ತುಳು ಸಿನಿಮಾ ‘ಪಿದಾಯಿ’ ಸೆಪ್ಟೆಂಬರ್ 12ನೇ ತಾರೀಕಿನಂದು ತೆರೆಗೆ
ಮಂಗಳೂರು: ನಮ್ಮ ಕನಸು ಬ್ಯಾನರ್ ಅಡಿಯಲ್ಲಿ ಕೆ. ಸುರೇಶ್ ಅವರ ನಿರ್ಮಾಣದ , ರಮೇಶ್ ಶೆಟ್ಟಿಗಾರ್ ಕಥೆ ಬರೆದು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಸೆಪ್ಟೆಂಬರ್ 12ನೇ ತಾರೀಕಿನಂದು ಕರಾವಳಿಯಾದ್ಯಂತ ಬೆಳ್ಳಿ ತೆರೆಯ ಮೇಲೆ ಬಿಡುಗಡೆಯಾಗಲಿದೆ ಎಂದು ನಟಿ ರೂಪಾ ವರ್ಕಾಡಿ ತಿಳಿಸಿದರು . ಪಿದಾಯಿ ಚಿತ್ರವು ಕೊಲ್ಕತ್ತ, ಸಿಮ್ಮಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತ ಆಯ್ಕೆಯಾಗುವುದರ ಜೊತೆಗೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ…
