ಶಾಲಾ ಮಕ್ಕಳ ಬಸ್ ಅಡ್ಡಗಟ್ಡಿ ಬಸ್ ಚಾಲಕನನ್ನು ಅಡ್ಡಗಟ್ಟಿ ಧಾಂಧಲೆ ಮಾಡಿದ ಗುಂಪು … !

ಮಂಗಳೂರು:ಶಾಲಾ ಮಕ್ಕಳ ಬಸ್ ಅಡ್ಡಗಟ್ಡಿ ಬಸ್ ಚಾಲಕನಿಗೆ ತರಾಟೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸಮೀಪ ನಡೆದಿದೆ. ಶಾಲಾ‌ ಬಸ್‌ ಸ್ಕೂಟರ್‌ ಒಂದಕ್ಕೆ‌ ಡಿಕ್ಕಿ ಹೊಡೆಯುವ ಸಂಭವವಿತ್ತು‌ ಎಂದು ಆರೋಪಿಸಿ ಗುಂಪೊಂದು ಶಾಲಾ‌ ಬಸ್ ತಡೆದಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ‌ ಬಸ್ ಇದಾಗಿದೆ. ಬಸ್ ಒಳಗೆ ಶಾಲಾ ಮಕ್ಕಳಿದ್ದರೂ ಗುಂಪು ಗಲಾಟೆಗೆ ಮುಂದಾಗಿದೆ. ಬಸ್ ನ ಸಿಬ್ಬಂದಿಗೆ ಅವಾಜ್ ಹಾಕಿದ ಗುಂಪು ಬಳಿಕ ಶಾಲಾ ಬಸ್ ಬಿಟ್ಟು ಕಳುಹಿಸಿದೆ.

Read More

ಬಳ್ಳಾರಿಯ ಘಟನೆಯಿಂದ ಜನ ಪ್ರತಿನಿಧಗಳ ಮೇಲಿನ ವಿಶ್ವಾಸ ಕಡಿಮೆ ಆಗಿದೆ : ವಿಧಾನಸಭೆ ಸ್ಪೀಕರ್ ಯು ಟಿ ಖಾದರ್

ಮಂಗಳೂರು:ಬಳ್ಳಾರಿಯಲ್ಲಿ ಗುಂಡೇಟಿನ ಘಟನೆ ನಡೆದಿರುವುದು ಸರಿಯಲ್ಲ .ರಾಜಕೀಯ ಮಾಡುವುದು ಇದ್ದೇ ಇರುತ್ತದೆ ಆದರೆ ಸಿನಿಮಾ ರೀತಿಯ ರಾಜಕಾರಣ ,ದ್ವೇಷ ರಾಜಕಾರಣ ಮಾಡವುದು ಸರಿಯಲ್ಲ ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ತಿಳಿಸಿದರು . ಅವರು ಸಕ್ರ್ಯೂಟ್‍ಹೌಸ್‍ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚಿಗೆ ಬಳ್ಳಾರಿಯ ಸಂಘರ್ಷದಲ್ಲಿ ಗುಂಡೇಟಿನಿಂದ ಮೃತ ಪಟ್ಟ ಕುರಿತು ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು , ಈ ರೀತಿಯ ಘಟನೆಗಳಿಂದ ಜನ ಪ್ರತಿನಿಧಗಳ ಮೇಲಿನ ವಿಶ್ವಾಸ ಕಡಿಮೆ ಆಗಿದೆ . . ಇಂತಹ…

Read More

ಜ. 31 ಮತ್ತು ಫೆ. 1 ರಂದು ಟಿ ಎಂ ಪೈ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ”ಆಯುಷ್ ಹಬ್ಬ”ದ ಆಮಂತ್ರಣ ಪತ್ರಿಕೆ ಉದ್ಘಾಟನೆ ಮಾಡಿದ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್… !

ಮಂಗಳೂರು:ಆಯುಷ್ ಹಬ್ಬ ಸಮಿತಿ 2026, ವತಿಯಿಂದ ಆಯುಷ್ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಮತ್ತು ಎಲ್ಲಾ ಆಯುಷ್ ವೈದ್ಯರುಗಳ ಜಂಟಿ ಆಶ್ರಯದಲ್ಲಿ ಜ. 31 ಮತ್ತು ಫೆ. 1 ರಂದು ಟಿ ಎಂ ಪೈ ಕನ್ವೆನ್ಷನ್ ಹಾಲ್ ನಲ್ಲಿ ಆಯುಷ್ ಹಬ್ಬ ನಡೆಯಲಿದ್ದು ಅದರ ಪ್ರಚಾರದ ಭಾಗವಾಗಿ ಆಮಂತ್ರಣ ಪತ್ರಿಕೆಯ ಉದ್ಘಾಟನೆಯನ್ನು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಸಕ್ರ್ಯೂಟ್‍ಹೌಸ್‍ನಲ್ಲಿ ನಡೆಸಿಕೊಟ್ಟರು . ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು , ಈ ಹಿಂದೆ ರಾಜ್ಯದ…

