ಎಸ್‌ಸಿಎಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಲೋಪವಿಲ್ಲ; ಸಾಮಾಜಿಕ ಜಾಲತಾಣದ ವಿಡಿಯೋಗೆ ಆಡಳಿತ ಮಂಡಳಿ ಸ್ಪಷ್ಟನೆ

ಮಂಗಳೂರು:ಎಸ್.ಸಿ.ಎಸ್. ಆಸ್ಪತ್ರೆಯಿಂದ ರೋಗಿಗಳ ವಿಷಯದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಆಡಳಿತ ಮಂಡಳಿ ಲಿಖಿತ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿದೆ. ಶ್ರೀಮತಿ ಲಿನೆಟ್ ಡಯಾಸ್ ಅವರಿಗೆ ಕುತ್ತಿಗೆ ನೋವಿನ ಕಾರಣಕ್ಕಾಗಿ ಡಾ. ನಿತೇಶ್ ಭಂಡಾರಿ ಅವರು ಆಸ್ಪತ್ರೆಗೆ ದಾಖಲಿಸಿದ್ದರು. ರೋಗಿಯನ್ನು ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ. ಈಶ್ವರ ಕೀರ್ತಿ ಅವರಿಗೆ ಉಲ್ಲೇಖಿಸಲಾಯಿತು. ರೋಗಿಯ ಸ್ಥಿತಿ ಗಂಭೀರವಾಗಿರಲಿಲ್ಲ,ಅವರನ್ನು ಖಾಸಗಿ ಕೋಣೆಯಲ್ಲಿ ದಾಖಲಿಸಲಾಯಿತು. ಎಲ್ಲಾ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿತ್ತು ಮತ್ತು ಸಾಮಾನ್ಯವಾಗಿ ಈ ರೀತಿಯ ಸ್ಥಿರ ಪ್ರಕರಣಕ್ಕೆ, ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು…

Read More

ಸೈನೈಡ್ ಮೋಹನ್‌ಗೆ ಬಿಗ್ ರಿಲೀಫ್; ಶಾಂತಾ ಕೊಲೆ ಪ್ರಕರಣದ ಖುಲಾಸೆ ತೀರ್ಪು ಎತ್ತಿಹಿಡಿದ ಹೈಕೋರ್ಟ್

ಮಂಗಳೂರು/ಬೆಂಗಳೂರು:ಕುಖ್ಯಾತ ಸರಣಿ ಹಂತಕ ಸೈನೈಡ್​ ಮೋಹನ್​ ಅಲಿಯಾಸ್​ ಮೋಹನ್​ ಕುಮಾರ್​ನನ್ನು 2006ರಲ್ಲಿ ಕೊಲ್ಲೂರಿನಲ್ಲಿ ನಡೆದ ಶಾಂತಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್​ ಎತ್ತಿಹಿಡಿದಿದೆ. ಖುಲಾಸೆ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಎಚ್​.ಪಿ. ಸಂದೇಶ್​ ಮತ್ತು ಬಿ. ಪ್ರಮೋದ್​ ಅವರಿದ್ದ ವಿಭಾಗೀಯ ನ್ಯಾಯಪೀಠ, ಆರೋಪಿ ವಿರುದ್ಧದ ಸಾಂದರ್ಭಿಕ ಸಾಕ್ಷ್ಯಗಳ ಕೊಂಡಿಯನ್ನು ಜೋಡಿಸಲು ಪ್ರಾಸಿಕ್ಯೂಷನ್​ ವಿಫಲವಾಗಿದೆ. ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ನಿಂತಿರುವ ಪ್ರಕರಣದಲ್ಲಿ ಸಂಶಯದ ಲಾಭವನ್ನು ಆರೋಪಿಗೆ…

