ಪರಿಸರ ಕಾಯ್ದೆ ತಿದ್ದುಪಡಿ ಬಳಿಕ ದಂಡ ವಸೂಲಿಯಲ್ಲಿ ಲೋಪ; ಸರ್ಕಾರಕ್ಕೆ ₹1,200 ಕೋಟಿ ನಷ್ಟ: ಬೆನೆಡಿಕ್ಟ್ ಸಿ. ಫೆರ್ನಾಂಡೀಸ್

ಮಂಗಳೂರು:ಪರಿಸರ ಸಂರಕ್ಷಣೆ ಕಾಯ್ದೆ-1986ರ ಸೆಕ್ಷನ್ 15ಕ್ಕೆ 2024ರ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ತಿದ್ದುಪಡಿಯ ಬಳಿಕ ದಂಡ ವಿಧಿಸುವ ಹಾಗೂ ವಸೂಲಿ ಮಾಡುವ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಾಗಿವೆ. ಇದರಿಂದ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಕ್ಕೆ ಅಂದಾಜು ₹1,200 ಕೋಟಿ ನಷ್ಟ ಉಂಟಾಗಿದೆ ಎಂದು ದ.ಕ. ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘದ ಕಾರ್ಯದರ್ಶಿ ಬೆನೆಡಿಕ್ಟ್ ಸಿ. ಫೆರ್ನಾಂಡೀಸ್ ಆರೋಪಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿದ್ದುಪಡಿಯ ಮೊದಲು ಪರಿಸರ ಕಾಯ್ದೆ ಉಲ್ಲಂಘನೆಗೆ ಕನಿಷ್ಠ…

Read More

ಮೈಸೂರಿಗೆ ರೈಲ್ವೇ ವಿಭಾಗ ನೀಡುವುದಕ್ಕೆ ತೀವ್ರ ವಿರೋಧ: ಪಿ.ವಿ. ಮೋಹನ್

ಮಂಗಳೂರು: ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ಆಡಳಿತಾತ್ಮಕವಾಗಿ ಬೇರ್ಪಡಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಮಂಗಳೂರಿಗೆ ಸಿಗಬೇಕಿದ್ದ ಪ್ರತ್ಯೇಕ ರೈಲ್ವೇ ವಿಭಾಗವನ್ನು ಮೈಸೂರಿಗೆ ನೀಡಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಹೇಳಿದರು. ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಸೇರಿದಂತೆ ಕರಾವಳಿ ಭಾಗದಿಂದ ರೈಲ್ವೇ ಇಲಾಖೆಗೆ ವಾರ್ಷಿಕ ಸುಮಾರು ₹1,100 ಕೋಟಿ ಆದಾಯ ಬರುತ್ತಿದೆ. ಕೊಂಕಣ ರೈಲ್ವೇ, ಮಂಗಳೂರು–ಹಾಸನ ರೈಲು ಸಂಪರ್ಕ ಹಾಗೂ ಮಂಗಳೂರು ಬಂದರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿದ್ದರೂ,…

Read More

ಭಜನೆ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು

ಮಂಗಳೂರು : ಅಷ್ಟಮಿ ಪ್ರಯುಕ್ತ ತೋಕೂರು ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಭಜನೆ ಕಾರ್ಯಕ್ರಮದ ವೇಳೆ ಭಜನೆ ಮಾಡುತ್ತಲೇ ಯುವಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಮನಕಲಕುವ ಘಟನೆ ತಡರಾತ್ರಿ ನಡೆದಿದೆ. ಮೃತರನ್ನು ತೋಕೂರು ನಿವಾಸಿ ಶ್ರೀನಾಥ್ ಶೆಟ್ಟಿಗಾರ್ (38) ಎಂದು ಗುರುತಿಸಲಾಗಿದೆ. ಭಜನೆ ಮಾಡುತ್ತಿದ್ದ ವೇಳೆ ಶ್ರೀನಾಥ್ ಅವರು ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಶ್ರೀನಾಥ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅಷ್ಟಮಿ ಪ್ರಯುಕ್ತ ಊರಿಗೆ ಆಗಮಿಸಿದ್ದರು. ಸ್ಥಳೀಯ ಸಂಘಟನೆಗಳಲ್ಲಿಯೂ…

Read More

ಮಿಲಾಗ್ರಿಸ್ ಕಾಲೇಜಿನಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು: ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಪರಸ್ಪರ ಪೂರಕವಾಗಿದ್ದು, ಕನ್ನಡದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಎರಡೂ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸಿವೆ. ಒಂದು ದೇಶದ ಬಲಿಷ್ಠತೆ ಅಲ್ಲಿನ ಉತ್ತಮ ಸಾಹಿತ್ಯದ ಮೂಲಕ ವ್ಯಕ್ತವಾಗುತ್ತದೆ ಎಂದು ರಂಗಕರ್ಮಿ ಹಾಗೂ ನಿರ್ದೇಶಕರಾದ ಶ್ರೀ ಜನ್ನಿ (ಜನಾರ್ಧನ್), ರಂಗಾಯಣ ಮೈಸೂರು ತಿಳಿಸಿದರು. ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಕನ್ನಡ ಭಾಷಾ ವಿಭಾಗ, ಭಾಷಾ ಸಂಗಮ, ಐ ಕ್ಯೂಎಸಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘ (ವಿಕಾಸ) ಇವರ…