Read More

ಪರ್ವತಾರೋಹಣದಲ್ಲಿ ಜಗತ್ತಿನ ಗಮನ ಸೆಳೆದ ಮಂಗಳೂರು ಮೂಲದ ದುಬೈನಲ್ಲಿ ನೆಲೆಸಿರುವ 11ರ ಹರೆಯದ ಪೋರ

ಮಂಗಳೂರು:ಮಂಗಳೂರು ಮೂಲದ ದುಬೈನಲ್ಲಿ ನೆಲೆಸಿರುವ 11ರ ಹರೆಯದ ಪೋರ ಪರ್ವತಾರೋಹಣದಲ್ಲಿ ಜಗತ್ತಿನ ಗಮನ ಸೆಳೆದಿದ್ದಾನೆ.ತನ್ನ ಎಂಟನೇ ವಯಸ್ಸಿನಲ್ಲಿ ಆಫ್ರಿಕಾದ ಅತಿ ಎತ್ತರದ ಪರ್ವತ ತಾಂಜಾನಿಯಾದ ಕಿಲಿಮಂಜಾರೋ ಹತ್ತಿ ದಾಖಲೆ ಮಾಡಿದ್ದ ಅಯಾನ್ ಮೆಂಡನ್, ಇದೀಗ ಜಗತ್ತಿನ ಮೂರನೇ ಅತಿ ಎತ್ತರದ ಕೆನ್ಯಾದಲ್ಲಿರುವ ಮೌಂಟ್ ಕೆನ್ಯಾ ಪರ್ವತವನ್ನು ಏರುವ ಮೂಲಕ ಸಾಧನೆ ಮಾಡಿದ್ದಾನೆ. ಮಂಗಳೂರಿನ ಅತ್ತಾವರ ಮೂಲದ ವಾಣಿ ಮೆಂಡನ್ ಎಂಬವರ ಪುತ್ರನಾಗಿರುವ ಅಯಾನ್ ಮೆಂಡನ್ ತನ್ನ 6ನೇ ವಯಸ್ಸಿನಲ್ಲೇ ಪರ್ವತಾರೋಹಣ ಆರಂಭಿಸಿದ್ದಾನೆ. ತನ್ನ ಎಂಟನೇ ವಯಸ್ಸಿನಲ್ಲಿ ಆಫ್ರಿಕಾದ…

Read More

ಶತಮಾನದ ಹೊಸ್ತಿಲಲ್ಲಿರುವ ಕುಳಾಲು ಕೊಳ್ನಾಡು ಸರ್ಕಾರಿ ಶಾಲೆಯ ಗತವೈಭವ ಮರುಕಳಿಕೆ

ನೂತನ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅಭಿಮತ ಕುಳಾಲು ಕೊಳ್ನಾಡಿನ ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶತಮಾನದ ಹೊಸ್ತಿಲಲ್ಲಿ ನಿಂತಿದ್ದು, ಶಾಲೆಯ ಗತವೈಭವ ಮರುಕಳಿಸುವಂತಾಗಿದೆ ಎಂದು ಗ್ರಾಮ ಸ್ವರಾಜ್ ಪ್ರತಿಷ್ಠಾನದ ಅಧ್ಯಕ್ಷರೂ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಯೂ ಆದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೇಳಿದರು. ನೂತನವಾಗಿ ನಿರ್ಮಿಸಲಾದ ಮೂರು ತರಗತಿ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರ ಶಿಫಾರಸ್ಸಿನ ಮೇರೆಗೆ,…

Read More

50 ಲಕ್ಷ ಆವಿಷವೊಡ್ಡಿ ಕೇಸ್ ಕ್ಲೋಸ್ ಮಾಡುವಂತೆ ಕೋರಿದ್ದ ಜಗನ್ನಿವಾಸ್ ರಾವ್: ಕಾಂಗ್ರೆಸ್ ವಕ್ತಾರೆ ಪ್ರತಿಭಾ ಕುಳಾಯಿ

ಮಂಗಳೂರು: ಪೂಜಾ ಆಚಾರ್ಯಳಿಗೆ ಹುಟ್ಟಿದ ಮಗು ನನ್ನದು ಅಲ್ಲವೇ ಅಲ್ಲ ಎಂದು ಕೃಷ್ಣ ಜೆ.ರಾವ್ ಹೇಳುತ್ತಾನೆ. ಆದರೆ ಡಿ ಎನ್ ಎ ರಿಪೋರ್ಟ್ ನಲ್ಲಿ ಅವನದ್ದೇ ಮಗು ಎಂಬುದಾಗಿ ಸಾಬೀತಾಗಿದೆ . ಆರೋಪಿ ಕೃಷ್ಣನಲ್ಲಿ ವಿವಾಹವಾಗುವಂತೆ ಹಲವು ಬಾರಿ ಕೇಳಿಕೊಂಡರು ಆತ ಅದಕ್ಕೆ ಸಮ್ಮತಿಸುತ್ತಿಲ್ಲ. ಪೂಜಾ ಆಚಾರ್ಯ ಏಳೂವರೆ ತಿಂಗಳ ಗರ್ಭಿಣಿಯಾಗಿರುವಾಗಲೇ ಜಗನ್ನಿವಾಸ್ ರಾವ್ ೮ ಲಕ್ಷದ ಹಣದ ಆವಿಷವನ್ನು ಒಡ್ಡಿ ಮಗುವನ್ನು ಹೊಟ್ಟೆಯಿಂದ ತೆಗೆಸುವಂತೆ ಒತ್ತಾಯಿಸಿದ್ದ ಅದು ಸಾಧ್ಯವಾಗಲಿಲ್ಲ . ನಂತರ ಹುಟ್ಟಿದ ಮಗುವನ್ನು ಸಾಂತ್ವನ…

