ್ಣ ರೆಪ್ಪೆಯಂತೆ ಸಲಹುವ ಒಬ್ಬಳು ಮಹಾ ತಾಯಿ ಇದ್ದಾರೆ. ಮಡಿಲಲ್ಲಿ ನಾ ಆಸರೆ ಪಡೆಯುವ ದಿನದಿಂದ ಅವರ ಮೇಲೆ ಬೀಡಿಯ ಸೂಪು ಇರುತ್ತಿತ್ತು. ಮಳೆಗಾಲ ಇರಲಿ, ಚಳಿಗಾಲ ಇರಲಿ,…

Read More

ಗುರುಭ್ಯೋ ನಮಃ

ಅಂಧಕಾರದ ಕತ್ತಲನ್ನು ದೂರ ಮಾಡಿ ಬದುಕಿಗೆ ಜ್ಞಾನಜ್ಯೋತಿಯ ಬೆಳಗಿಸಿ ಜಗದ ಮಾಯೊಳಗಿನ ಮಹಿಮೆಯ ತಿಳಿಸಿದ ನನ್ನೆಲ್ಲಾ ಗುರುಗಳಿಗೆ ಪ್ರಣಾಮಗಳು. ಇಂದು ನನ್ನ ಬದುಕಿನ ಸುಂದರ ಕ್ಷಣಕ್ಕೆ ಕಾರಣರಾದ ನನ್ನ ಗುರುಗಳ ಬಗ್ಗೆ ನಾನು ಹೇಳಲೇಬೇಕು. ಸೋಮಾರಿಯಾದ ನನ್ನಂಥಹಾ ವಿದ್ಯಾರ್ಥಿಯಲ್ಲೂ ಬರವಣಿಗೆಯ ಅಭಿರುಚಿಯನ್ನು ಬೆಳಸಿ, ನನ್ನಿಂದ ಅಸಾಧ್ಯ ಎಂದುಕೊಂಡಿದ್ದ ಸಾಹಿತ್ಯ ರಚನೆಗೆ ನೆರಳಾಗಿ, ಪ್ರತೀ ಅಕ್ಷರದ ಹಿಂದಿನ ಶಕ್ತಿಯಾಗಿ , ಬಾಳಿಗೆ ನವ ಕನಸನ್ನು ಕಾಣಲು – ಅದರ ಸಾಕ್ಷಾತ್ಕಾರ ಮಾಡಲು ಸಾಧ್ಯ ಪಡಿಸುವ ಸೂರ್ತಿಯಾಗಿ, ಪತ್ರಕರ್ತ ದಿಟ್ಟ…

Read More

ಓಣಂ

ಓಣಂ ಹಬ್ಬವನ್ನು ಮಲಯಾಳಿಗಳು ಆಚರಿಸುವಂತಹ ವಿಶಿಷ್ಟ ಬಗೆಯ ಹಬ್ಬವಾಗಿದೆ . ಕರಾವಳಿ ಜಿಲ್ಲೆಗಳಲ್ಲಿಯೂ ಈ ಹಬ್ಬದ ಆಚರಣೆಯನ್ನು ತುಂಬಾನೇ ಸಂಭ್ರಮದಿಂದ ಆಚರಿಸುತ್ತಾರೆ . ಈ ಹಬ್ಬವು ಮಹಾಬಲಿ ಚಕ್ರವರ್ತಿ ಅಥವಾ ಮಾವೇಲಿ ಎಂದು ಕರೆಯುವ ಮಹಾರಾಜನೊಂದಿಗೆ ನಂಟನ್ನು ಆತನ ನೆನೆಪಿಗಾಗಿ ಆಚರಣೆಯನ್ನು ಮಾಡುವ ದೇವರ ನಾಡಿನ ಹಬ್ಬವಾಗಿದೆ . ಈ ಹಬ್ಬ ತನ್ನದೇ ಆದ ಹಿನ್ನಲೆಯನ್ನು ಹೊಂದಿದೆ , ತಲೆ ತಲೆ ಮಾರುಗಳ ಹಿಂದೆ ಮಲಯಾಳಂ ನಾಡನ್ನು ಮಹಾಬಲಿ ಎಂಬ ಅಸುರರಾಜನು ಆಳುತ್ತಿದ್ದನು .ಆತ ಅಸುರನಾದರೂ ಅತ್ಯಂತ…

