ನೀಟ್ ನ್ಯಾಯಕ್ಕಾಗಿ ಉಳ್ಳಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳ ಮೇಣದಬತ್ತಿ ಮೆರವಣಿಗೆ

ಉಳ್ಳಾಲ, ಜು. 24: ನೀಟ್ ಪರೀಕ್ಷೆಗೆ ಸಂಬಂಧಿಸಿದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ‘ವಿ ದಿ ಪೀಪಲ್ ಆಫ್ ಇಂಡಿಯಾ–ಉಳ್ಳಾಲ’ ಹಾಗೂ ‘ಜೆನ್ Z ಆಫ್ ಉಳ್ಳಾಲ’ ಸಂಘಟನೆಗಳ ನೇತೃತ್ವದಲ್ಲಿ ಉಳ್ಳಾಲದಲ್ಲಿ ಬೃಹತ್ ಶಾಂತಿಯುತ ಮೇಣದಬತ್ತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ವಿದ್ಯಾರ್ಥಿಗಳ ಹಕ್ಕು ಮತ್ತು ನ್ಯಾಯದ ಪರವಾಗಿ ಐಕ್ಯತೆ ಪ್ರದರ್ಶಿಸಿದರು. ಕೈಯಲ್ಲಿ ಮೇಣದಬತ್ತಿ ಹಿಡಿದು ಶಾಂತಿಯುತವಾಗಿ ಸಾಗಿದ ಪ್ರತಿಭಟನೆ ವಿದ್ಯಾರ್ಥಿಗಳ ಧ್ವನಿಯನ್ನು ಸಮಾಜದ ಗಮನಕ್ಕೆ ತರುವ ಪ್ರಯತ್ನವಾಗಿತ್ತು….

Read More

ಜುಲೈ 31 ರಂದು ಬಂಟ್ವಾಳದಲ್ಲಿ ಬೃಹತ್ ಉದ್ಯೋಗ ಮೇಳ ಮಾಹಿತಿ ಶಿಬಿರ: ಆಕಾಂಕ್ಷಿ ಯುವಕರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಂದ ಮತ್ತೊಂದು ಅವಕಾಶ

ಬಂಟ್ವಾಳ: ಉದ್ಯೋಗಾಕಾಂಕ್ಷಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ‘ವಿಕಸಿತ ಬಂಟ್ವಾಳ’ ವತಿಯಿಂದ ಬೃಹತ್ ಉದ್ಯೋಗ ಮೇಳ ಮಾಹಿತ ಶಿಬಿರ ಆಯೋಜಿಸಲಾಗಿದೆ.ಜುಲೈ 31 (ಶುಕ್ರವಾರ) ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ವಿವಿಧ ಕ್ಷೇತ್ರಗಳ ಆಕರ್ಷಕ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಸ್ಥಳದಲ್ಲೇ ಅಭ್ಯರ್ಥಿಗಳ ಸಂದರ್ಶನ ನಡೆಸಲಾಗುತ್ತದೆ. ಆಗಸ್ಟ್ 7 ಮತ್ತು 8ರಂದು ಮೂಡಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್…

Read More

ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡದಲ್ಲಿ ಇಂದು ಪಿಯು ವರೆಗೆ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು, ಜು. 24: ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಜಿಲ್ಲೆಯಲ್ಲಿ ನಿರಂತರ ಭಾರೀ ಮಳೆಯ ಮುನ್ಸೂಚನೆ ನೀಡಿ ಯೆಲ್ಲೋ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾಡಳಿತವು ಜುಲೈ 24, ಶುಕ್ರವಾರ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಗುರುವಾರ ತಡರಾತ್ರಿ ಹೊರಡಿಸಿರುವ ಆದೇಶದ ಪ್ರಕಾರ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ…