Read More

ಗೋ ಸಮ್ಮಾನ್ ಆಹ್ವಾನ ಅಭಿಯಾನಕ್ಕೆ ಸೆ.6ರಂದು ಚಾಲನೆ

ಮಂಗಳೂರು–ಉಡುಪಿ ಜಿಲ್ಲೆಗಳ 3ನೇ ಹಂತದ ಸಹಿ ಸಂಗ್ರಹ ಅಭಿಯಾನ ಉದ್ಘಾಟನೆ ಮಂಗಳೂರು:* ಗೋಮಾತೆಯ ರಕ್ಷಣೆ ಮತ್ತು ಸೇವೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ 3ನೇ ಹಂತದ ಸಹಿ ಸಂಗ್ರಹ ಅಭಿಯಾನಕ್ಕೆ ಸೆಪ್ಟೆಂಬರ್ 6ರಂದು ಚಾಲನೆ ದೊರೆಯಲಿದೆ. ಭಾನುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಕದ್ರಿಯ ಶ್ರೀ ಯೋಗೇಶ್ವರ ಮಠ (ಜೋಗಿ ಮಠ)ದಲ್ಲಿ ಕಾರ್ಯಕ್ರಮ ನಡೆಯಲಿದೆ. ಪೂಜ್ಯ ಸಂತರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುಷ್ಕರ್…

Read More

ವಿಶೇಷಚೇತನರ ಬಾಳಿಗೆ ಬೆಳಕಾದ ಹುಟ್ಟುಹಬ್ಬ -ರಿಯಾ ಫೌಂಡೇಶನ್‌ನಲ್ಲಿ ಸುಹಾನ್ ಅಳ್ವರಿಂದ ಆಹಾರ, ಪಡಿತರ ವಿತರಣೆ

ಮಂಗಳೂರು:ಹುಟ್ಟುಹಬ್ಬವನ್ನು ಕೇವಲ ಮೋಜು–ಮಸ್ತಿಗೆ ಸೀಮಿತಗೊಳಿಸದೆ, ಸಮಾಜಮುಖಿ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಅಳ್ವ ಅವರು ಮಾದರಿ ನಡೆ ಮೆರೆದಿದ್ದಾರೆ. ನಗರದ ಕುಲಶೇಖರ–ಸರಿಪಳ್ಳದಲ್ಲಿರುವ ವಿಶೇಷಚೇತನರ ಸೇವಾ ಸಂಸ್ಥೆ ರಿಯಾ ಫೌಂಡೇಶನ್ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ ಅವರು, ಅಲ್ಲಿನ ಮುಗ್ಧ ನಿವಾಸಿಗಳೊಂದಿಗೆ ಸಮಯ ಕಳೆಯುವುದರ ಜೊತೆಗೆ ಆಹಾರ ಮತ್ತು ಪಡಿತರ ಸಾಮಗ್ರಿಗಳನ್ನು ವಿತರಿಸಿದರು. ಮಧ್ಯಮದಿಂದ ತೀವ್ರ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ಮಕ್ಕಳು ಹಾಗೂ ವ್ಯಕ್ತಿಗಳಿಗೆ ಆಜೀವ ವಸತಿ ಆರೈಕೆ, ವೈದ್ಯಕೀಯ ನೆರವು,…

Read More

ಆಟೋ ಪ್ರಯಾಣ ದರ ಪರಿಷ್ಕರಣೆ: ನೂತನ ದರದ ಬಗ್ಗೆ ಅಸಮಾಧಾನ; ಮರುಪರಿಶೀಲನೆಗೆ SDTU ಆಗ್ರಹ

ಮಂಗಳೂರು: ಆಟೋ ರಿಕ್ಷಾ ಚಾಲಕರಿಗೆ ನ್ಯಾಯಯುತ ಪ್ರಯಾಣ ದರ ನಿಗದಿಪಡಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ (SDTU) ಮಂಗಳೂರು ನಗರ ಜಿಲ್ಲಾ ಸಮಿತಿ ಈ ಹಿಂದೆಯೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಇದೀಗ ಜಿಲ್ಲಾಡಳಿತ ಹೊರಡಿಸಿರುವ ಪರಿಷ್ಕೃತ ದರದ ಕುರಿತು ಆಟೋ ಚಾಲಕರ ಸಂಘಟನೆಗಳಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ದರವನ್ನು ಮರುಪರಿಶೀಲಿಸುವಂತೆ SDTU ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಇಂಧನ ಬೆಲೆ ಏರಿಕೆ, ವಾಹನಗಳ ನಿರ್ವಹಣಾ ವೆಚ್ಚ, ವಿಮೆ, ಬಿಡಿಭಾಗಗಳು,…