Read More

ಸ್ನೇಹಾಲಯದ 17ನೇ ವಾರ್ಷಿಕೋತ್ಸವ: ‘ಹೆಬ್ರೋನಾಂತ್ಲೆ ಮೊಗಾ ತುವಾಲೆ’ ಕೃತಿ ಬಿಡುಗಡೆ

ಮಂಗಳೂರು: ನಿರ್ಗತಿಕರು, ದೀನದಲಿತರು ಹಾಗೂ ಸಮಾಜದ ಅಂಚಿನಲ್ಲಿರುವವರ ಸೇವೆಯಲ್ಲಿ ತೊಡಗಿರುವ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ (ರಿ.) ತನ್ನ 17ನೇ ವಾರ್ಷಿಕೋತ್ಸವವನ್ನು ಮಂಗಳವಾರ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿದರು. ಕೋಲ್ಕತ್ತಾದ ಸಂತ ಮದರ್ ತೇರೆಸಾ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವು ಧನ್ಯವಾದದ ಪವಿತ್ರ ಬಲಿಪೂಜೆಯೊಂದಿಗೆ ಆರಂಭಗೊಂಡಿತು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ ಪ್ರಧಾನ ಗುರುಗಳಾಗಿ ಬಲಿಪೂಜೆ ನೆರವೇರಿಸಿದರು. ಫಾ. ಪೀಟರ್ ರೆಜಿನಾಲ್ಡ್ ಡಿ’ಸೋಜ, ಫಾ. ಫ್ರಾನ್ಸಿಸ್ ಕ್ರಾಸ್ತಾ, ಫಾ. ಜೋಕಿಮ್ ಮೊಂತೆರೊ,…

Read More

ಆ.31ರಂದು ಪುತ್ತೂರು ಚಲೋ: ನ್ಯಾಯಕ್ಕಾಗಿ ಪ್ರತಿಭಟನೆಗೆ ಕರೆ

ಪುತ್ತೂರು: ದರ್ಬೆಯಲ್ಲಿ ಆ.21ರಂದು ನಡೆದ ಘಟನೆಗೆ ಸಂಬಂಧಿಸಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿ ಆ.31ರಂದು ‘ಪುತ್ತೂರು ಚಲೋ’ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ತಿಳಿಸಿದ್ದಾರೆ. ಗಾಯಗೊಂಡು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿರುವ ಅಂಜನಾ ಪೈ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖಂಡರು, ಅಂಜನಾ ಪೈ ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು, ಘಟನೆಯ ಹಿಂದಿರುವ ನಿಷೇಧಿತ ಪಿಎಫ್‌ಐ…

Read More

ಪುತ್ತೂರಿನಲ್ಲಿ ಬಂದ್ ಹಿನ್ನೆಲೆ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಅರುಣ್ ಕುಮಾರ್

ಪುತ್ತೂರು: ಹಿಂದೂ ಜಾಗರಣ ವೇದಿಕೆ ವತಿಯಿಂದ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಅವರು ಪುತ್ತೂರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜಿಲ್ಲೆಯಲ್ಲಿ ಇಂದು ಈದ್ ಮಿಲಾದ್ ಆಚರಣೆ ನಡೆಯುತ್ತಿದ್ದು, ಜಿಲ್ಲೆಯಾದ್ಯಂತ ಈದ್ ಮಿಲಾದ್ ಮೆರವಣಿಗೆಗಳು ಶಾಂತಿಯುತವಾಗಿ ನಡೆದಿವೆ. ಪುತ್ತೂರು ನಗರದಲ್ಲೂ ಬೆಳಗ್ಗೆ ಈದ್ ಮಿಲಾದ್ ಮೆರವಣಿಗೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆದಿದೆ. ಬಂದ್ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪುತ್ತೂರು ನಗರದಲ್ಲಿ ಹೆಚ್ಚಿನ ಪೊಲೀಸ್ ತುಕಡಿಗಳನ್ನು…

