ಸುಳ್ಯದ ಕಲ್ಲಪಳ್ಳಿಯಲ್ಲಿ ಅನುಮಾನಾಸ್ಪದವಾಗಿ ಚಿರತೆ ಸಾವು

ಮಂಗಳೂರು: ಸುಳ್ಯದ ಕಲ್ಲಪಳ್ಳಿಯಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕಲ್ಲಪಳ್ಳಿ ಪ್ರದೇಶದ ಪೆರುಮುಂಡ ಗೋಪಾಲ ಗೌಡ ಎಂಬವರ ಜಾಗದಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೇಟೆಯಾಡುವ ವೇಳೆ ಯಾವುದೋ ಪ್ರಾಣಿಯನ್ನು ಅಟ್ಟಾಡಿಸಿಕೊಂಡು ಬರುವಾಗ ಆಕಸ್ಮಿಕವಾಗಿ ಬಿದ್ದು ಚಿರತೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪಶುವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು,…

Read More

ಅನಿವಾಸಿ ಮತದಾರರು ಖುದ್ದಾಗಿ ERO ಮುಂದೆ ಹಾಜರಾಗಲು ಸೂಚನೆ : SIR ಹೆಸರಿನಲ್ಲಿ ಮತದಾನದ ಹಕ್ಕಿಗೆ ಅಡ್ಡಿ — SDPI ಆಕ್ರೋಶ

ಮಂಗಳೂರು: SIR ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ವಿದೇಶದಲ್ಲಿರುವ ಅನಿವಾಸಿ ಮತದಾರರು ಖುದ್ದಾಗಿ ERO ಮುಂದೆ ಹಾಜರಾಗಬೇಕು ಎಂಬ ಚುನಾವಣಾ ಆಯೋಗದ ನಿರ್ದೇಶನವು SIR ಹೆಸರಿನಲ್ಲಿ ಚುನಾವಣಾ ಆಯೋಗ ಮತದಾನದ ಹಕ್ಕಿಗೆ ಅಡ್ಡಿಪಡಿಸುವ ಯತ್ನವಾಗಿದೆ ಎಂದು SDPI ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಶ್ರಫ್ ಅಡ್ಡೂರುರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲಿ ಉದ್ಯೋಗ, ವ್ಯಾಪಾರ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ನೆಲೆಸಿರುವ ಮತದಾರರು ಕೇವಲ ವಿಚಾರಣೆಗೆ ಹಾಜರಾಗಲು ಭಾರತಕ್ಕೆ ಆಗಮಿಸುವುದು ಪ್ರಾಯೋಗಿಕವಾಗಿ ಕಷ್ಟಕರವಾಗಿದ್ದು, ಇದು ಅರ್ಹ ಮತದಾರರ ಮತದಾನದ ಹಕ್ಕಿನ ಮೇಲೆಯೇ…

Read More

ಕೃಷ್ಣಾಷ್ಟಮಿ, ಕನ್ಯಾಮೇರಿ ಹುಟ್ಟುಹಬ್ಬಕ್ಕೆ ರಜೆ ಬೇಡಿಕೆ: ಪರಿಶೀಲನೆ ಬಳಿಕ ಸರ್ಕಾರದ ತೀರ್ಮಾನ – ಯು.ಟಿ. ಖಾದರ್

ಮಂಗಳೂರು:ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಹಬ್ಬಗಳಿಗೆ ರಜೆ ನೀಡುವ ವಿಚಾರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕೃಷ್ಣಾಷ್ಟಮಿ ಹಾಗೂ ಕನ್ಯಾಮೇರಿ ಹುಟ್ಟುಹಬ್ಬದಂದು ರಜೆ ನೀಡಬೇಕು ಎಂಬ ಬೇಡಿಕೆಗಳು ಬಂದಿವೆ. ಈ ಕುರಿತು ಸಂಬಂಧಿತ ಇಲಾಖೆಯು ಚರ್ಚೆ ನಡೆಸಿ ಪರಿಶೀಲನೆ ಮಾಡಲಿದೆ ಎಂದು ಹೇಳಿದರು. ಹಬ್ಬಗಳ ಸಂದರ್ಭದಲ್ಲಿ ರಜೆ ನೀಡುವ ಕುರಿತ ಬೇಡಿಕೆಯನ್ನು ತಾವು ಕೂಡ ಸರ್ಕಾರದ ಗಮನಕ್ಕೆ ತಂದಿರುವುದಾಗಿ ಯು.ಟಿ. ಖಾದರ್ ತಿಳಿಸಿದರು. ಈ ಬಗ್ಗೆ ಸರ್ಕಾರವೇ…

Read More

WIM ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ.ಜಿಲ್ಲಾಧ್ಯಕ್ಷೆಯಾಗಿ ಶಿನೀರ ಬಾನು ಪುನರಾಯ್ಕೆ

