ದುಬೈ : ಅತಂತ್ರದಲ್ಲಿರುವ ಪ್ರವಾಸಿಗರಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ನೆರವು, ತುರ್ತು ಸಹಕಾರಕ್ಕಾಗಿ ಸರ್ಕಾರಕ್ಕೆ ಮನವಿ

ದುಬೈ :ಅನಿವಾಸಿ ಕನ್ನಡಿಗರ ಪೋಷಕರಾದ ರೊನಾಲ್ಡ್ ಕೊಲಸೋ ಅವರ ನೇತೃತ್ವದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು, ಯುಎಇಯಲ್ಲಿ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಲು ಹಾಗೂ ಇಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರ ಮಾಹಿತಿ ಸಂಗ್ರಹಿಸಲು ಮತ್ತು ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಳ್ಳಲು ಝೂಮ್ ಸಭೆಯನ್ನು ಆಯೋಜಿಸಿತು.ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಸುರಕ್ಷಿತವಾಗಿದ್ದು, ಇಲ್ಲಿನ ಸರ್ಕಾರ ಎಲ್ಲಾ ಅನಿವಾಸಿಗಳ ಸುರಕ್ಷತೆಯನ್ನು ಸಮರ್ಪಕವಾಗಿ ಕಾಪಾಡುತ್ತಿದೆ, ಯಾವುದೇ ಆತಂಕಕ್ಕೆ ಒಳಗಾಗದೆ, ಅನಧಿಕೃತ ಅಥವಾ ಅಪಪ್ರಚಾರದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಬಾರದು…

Read More

ಕಟ್ಟೆಮಾರ್ ತುಳು ಚಿತ್ರ ದುಬೈ ಯಲ್ಲಿ ಭರ್ಜರಿ ಬಿಡುಗಡೆ

ದುಬೈ: ಕರಾವಳಿಯ ಯಶಸ್ವಿ ಪ್ರದರ್ಶನ ಗೊಳ್ಳುತ್ತಿರುವ ತುಳು ಚಿತ್ರ ಕಟ್ಟೆಮಾರ್ ದುಬೈನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿ ಅಪಾರ ಪ್ರತಿಕ್ರಿಯೆ ಪಡೆಯುತ್ತಿದೆ. ಯುಎಇಯಲ್ಲಿ ವಾಸಿಸುವ ತುಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗಳಿಗೆ ಆಗಮಿಸಿ ಚಿತ್ರತಂಡಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದರು. ದುಬೈ ನಗರದ ಪ್ರಮುಖ ಥಿಯೇಟರ್‌ನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು. ವಿದೇಶದಲ್ಲಿ ತುಳು ಚಿತ್ರದ ಬಿಡುಗಡೆ ಕರಾವಳಿ ಕಲಾವಿದರ ಪರಿಶ್ರಮಕ್ಕೆ ದೊರೆತ ದೊಡ್ಡ ಗೌರವವೆಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದರು .ಚಿತ್ರದ ಕಥೆ,…

Read More

ದುಬೈನಲ್ಲಿ ಸಡಗರದ ಕ್ರೀಡಾಕೂಟ: ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’ ಹಾಗೂ ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ

ದುಬೈ: ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ಆಯೋಜಿಸಲಾಗಿದ್ದ ‘ಕ್ರಿಕೆಟ್ ಸೀಸನ್–6’ ಹಾಗೂ ಪ್ರಥಮ ವರ್ಷದ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟವು ಫೆಬ್ರವರಿ 15 ರಂದು ದುಬೈನಲ್ಲಿ ಅತ್ಯಂತ ವೈಭವದಿಂದ ಜರುಗಿತು. ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷರಾದ ಸುರೇಶ್ ಕುಂಪಲ ಅವರು ತಮ್ಮ ಮಾತೃಶ್ರೀ ದಿವಂಗತ ಶ್ರೀಮತಿ ಕಮಲ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ್ದರು. ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಮೋಹನ್ ಕಡಂಬಳ, ಉಪಾಧ್ಯಕ್ಷ ಸುರೇಶ್ ಕುಂಪಲ ಹಾಗೂ…

Read More

ತುಳುನಾಡಿನ ಆಚರಣೆಗಳಲ್ಲಿ ಮೂಡನಂಬಿಕೆ ವೈಭವೀಕರಣಕ್ಕೆ ಕಳವಳ ವ್ಯಕ್ತಪಡಿಸಿದ ಡಾ. ಸಂತೋಷ್ ಗುರೂಜಿ

ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬಾಯಿಯಲ್ಲಿ ಯು.ಎ.ಇ. ಬಂಟ್ಸ್ ಮತ್ತು ಯು.ಎ.ಇ.ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ಫೆಬ್ರವರಿ 8ನೇ ತಾರೀಕಿನಂದು ತುಳುನಾಡ ಸಂಸ್ಕೃತಿಯ ಅನಾವರಣ ಉಪನ್ಯಾಸ ಕಾರ್ಯಕ್ರಮ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಶ್ರೀ ಬಾರ್ಕೂರು ಮಹಾ ಸಂಸ್ಥಾನ (ಭಾರ್ಗವಬೀಡು ಬಾರ್ಕೂರು) ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ|| ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ಪ್ರವಚನ ಹಾಗೂ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.ಸುಮಂಗಲೆಯರ ಪೂರ್ಣ ಕುಂಭ…

