ತುಂಬೆ ಮೆಡಿಸಿಟಿಗೆ ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ ಭೇಟಿ
ಅಜ್ಮಾನ್:* ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವ ಹಿಸ್ ಎಕ್ಸಲೆನ್ಸಿ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ ಅವರು ಅಜ್ಮಾನ್‌ನಲ್ಲಿರುವ ತುಂಬೆ ಮೆಡಿಸಿಟಿಗೆ ಭೇಟಿ ನೀಡಿದರು. ತುಂಬೆ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, ಆರೋಗ್ಯ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್ ತುಂಬೆ ಹಾಗೂ ಸಂಸ್ಥೆಯ ಹಿರಿಯ ಶೈಕ್ಷಣಿಕ ಮತ್ತು ವೈದ್ಯಕೀಯ ಅಧಿಕಾರಿಗಳು ಸಚಿವರನ್ನು ಸ್ವಾಗತಿಸಿದರು. ಭೇಟಿ ವೇಳೆ ಮಾತನಾಡಿದ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ, ವೈದ್ಯಕೀಯ ಹಾಗೂ ದೀರ್ಘಾಯುಷ್ಯ ಪ್ರವಾಸೋದ್ಯಮವು ಜಾಗತಿಕವಾಗಿ…