ಬಂಟ್ವಾಳ: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪ್ರತಿನಿಧಿ ಸಭೆಯು ಪಾಣೆಮಂಗಳೂರಿನ ಹೆಚ್.ಹೆಚ್. ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಜಿಲ್ಲಾಧ್ಯಕ್ಷೆ ಶಿನೀರ ಬಾನು ಧ್ವಜಾರೋಹಣ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಸಭೆಯಲ್ಲಿ 2024–2026ರ ಅವಧಿಯಲ್ಲಿ ಸಂಘಟನೆಯ ವತಿಯಿಂದ ಹಮ್ಮಿಕೊಂಡ ವಿವಿಧ ಸಾಮಾಜಿಕ, ಮಹಿಳಾ ಸಬಲೀಕರಣ ಹಾಗೂ ಜನಪರ ಚಟುವಟಿಕೆಗಳ ವರದಿಯನ್ನು ಮಂಡಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಶಿನೀರ ಬಾನು, ಮಹಿಳೆಯರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರ…

Read More

ಶಾಸಕ ಅಶೋಕ್ ರೈ ವಿರುದ್ಧ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಹಕೀಮ್ ಕೂರ್ನಡ್ಕ

ಮಂಗಳೂರು:* ಪುತ್ತೂರು ಶಾಸಕ ಅಶೋಕ್ ರೈ ಅವರು ಬಜರಂಗದಳದ ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರೊಂದಿಗೆ ಒಡನಾಟ ಹೊಂದಿದ್ದಾರೆ. ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಬೆಲೆಯಿಲ್ಲದಂತಾಗಿದೆ. ಇದೀಗ ತಮ್ಮನ್ನು ಕೊಲೆ ಮಾಡಲು ಬಜರಂಗದಳದ ಕಾರ್ಯಕರ್ತರನ್ನು ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಹಕೀಮ್ ಕೂರ್ನಡ್ಕ ತೀವ್ರವಾಗಿ ಆರೋಪಿಸಿದ್ದಾರೆ. ಸೆ. 1ರಂದು ಪುತ್ತೂರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಅಶೋಕ್ ರೈ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದರು. ಸ್ಥಳದಲ್ಲಿದ್ದ ಪತ್ರಕರ್ತರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು…

Read More

ಖರ್ಗೆ ಅವಮಾನ ಪ್ರಕರಣ: ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ಖಂಡನೀಯ: ದಿನೇಶ್ ಮುಳೂರು

ಮಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದ ಆರೋಪದ ಕುರಿತು ಕ್ರಮ ಕೈಗೊಳ್ಳುವ ಬದಲು ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಹಲ್ದ್ವಾನಿಯಲ್ಲಿ ಖರ್ಗೆ ಭಾಷಣ ಮಾಡಿದ ಬಳಿಕ ಅದೇ ಸ್ಥಳದಲ್ಲಿ ಹೋಮ-ಹವನ ನಡೆಸಿರುವುದು ಜಾತಿ ತಾರತಮ್ಯ ಹಾಗೂ ಅವಮಾನವನ್ನು ತೋರಿಸುತ್ತದೆ ಎಂದು…

Read More

ಜೀವಂತ ವ್ಯಕ್ತಿಯನ್ನೇ ಎಸ್‌ಐಆರ್ ಕರಡು ಪಟ್ಟಿಯಲ್ಲಿ ‘ಮರಣ’ ಎಂದು ನಮೂದು: ಮಂಗಳೂರಿನಲ್ಲಿ ಗೊಂದಲ

ಮಂಗಳೂರು:ಜೀವಂತವಾಗಿರುವ ವ್ಯಕ್ತಿಯೊಬ್ಬರನ್ನು ಎಸ್‌ಐಆರ್ ಕರಡು ಮತದಾರರ ಪಟ್ಟಿಯಲ್ಲಿ ‘ಮರಣ’ ಎಂದು ನಮೂದಿಸಿರುವ ಘಟನೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಬಿಜೈ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೋ ಅವರ ಹೆಸರನ್ನು ಎಸ್‌ಐಆರ್ ಕರಡು ಪಟ್ಟಿಯಲ್ಲಿ ಕೈಬಿಡಲಾಗಿದ್ದು, ಗಣತಿ ನಮೂನೆಯನ್ನು ಹಿಂದಿರುಗಿಸದಿರುವುದಕ್ಕೆ ಕಾರಣ ಎಂಬ ಕಾಲಂನಲ್ಲಿ ‘ಮರಣ’ ಎಂದು ನಮೂದಿಸಲಾಗಿದೆ.ಈ ಕುರಿತು ಮಾತನಾಡಿರುವ ಡೊನಾಲ್ಡ್ ಜೋಸೆಫ್ ರೇಗೋ, ತಾನು ಬಿಜೈಯಲ್ಲೇ ಹುಟ್ಟಿ ಬೆಳೆದಿದ್ದು, ಮತದಾರರ ಗುರುತಿನ ಚೀಟಿಯನ್ನೂ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. ಕೆಲಕಾಲ ಗಲ್ಫ್‌ನಲ್ಲಿ…