Read More

ವಾಹನ ಗ್ಲಾಸ್‌ಗೆ ಸ್ಟಿಕ್ಕರ್ ಅಳವಡಿಸಿದವರಿಗೆ ಪುತ್ತೂರು ಪೊಲೀಸರ ದಂಡ

ಪುತ್ತೂರು: ವಾಹನ ಚಾಲನೆಗೆ ಅಡ್ಡಿಯಾಗುವ ರೀತಿಯಲ್ಲಿ ಗ್ಲಾಸ್‌ಗಳಿಗೆ ಸ್ಟಿಕ್ಕರ್ ಅಳವಡಿಸಿ ಹಾಗೂ ವಾಹನದ ನೋಂದಣಿ ಸಂಖ್ಯೆಯನ್ನು ಮರೆಮಾಚುವಂತೆ ಸ್ಟಿಕ್ಕರ್ ಹಾಕಿಕೊಂಡು ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಪುತ್ತೂರು ಸಂಚಾರ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು, ಅಂತಹ ವಾಹನಗಳಿಗೆ ದಂಡ ವಿಧಿಸಿದ್ದಾರೆ. ಸಾರ್ವಜನಿಕರು ಯಾವುದೇ ಉತ್ಸವ, ಹಬ್ಬ-ಹರಿದಿನಗಳು ಹಾಗೂ ಇತರ ಕಾರ್ಯಕ್ರಮಗಳ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ವಾಹನಗಳ ಗ್ಲಾಸ್‌ಗಳಿಗೆ ಚಾಲನೆಗೆ ಅಡ್ಡಿಯಾಗುವ ರೀತಿಯಲ್ಲಿ…

Read More

ಮಂಗಳೂರಿಗೆ ರಾಕಿಂಗ್ ಸ್ಟಾರ್ ಯಶ್ ಆಗಮನ;ಧರ್ಮಸ್ಥಳ ಸೇರಿದಂತೆ ಪ್ರಮುಖ ದೇವಾಲಯಗಳಿಗೆ ಯಶ್ ಭೇಟಿ

ಮಂಗಳೂರು:ರಾಕಿಂಗ್ ಸ್ಟಾರ್ ಯಶ್ ಮಂಗಳೂರಿಗೆ ಆಗಮಿಸಿದ್ದು, ವಿವಿಧ ದೇವಾಲಯಗಳ ಭೇಟಿಗೆ ತೆರಳಿದ್ದಾರೆ.ಯಶ್ ಇಂದುಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಭಿಮಾನಿಗಳು ಅವರಿಗೆ ಸ್ವಾಗತ ಕೋರಿದರು. ಟಾಕ್ಸಿಕ್ ಸಿನಿಮಾ ಬಿಡುಗಡೆ ಮೊದಲು ಧರ್ಮಸ್ಥಳ ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಅವರದ್ದಾಗಿದೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಸಿನಿಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿದೆ. ‘ಕೆಜಿಎಫ್’ ಸರಣಿಯ ನಂತರ ಯಶ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲಕ್ಕೆ ‘ಟಾಕ್ಸಿಕ್’ ಟೀಸರ್ ಸ್ಪಷ್ಟ ಉತ್ತರ ನೀಡಿದೆ

Read More

ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ. ಹಜ್ , ಉಮ್ರಾ ಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆಗಳಿಗೆ ವಿಶೇಷ ಕಾನೂನು ಜಾರಿ: ಯುಟಿ ಖಾದರ್

ಉಳ್ಳಾಲ : ಪ್ರವಾದಿ ಜನ್ಮ ದಿನವಾದ ಇಂದು ನಾವು ಈದ್ ಮಿಲಾದ್ ಆಚರಣೆ ಜೊತೆಗೆ ಅವರ ತತ್ವಾದರ್ಶಗಳನ್ನು , ಅವರು ಜೀವನದಲ್ಲಿ ಅಳವಡಿಸಿಕೊಂಡ ಕ್ರಮಗಳನ್ನು ನಾವು ಮೈಗೂಡಿಸಿಕೊಂಡು ಜೀವಿಸಬೇಕು ಎಂದು ಹಜ್ ಹಾಗೂ ವಕ್ಫ್ ಸಚಿವ ಯುಟಿ ಖಾದರ್ ಕರೆ ನೀಡಿದರು.ಅವರು ದರ್ಗಾ ಅಧೀನದಲ್ಲಿ ಬರುವ 27 ಮೊಹಲ್ಲಾ ಗಳ ವ್ಯಾಪ್ತಿಯ 34 ಮದ್ರಸ ವಿದ್ಯಾರ್ಥಿಗಳ ಕೋಟೆಪುರ ದಿಂದ ಮುಕಚೇರಿ, ಆಝಾದ್ ನಗರ ರಸ್ತೆ ಯಾಗಿ ಮೇಲಂಗಡಿ ಮೂಲಕ ದರ್ಗಾ ವರೆಗೆ ನಡೆದ ಕಾಲ್ನಡಿಗೆ ಜಾಥಾ ಕಾರ್ಯಕ್ರಮ…