Read More

ಕರಾವಳಿಯ ಜನಸಮುದಾಯಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ ಸೆಪ್ಟಂಬರ್ 18 ರ ಸಚಿವ ಸಂಪುಟ ಸಭೆಗೆ ಮೆರವಣಿಗೆ : ಸಿಪಿಐಎಂ ನಿರ್ಧಾರ

ಮಂಗಳೂರಿನಲ್ಲಿ ನವಂಬರ್ 18 ರಂದು ರಾಜ್ಯ ಸರಕಾರ ನಡೆಸಲುದ್ದೇಶಿಸಿರುವ ಸಚಿವ ಸಂಪುಟ ಸಭೆ ಪ್ರವಾಸೋದ್ಯಮ, ಬಂಡವಾಳ ಹೂಡಿಕೆಗಳಿಗೆ ಸಂಬಂಧಿಸಿ ಕಾರ್ಪೊರೇಟ್ ಬಂಡವಾಳದ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ, ಜನರ ಗಮನ ಸೆಳೆಯುವ ಇವೆಂಟ್ ಆಗಿ ಮುಗಿದು ಹೋಗುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ಇದರ ಬದಲಾಗಿ ಕರಾವಳಿ ಕರ್ನಾಟಕದ ಜನ ಸಮುದಾಯಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು, ಜನಕೇಂದ್ರಿತವಾದ ಸಮಗ್ರ ಅಭಿವೃದ್ದಿ ಯೋಜನೆಗಳನ್ನು ರೂಪಿಸುವುದು ಸಚಿವ ಸಂಪುಟದ ಹಾಗು ರಾಜ್ಯ ಸರಕಾರದ ಆದ್ಯತೆ ಆಗಬೇಕು ಎಂದು ಸಿಪಿಐಎಂ ಆಗ್ರಹಿಸುತ್ತದೆ. ಈ ಬೇಡಿಕೆಗಳನ್ನು ಮುಂದಿಟ್ಟು ಸಚಿವ…

Read More

ಅತ್ತಾವರ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಬಾಬುಗುಡ್ಡೆ ನರೇಶ್ ಮತ್ತು ಯೋಗೀಶ್ ಮನೆ ಎದುರಿನ ರಸ್ತೆ ಅಭಿವೃದ್ಧಿ ಕಾಮಗಾರಿಯು 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಅತ್ಯಲ್ಪ ಅನುದಾನದಲ್ಲಿ ಸುಮಾರು ಒಂದು ಕೋಟಿ ಅನುದಾನವನ್ನು ಈ ಭಾಗದ ಅಭಿವೃದ್ಧಿಗೆಂದೇ ವಿನಿಯೋಗಿಸಲಾಗುತ್ತಿದೆ. ಅದರಲ್ಲಿ ಈ 30 ಲಕ್ಷದ ಕಾಮಗಾರಿಯೂ…

Read More

ಕದ್ರಿ ದೇವಾಲಯದ ರಾಜಾಂಗಣದಲ್ಲಿ ವೈಭವದಿಂದ ನಡೆದ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವಕೃಷ್ಣವೇಷ ಸ್ಪರ್ಧೆಯಲ್ಲಿ ಸಾವಿರಾರು ಪುಟಾಣಿ ಕೃಷ್ಣರು; 44 ವಿಭಾಗಗಳಲ್ಲಿ 12 ವೇದಿಕೆಗಳಲ್ಲಿ ಸ್ಪರ್ಧೆ

ಮಂಗಳೂರು: ಪುಟ್ಟ ಪುಟ್ಟ ಹೆಜ್ಜೆಗಳ ಗೆಜ್ಜೆನಾದ, ತುಂಟ ನಗು, ನಯನ ಮನೋಹರ ನೋಟ—ಇಂತಹ ಅಪೂರ್ವ ದೃಶ್ಯಗಳಿಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣ ಸಾಕ್ಷಿಯಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವ ಹಾಗೂ ಕೃಷ್ಣವೇಷ ಸ್ಪರ್ಧೆ ಶುಕ್ರವಾರ ಕದ್ರಿ ದೇವಸ್ಥಾನದ ಆವರಣದಲ್ಲಿ ವೈಭವದಿಂದ ನಡೆಯಿತು. ಬೆಳಗ್ಗೆ 9 ಗಂಟೆಗೆ ‘ವರ್ಣ ವೈಭವ’ದೊಂದಿಗೆ ಸ್ಪರ್ಧೆಗಳು ಆರಂಭಗೊಂಡವು. ಬೆಳಗ್ಗೆ 10.30ಕ್ಕೆ ಸಾಂಪ್ರದಾಯಿಕವಾಗಿ ಮೊಸರು ಕಡೆದು ಬೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆ ನಡೆಯಿತು. ಬಳಿಕ ಕೃಷ್ಣವೇಷದ…

Read More
error: Content is protected !!