Read More

ತಣ್ಣೀರುಬಾವಿ–ಬೆಂಗ್ರೆಗೆ ಸರ್ಕಾರಿ ಬಸ್ ಸೇವೆಗೆ ಆಗ್ರಹ; DYFI–CPIM ಪ್ರತಿಭಟನೆ

ಮಂಗಳೂರಿನ ತಣ್ಣೀರುಬಾವಿ–ಕಸಬಾ ಬೆಂಗ್ರೆ ಪ್ರದೇಶಕ್ಕೆ ಮಂಗಳೂರು ನಗರದಿಂದ ಎರಡು ಕೆ.ಎಸ್.ಆರ್.ಟಿ.ಸಿ. ಸರ್ಕಾರಿ ಬಸ್ ಸೇವೆಗಳನ್ನು ತಕ್ಷಣ ಆರಂಭಿಸಲು ಒತ್ತಾಯಿಸಿ ಹಲವು ಬಾರಿ ಮನವಿ ನೀಡಲಾಗಿತ್ತು 100 ಸರಕಾರಿ ಎಲೆಕ್ಟ್ರಿಕ್ ಬಸ್ ಆರಂಭಿಸಲು ಕೆಎಸ್ಸ್ ಆರ್ ಟಿ ಸಿ ತೀರ್ಮಾನ ಮಾಡಿ ಪಟ್ಟಿ ಸಿದ್ದಪಡಿಸಿದ್ದು ಪಟ್ಟಿಯಲ್ಲಿ ಪ್ರವಾಸಿ ತಾಣವಾಗಿರುವ ತಣ್ಣೀರುಬಾವಿ ಮತ್ತು ಬೆಂಗ್ರೆ ಪ್ರದೇಶವನ್ನು ಕಡೆಗಣಿಸಿರುವ ಕ್ರಮವನ್ನು ಖಂಡಿಸಿ ಬೆಂಗ್ರೆ ಪ್ರದೇಶಕ್ಕೆ ಸರಕಾರಿ ಬಸ್ಸು ಓಡಿಸಲು ಆಗ್ರಹಿಸಿ DYFI ಹಾಗೂ CPIM ಬೆಂಗ್ರೆ ವತಿಯಿಂದ ಮುಖ್ಯ ರಸ್ತೆ ಕಸಬಾ…

Read More

ಅನಧಿಕೃತ ಬೀದಿಬದಿ ವ್ಯಾಪಾರ ತೆರವಿಗೆ ಮಹಾನಗರಪಾಲಿಕೆ ಸೂಚನೆ

ಮಂಗಳೂರು, ಸೆ. 2: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳು, ಪಾದಚಾರಿ ಮಾರ್ಗಗಳು ಹಾಗೂ ಇತರ ಪ್ರದೇಶಗಳಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಬೀದಿಬದಿ ವ್ಯಾಪಾರದಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಇಂತಹ ವ್ಯಾಪಾರವನ್ನು ತೆರವುಗೊಳಿಸುವಂತೆ ಮಹಾನಗರಪಾಲಿಕೆ ಸೂಚಿಸಿದೆ. ಈ ಕುರಿತು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವ ಪಾಲಿಕೆ, ಈಗಾಗಲೇ ಮಹಾನಗರಪಾಲಿಕೆಯಿಂದ ಬೀದಿಬದಿ ವ್ಯಾಪಾರದ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣಪತ್ರ ಪಡೆದಿರುವ ವ್ಯಾಪಾರಿಗಳನ್ನು ಹೊರತುಪಡಿಸಿ, ಇತರರು…

Read More

ಧನಂಜಯ ವರ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಗುರು ರಾಯರುಲ್ಲೆರ್’ ಭಕ್ತಿಗೀತೆ ಬಿಡುಗಡೆ

ಮಂಗಳೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿ, ಶರಣಾಗತಿ ಹಾಗೂ ಅಚಲ ನಂಬಿಕೆಯನ್ನು ಸಾರುವ ‘ಗುರು ರಾಯರುಲ್ಲೆರ್’ ಎಂಬ ನೂತನ ಭಕ್ತಿಗೀತೆ ಧನಂಜಯ ವರ್ಮ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಯನ್ನು ಕೋರುವ ಭಕ್ತನ ಮನದಾಳದ ಭಾವನೆಗಳನ್ನು ಈ ಗೀತೆಯಲ್ಲಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಡಲಾಗಿದೆ. ತನ್ನ ತಪ್ಪುಗಳಿಗೆ ಕ್ಷಮೆ ಕೋರುವುದರೊಂದಿಗೆ ಗುರು ರಾಯರ ಮೇಲಿನ ಅಚಲ ವಿಶ್ವಾಸ, ಭಕ್ತಿ ಮತ್ತು ಶರಣಾಗತಿಯ ಭಾವವನ್ನು ಗೀತೆಯ ಮೂಲಕ ಅಭಿವ್ಯಕ್ತಿಸಲಾಗಿದೆ. ‘ಮಲ್ತಿ ಪಾಪಗೇ ಮಾಫು ಕೊರ್ಲಯ್ಯಾ…’,…

Read More
error: Content is protected !!