Read More

ಸೆ.14ರಿಂದ 16ರವರೆಗೆ ಕೋಡಿಕಲ್ ಹಿಂದೂ ಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು:* ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕೋಡಿಕಲ್ ಶಾಖೆ ಮತ್ತು ಹಿಂದೂ ಗಣೇಶೋತ್ಸವ ಸಮಿತಿ ವತಿಯಿಂದ ಕಳೆದ 17 ವರ್ಷಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ‘ಕೋಡಿಕಲ್ ಹಿಂದೂ ಗಣೇಶೋತ್ಸವ’ ಈ ಬಾರಿ ಸೆಪ್ಟೆಂಬರ್ 14ರಿಂದ 16ರವರೆಗೆ ನಡೆಯಲಿದೆ. ಸೆ.14ರ ಸೋಮವಾರ ಬೆಳಗ್ಗೆ ವೇದಮೂರ್ತಿ ವಿಶ್ವಕುಮಾರ್ ಜೋಯಿಸರ ಪೌರೋಹಿತ್ಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಸೆ.16ರ ಬುಧವಾರ ಸಂಜೆ ವೈಭವದ ಶೋಭಾಯಾತ್ರೆಯ ಮೂಲಕ ಮೂರ್ತಿಯನ್ನು ಕೊಂಡೊಯ್ದು ದಂಬೆಲ್‌ನ ಫಲ್ಗುಣಿ ನದಿಯಲ್ಲಿ ಜಲಸ್ತಂಭನ ಮಾಡಲಾಗುವುದು ಎಂದು ಹಿಂದೂ ಗಣೇಶೋತ್ಸವ ಸಮಿತಿಯ…

Read More

ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ SZIRACON 2026: ಆ.28ರಿಂದ 30ರವರೆಗೆ ಮಂಗಳೂರಿನಲ್ಲಿ ರುಮಟಾಲಜಿ ಸಮ್ಮೇಳನ

ಮಂಗಳೂರು:* 11ನೇ ದಕ್ಷಿಣ ವಲಯ ರುಮಟಾಲಜಿ ಸಮ್ಮೇಳನ (SZIRACON 2026) ಆಗಸ್ಟ್ 28ರಿಂದ 30ರವರೆಗೆ ಮಂಗಳೂರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಇಂಡಿಯನ್ ರುಮಟಾಲಜಿ ಅಸೋಸಿಯೇಶನ್‌ನ ಕರ್ನಾಟಕ ಘಟಕದ ಆಶ್ರಯದಲ್ಲಿ ನಡೆಯಲಿರುವ ಈ ಸಮ್ಮೇಳನವು ಮಂಗಳೂರು ಹಾಗೂ ಕರಾವಳಿ ಕರ್ನಾಟಕದಲ್ಲಿ ರುಮಟಾಲಜಿ ವಿಷಯಕ್ಕೆ ಮೀಸಲಾಗಿರುವ ಮೊದಲ ಪ್ರಮುಖ ಶೈಕ್ಷಣಿಕ ಸಮ್ಮೇಳನವಾಗಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಮಂಗಳೂರಿನ ಕನ್ಸಲ್ಟೆಂಟ್ ರುಮಟಾಲಜಿಸ್ಟ್ ಡಾ. ಸಜ್ಜನ್ ಶೆಣೈ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ…

Read More
error: Content is protected !!