Read More

ದಿ|| ವಸಂತ ಬೇಕಲ್ ಸ್ಮರಣಾರ್ಥ ಶಾರ್ಜಾದಲ್ಲಿ ಮಾರ್ಗದೀಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್

ಮಾರ್ಗ ದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿ|| ಶ್ರೀ ವಸಂತ ಬೇಕಲ್ ರವರ ಸವಿನೆನಪಿಕಾಗಿ “ಮಾರ್ಗದೀಪ ಪ್ರೀಮಿಯರ್ ಲೀಗ್” ಕ್ರಿಕೆಟ್ ಟೂರ್ನಮೆಂಟ್,ಯು ಎ ಈ ಯ ಶಾರ್ಜಾದ NASS ಕ್ರಿಕೆಟ್ ಸ್ಟೇಡಿಯಂನಲ್ಲಿ ಅದ್ಧೂರಿಯಿಂದ ಜರುಗಿತು. ಟೂರ್ನಮೆಂಟ್ ನಲ್ಲಿ ಶ್ರೀ ಮಂಜುನಾಥ ಕಾಸರಗೋಡು ಹಾಗೂ ಶ್ರೀ ದಾಮೋದರ ರಾವ್ ರವರ ಮಾಲೀಕತ್ವದ “ಗಡಿನಾಡು ಸ್ಟ್ರೈಕರ್”, ಶ್ರೀ ರಘುನಾಥ್ ಎಂ ಹಾಗೂ ಶ್ರೀ ಬಿಪಿನ್ ಚಂದ್ರ ನಾಯಕ ಮಾಲೀಕತ್ವದ “ಬೇಕಲ್ ಫೋರ್ಟ್ ರೈಡರ್ಸ್”, ಶ್ರೀ ಶ್ರೀಪತಿ ಕೆ ಹಾಗೂ ಶ್ರೀ…

Read More

ಅಬುಧಾಬಿಯಲ್ಲಿ ಭೀಕರ ರಸ್ತೆ ಅಪಘಾತ.ಒಂದೇ ತಾಯಿಯ ನಾಲ್ಕು ಮಕ್ಕಳು ಮೃತ್ಯು .ಪೋಷಕರ ಸ್ಥಿತಿ ಗಂಭೀರ

ಅಬುಧಾಬಿಯಲ್ಲಿ ಲಿವಾ ಫೆಸ್ಟಿವಲ್‌ನಲ್ಲಿ ಕೆಲವು ಸಮಯ ಕಳೆದ ಕೇರಳ ಮೂಲದ ಕುಟುಂಬವು ದುಬೈಗೆ ಹಿಂತಿರುಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಪುಟ್ಟ ಮಕ್ಕಳ ದುರ್ಮರಣ ಸಂಭವಿಸಿದ್ದು, ಪೋಷಕರು ಮತ್ತು ಸೋದರಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೃತರು ಎಲ್ಲರೂ 14 ವರ್ಷದೊಳಗಿನ ಮಕ್ಕಳು, ಮತ್ತು ಒಂದೇ ಕುಟುಂಬದವರು. ಮೃತ ಮಕ್ಕಳನ್ನು ಅಶಾಝ್ (14 ವರ್ಷ), ಅಮರ್ (12 ವರ್ಷ), ಅಜಾಮ್ (7 ವರ್ಷ) ಮತ್ತು ಅಯ್ಯಾಶ್ (5 ವರ್ಷ) ಎಂದು ಗುರುತಿಸಲಾಗಿದೆ. ಮನೆ ಕೆಲಸದಾಕೆ ಬುಶ್ರಾ…