Read More

ಶೀಘ್ರವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ :- ಶಾಸಕ ಕಾಮತ್

ಮನಪಾ ವ್ಯಾಪ್ತಿಯಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಒಂದು ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ರವರು ಸೂಚನೆ ನೀಡಿದರು. ಪಾಲಿಕೆಯ ವಾರ್ಡ್ ಸಂಖ್ಯೆ 25, 26, 27, 41 ಹಾಗೂ 53 ರಲ್ಲಿ ಕುಡಿಯುವ ನೀರಿನ ಅಭಾವವುಂಟಾಗಿದ್ದು ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಕುಡಿಯುವ ನೀರಿನ ಸಮಸ್ಯೆ ಎದುರಾದ ತಕ್ಷಣ ಜನರ ಸಮಸ್ಯೆಗೆ ತುರ್ತಾಗಿ…

Read More

ಕುಡ್ಲದ ಪೋರನಿಗೆ “ಐಕಾನ್ ಆಫ್ ಇಂಡಿಯಾ 2025” ಪಟ್ಟ … !

ಮಂಗಳೂರು : ಶಿವಮೊಗ್ಗದ ಶಿರಳಕೊಪ್ಪದಲ್ಲಿ ಎಸ್.ಜಿ.ಪ್ಯಾಷನ್ ದಿವಾ ಸ್ಮಾರ್ ಸಂಸ್ಥೆ ಆಯೋಜಿಸಿದ್ದ ಪ್ಯಾಶನ್ ಶೋ ಐಕಾನ್ ಆಫ್ ಇಂಡಿಯಾ 2025 ರಲ್ಲಿ ಪೊಲೀಸ್ ಲೈನ್ ಪಾಂಡೇಶ್ವರ ಮಂಗಳೂರಿನ ಶೌರ್ಯಾ ಎಂ ಚಂದ್ರ sub junior kid ವಿಭಾಗದಲ್ಲಿ ಐಕಾನ್ ಆಫ್ ಇಂಡಿಯಾ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾನೆ . ಈತ ಮಂಗಳೂರು ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ ನ ಯು.ಕೆ.ಜಿ ವಿದ್ಯಾರ್ಥಿ ಹಾಗೂ Pathway modling ballabhag ನಲ್ಲಿ ವಿದ್ಯಾರ್ಥಿ ಆಗಿದ್ದಾರೆ. ಇವರು ಮುಖೇಶ್ ಚಂದ್ರ ಹಾಗೂ ಅಖಿಲ.ಕೆ…

Read More

ಜ. 4ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ‘ಕುಂಭಕಲಾವಳಿ-ಕುಲಾಲ ಕಲಾ ಸೇವಾಂಜಲಿ’ ಕಾರ್ಯಕ್ರಮ .. !

ಮಂಗಳೂರು: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ದ.ಕ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಮಂಗಳೂರು ಸಹಯೋಗದಲ್ಲಿ ‘ಕುಂಭಕಲಾವಳಿ-ಕುಲಾಲ ಕಲಾ ಸೇವಾಂಜಲಿ’ ಅದ್ಧೂರಿ ಕಾರ್ಯಕ್ರಮವು ಜ. 4ರಂದು ಮಂಗಳೂರು ಕುದ್ಮಲ್ ರಂಗರಾವ್ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷರಾದ ಲ| ಅನಿಲ್‌ ದಾಸ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ…

Read More

ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಜನವರಿ 4 ರಿಂದ 8 ರ ವರೆಗೆ ಮಂಗಳೂರಿನ ವಿವಿಧ ಧಾರ್ಮಿಕ ಕಾರ್ಯದಲ್ಲಿ ಭಾಗಿ …. ! ಭಕ್ತರಿಗೆ ಪಾದ ಪೂಜೆಗೆ ಅವಕಾಶ

ಮಂಗಳೂರು:ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿಯ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜನವರಿ 4 ರಂದು ಸಂಜೆ 4:00 ಗಂಟೆಗೆ ಸರಿಯಾಗಿ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರಿಗೆ ಪುರ ಪ್ರವೇಶ ಮಾಡಲಿರುವರು ಎಂದು ಗೌರವಾಧ್ಯಕ್ಷರಾದ ಡಾ.ಎಂ ಬಿ ಪುರಾಣಿಕ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮಠಾಧೀಶರ ಆಗಮನದ ಈ ಸಂದರ್ಭದಲ್ಲಿ ಪರ್ಯಾಯದ ಮಂಗಳೂರು’…

Read More
error: Content is protected !!