Read More

ಶ್ರೀ ಅಯ್ಯಂಗಾಳಿ (1863 – 1941 )

ಕೇರಳದ ನವೋತ್ಥಾನ ನಾಯಕರಲ್ಲಿ ಒಬ್ಬರಾದ , ಅಗ್ರಗಣ್ಯ ಧೀಮಂತ ನಾಯಕರು ಆಗಿರುವ ದಲಿತರ ಸಾಮಾಜಿಕ ರಾಜಕೀಯ ಶಿಕ್ಷಣಕ್ಕಾಗಿ ಹಗಲಿರುಳು ದುಡಿದ ಕೇರಳದ ಅಂಬೇಡ್ಕರ್ ಎಂದು ವಿಶೇಷಣವನ್ನು ಪಡೆದಿರುವ ಕೇರಳದ ಮಹಾನ್ ಪುತ್ರನಾಗಿರುವ ಶ್ರೀ ಅಯ್ಯಂಕಾಲಿ ಅವರ ಜನ್ಮದಿನವನ್ನು ಅಗಸ್ಟ್ 28ರಂದು ಎಲ್ಲಾ ವರ್ಷ ಅಯಂಕಾಲಿ ದಿನವನ್ನಾಗಿ ಆಚರಿಸಲಾಗುವುದು. ಶ್ರೀ ಅಯ್ಯಂಗಾಳಿಯವರು ತಿರುವನಂತಪುರದ ವೆಂಗನೂರು ಎಂಬಲ್ಲಿ ಶ್ರೀ ಅಯ್ಯನ್ ಮತ್ತು ಶ್ರೀಮತಿ ಮಾಲ ದಂಪತಿಗಳಿಗೆ 1863 ಅಗಸ್ಟ್ 28ರಂದು ಜನಿಸಿದರು. ಕೇರಳದ ದಲಿತ ಸಮುದಾಯದ ಸಾಮಾಜಿಕ ರಾಜಕೀಯ ಶೈಕ್ಷಣಿಕ…

Read More

ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9 ರಂದು. CPR V/S BSR. “ದಕ್ಷಿಣಾಸ್ತ್ರಕ್ಕೆ” ವೇದಿಕೆ ಸಜ್ಜು

ಮುಂಬರುವ ಉಪರಾಷ್ಟ್ರಪತಿ ಚುನಾವಣೆಯು ಎರಡು ಒಕ್ಕೂಟಗಳ ಮಧ್ಯೆ ನಡೆಯುವ ಸ್ಪರ್ಧೆಗಿಂತಲೂ ದಕ್ಷಿಣದ ಎರಡು ರಾಜ್ಯಗಳ ಮಧ್ಯೆ ನಡೆಯುವ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದೆ .NDA ತನ್ನ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ನಾಮಪತ್ರ ಸಲ್ಲಿಸಿದ್ದಾರೆ. ಸಿಪಿ ರಾಧಾಕೃಷ್ಣನ್ ತಮಿಳುನಾಡಿನ ಹಿರಿಯ ಬಿಜೆಪಿ ನಾಯಕರಾಗಿದ್ದು ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯ ಕರ್ತರಾಗಿದ್ದರೆ. 1974 ರಲ್ಲಿ ಭಾರತೀಯ ಜನ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಕೊಯಂಬತ್ತೂರು ಲೋಕ ಸಭಾ ಕ್ಷೇತ್ರದಿಂದ ಎರಡು ಭಾರಿ ಸಂಸದರಾಗಿ ,…

Read More

ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9 ರಂದು.ಸಿ ಪಿ ರಾಧಾಕೃಷ್ಣನ್ ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥ ?

ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥರಾದ ಉಪರಾಷ್ಟ್ರಪತಿ ಚುನಾವಣೆಯು ಸೆಪ್ಟೆಂಬರ್ 9 ರಂದು ನಡೆಸಲು ಚುನಾವಣಾ ಆಯೋಗ ಈಗಾಗಲೇ ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ .ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ತನ್ನ ಹುದ್ದೆಗೆ ಇತ್ತೀಚಿಗೆ ಧಿಡೀರ್ ರಾಜೀನಾಮೆ ನೀಡಿದ ಕಾರಣ ಈ ಸ್ಥಾನ ತೆರವು ಆಗಿದೆ.ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ ಹಾಗೂ ಲೋಕಸಭೆ ಯ ಚುನಾಯಿತ ಪ್ರತಿನಿಧಿಗಳು ಹಾಗೂ ನಾಮನಿರ್ದೇಶನಗೊಂಡ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು. ಸಂವಿಧಾನದ 68 ನೇ ವಿಧಿ ಕಾಲಂ 2…

Read More

ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದ ಹೊಸದುರ್ಗ ಕೋಟೆ-ಇದೀಗ ಅನಾಥ ಸ್ಥಿತಿಯಲ್ಲಿ

ಕೆಳದಿ ನಾಯಕರಿಂದ ಕೇರಳದ ದಕ್ಷಿಣದಲ್ಲಿ ಸ್ಥಾಪಿತ ಕೋಟೆಗಳಲ್ಲಿ ಹೊಸದುರ್ಗ ಕೋಟೆಯು ಒಂದು . ಬಹುಷಃ ಈ ಕೋಟೆ ಕೆಳದಿ ನಾಯಕರ ಆಳ್ವಿಕೆ ಕಾಲಘಟದ ಕೊನೆಯಲ್ಲಿ ನಿರ್ಮಿಸಲಾಗಿತ್ತೆಂದು ಇತಿಹಾಸಕಾರರ ಅಭಿಪ್ರಾಯವಾಗಿದೆ . ಹಾಗಾಗಿ ಈ ಭವ್ಯತೆಯನ್ನು ಹೊಸದುರ್ಗ ಎಂದು ಕರೆಯುತ್ತಾರೆ . ಹೊಸ ಎಂದರೆ ನವ , ದುರ್ಗ ಎಂದರೆ ಕೋಟೆ ಎನ್ನುವ ಅರ್ಥವನ್ನು ನೀಡುತ್ತದೆ . ಈಗಾಗಲು ಈ ಪ್ರದೇಶವನ್ನು ಕನ್ನಡಿಗರು ಮತ್ತು ದಾಖಲೆಗಳಲ್ಲಿ ಹೊಸದುರ್ಗ ಎಂದು . ಮಲೆಯಾಳಿಗಳು ಪುದಿಯಕೋಟ ಎಂದು ಕರೆಯುತ್ತಾರೆ . ಹೊಸದುರ್ಗ…

Read More

ತುಳುನಾಡ ಹೆಗ್ಗುರುತು ಚಂದ್ರಗಿರಿ ಕೋಟೆಯ ಕಥೆ ವ್ಯಥೆ

ಉತ್ತರ ಕೇರಳದ ಇತಿಹಾಸ ಅರಿಯುವುದು ಸುಲಭದ ಮಾತಲ್ಲ . ಈ ಭಾಗದ ಇತಿಹಾಸವನ್ನು ತಿಳಿಯುವಲ್ಲಿ ಬರಹಗಳ ಹೊರತಾಗಿ ಇಲ್ಲಿನ ಪುರಾತತ್ವ ವಸ್ತು ಆಧಾರಗಳು ಸಾಕಷ್ಟು ಸಹಕಾರಿಯಾಗಿದೆ. ಅವುಗಳು ಸತ್ಯ ಇತಿಹಾಸಕ್ಕೆ ಕೈ ಕನ್ನಡಿಯಂತಿವೆ. ಅವುಗಳಲ್ಲಿ ಶಾಸನಗಳು , ಕೋಟೆಗಳು , ದೇವಾಲಯಗಳು , ನಾಣ್ಯಗಳು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತವೆ. ಅವು ಇತಿಹಾಸದ ಪುನರ್ ರಚನೆಗೆ ಸಹಕಾರಿಯಾಗುತ್ತವೆ. ಈ ನಾಡಿನ ಸಂಸ್ಕೃತಿಯ ನಾಡಿಮಿಡಿತದಂತಿರುವ ಕೋಟೆ ಕೊತ್ತಲಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಲೇಬೇಕು . ಕಾಸರಗೋಡನ್ನು ಕೋಟೆಗಳ ನಾಡೆಂದು ಕರೆಯುತ್ತಾರೆ. ಯಾಕೆಂದರೆ…

Read More
error: Content is protected !!