Read More

ಪಶ್ಚಿಮ ವರ್ಜೀನಿಯಾ ನ್ಯಾಷನಲ್ ಗಾರ್ಡ್ ಗೆ ಸೇರಿದ್ದ ಇಬ್ಬರು ಸೈನಿಕರ ಪೈಕಿ ಸಾರಾ ಬೆಕ್‌ಸ್ಟೋಮ್ ಕೊನೆಯುಸಿರೆಳೆದಿದ್ದಾರೆ : ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್‌:ಅಮೆರಿಕಾದ ಶ್ವೇತಭವನದ ಬಳಿ ಬುಧವಾರ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಪಶ್ಚಿಮ ವರ್ಜೀನಿಯಾ ನ್ಯಾಷನಲ್ ಗಾರ್ಡ್ ಗೆ ಸೇರಿದ್ದ ಇಬ್ಬರು ಸೈನಿಕರ ಪೈಕಿ ಸಾರಾ ಬೆಕ್‌ಸ್ಟೋಮ್ ಕೊನೆಯುಸಿರೆಳೆದಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ. “ಗೌರವಾನ್ವಿತ, ಯುವ, ಅದ್ಭುತ ಮಹಿಳೆ ಎನಿಸಿದ ವೆಸ್ಟ್ ವರ್ಜೀನಿಯಾದ ಗಾಡ್ರನ್ ಸರಕ್ ಬೆಕ್ಟೋಮ್ ಅಸು ನೀಗಿದ್ದಾರೆ. ಆಕೆಇನ್ನು ನಮ್ಮೊಂದಿಗೆ ಇಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಮತ್ತೊಬ್ಬ ಗಾಯಾಳುವಿನ ಸ್ಥಿತಿ ಕೂಡಾ ಚಿಂತಾಜನಕವಾಗಿದ್ದು,ಜೀವನ್ಮರಣ ಹೋರಾಟ ಮುಂದುವರಿಸಿದ್ದಾರೆ ಎಂದು ಟ್ರಂಪ್ ವಿವರಿಸಿದ್ದಾರೆ. ಆತನಿಗೆ ಸಂಬಂಧಿಸಿದಂತೆ…

Read More

ಕೀನ್ಯಾ: ಲಘು ವಿಮಾನ ಪತನ; 12 ಮಂದಿ ಮೃತ್ಯು

ಕೀನ್ಯಾದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ಪ್ರದೇಶವಾದ ಕ್ವಾಲೆ ಕೌಂಟಿಯ (Kenya’s Kwale County) ಸಿಂಬಾ ಗೋಲಿನಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ವಿಮಾನ ಪತನಗೊಂಡಿದೆ. ವಿಮಾನವು 0530Z ನಲ್ಲಿ ಡಯಾನಿಯಿಂದ ಹೊರಟು ಕಿಚ್ವಾ ಟೆಂಬೊಗೆ (Diani to Kichwa Tembo) ಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ. ಇಂದು ಬೆಳಗ್ಗೆ 8:30 ರ ಸುಮಾರಿಗೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಡಯಾನಿ ವಾಯುನೆಲೆಯಿಂದ ಸುಮಾರು 40 ಕಿಲೋಮೀಟರ್…

Read More

4ನೇ ವರ್ಷದ “ದುಬೈ ಗಡಿನಾಡ ಉತ್ಸವ-2025”

ದುಬೈ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಜಂಟಿಯಾಗಿ ಆಯೋಜಿಸಿದ್ದ ನಾಲ್ಕನೇ ವರ್ಷದ “ದುಬೈ ಗಡಿನಾಡ ಉತ್ಸವ-2025” ಕಾರ್ಯಕ್ರಮವು ಇತ್ತೀಚೆಗೆ ನಗರದ ಊದು ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಜಾನಪದ ಪರಿಷತ್ ಮಂಗಳೂರಿನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೋಡಿಯಲ್ ಬೈಲ್ ರವರು ಯಕ್ಷಗಾನದ ಚೆಂಡೆ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ…

Read More

ಭಾರತೀಯ ನರ್ಸ್‌ಗೆ ಸಿಂಗಾಪುರದಲ್ಲಿ ಜೈಲು ಶಿಕ್ಷೆ

ಸಿಂಗಾಪುರ: ಡೆಹ್ರಾಡೂನ್ ಮೂಲದ 39 ವರ್ಷದ ಭಾರತೀಯ ನರ್ಸ್, ಇಲಿಪಿ ಶಿವ ನಾಗು, ಸಿಂಗಾಪುರದ ಪ್ರತಿಷ್ಠಿತ ರಾಫೆಲ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈತನಿಗೆ ಒಂದು ವರ್ಷ, ಎರಡು ತಿಂಗಳು ಜೈಲು ಶಿಕ್ಷೆ ನೀಡಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ಘಟನೆ ಕಳೆದ ಜೂನ್ 18 ರಂದು ನಾರ್ತ್ ಬ್ರಿಡ್ಜ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ನಡೆದಿದೆ. ಸಂತ್ರಸ್ತ ವ್ಯಕ್ತಿ ತನ್ನ ಅಜ್ಜನನ್ನು ಭೇಟಿಗಾಗಿ ಆಸ್ಪತ್ರೆಗೆ ಬಂದಿದ್ದಾಗ,…

Read More
error: Content is protected !!