Read More

ಶ್ರೀನಿವಾಸ ವಿವಿಯಲ್ಲಿ ಎಐ ಸ್ವಯಂಚಾಲಿತ ವಾಹನ, ರಿಸೆಪ್ಷನ್ ರೋಬೋಟ್ ಅನಾವರಣ

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ ‘ಶ್ರೀ ವಾಹನ್’ ಹಾಗೂ ಎಐ ರಿಸೆಪ್ಷನ್ ರೋಬೋಟ್ ‘ಶ್ರೀನಿಬೋಟ್’ ಅನ್ನು ಗುರುವಾರ ಮುಕ್ಕ ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ವಿಶ್ವವಿದ್ಯಾಲಯದ ಆರ್ಥಿಕ ಸಹಕಾರ ಹಾಗೂ ಅಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದು, ಸಂಶೋಧನೆ, ನವೋದ್ಯಮ ಮತ್ತು ತಂತ್ರಜ್ಞಾನಾಧಾರಿತ ಶಿಕ್ಷಣದತ್ತ ವಿಶ್ವವಿದ್ಯಾಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ‘ಶ್ರೀ ವಾಹನ್’ ಲಿಡಾರ್, ಎಐ ವಿಷನ್, ಜಿಪಿಎಸ್ ಮತ್ತು…

Read More

ವಿದ್ಯುತ್ ಅವಘಡದಲ್ಲಿ ಯುವಕ ಸಾವು: 7 ತಿಂಗಳಾದರೂ ಪರಿಹಾರವಿಲ್ಲ ತುಂಗಪ್ಪ ಬಂಗೇರ ಆರೋಪ

ಬಂಟ್ವಾಳ: ವಿದ್ಯುತ್ ಕಾಮಗಾರಿ ವೇಳೆ ಮೃತಪಟ್ಟ ಯುವಕನ ಕುಟುಂಬಕ್ಕೆ ಏಳು ತಿಂಗಳು ಕಳೆದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಆರೋಪಿಸಿದರು. ಬಿ.ಸಿ.ರೋಡ್‌ನ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿ, ಕಾವಳಮುಡೂರು ಗ್ರಾಮದ ಅಕ್ಬರ್ ಆಲಿ ಮೃತಪಟ್ಟ ಪ್ರಕರಣದಲ್ಲಿ ಕುಟುಂಬ ಇನ್ನೂ ಸಂಕಷ್ಟದಲ್ಲಿದ್ದು, ಮಾನವೀಯ ನೆಲೆಯಲ್ಲಿ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ವೃತ್ತ ಅಧೀಕ್ಷಕ ಎಂಜಿನಿಯರ್…

Read More

ಆರೋಗ್ಯ ಶಿಕ್ಷಣದಿಂದ ಹದಿಹರೆಯದವರ ಸ್ಥೂಲಕಾಯ ನಿರ್ವಹಣೆ ಕುರಿತು ಸಂಶೋಧನೆ: ದೀಕ್ಷಾ ಎಂ. ಶೆಟ್ಟಿಗೆ ಪಿಎಚ್‌ಡಿ

ಸುರತ್ಕಲ್: ಹದಿಹರೆಯದವರಲ್ಲಿ ಕಂಡುಬರುವ ಸ್ಥೂಲಕಾಯ (Obesity) ಸಮಸ್ಯೆ, ಅದರ ಕುರಿತು ಇರುವ ಜ್ಞಾನ, ಮನೋಭಾವ ಹಾಗೂ ಆಚರಣೆಗಳ ಕುರಿತು ಅಧ್ಯಯನ ನಡೆಸಿ, ಆರೋಗ್ಯ ಶಿಕ್ಷಣದ ಪರಿಣಾಮವನ್ನು ವಿಶ್ಲೇಷಿಸಿದ ಸಂಶೋಧನೆಗಾಗಿ ದೀಕ್ಷಾ ಎಂ. ಶೆಟ್ಟಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ. ಮೈಸೂರಿನ *ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (JSS AHER)ನ *ನಿರ್ವಹಣಾ ಅಧ್ಯಯನ ವಿಭಾಗ (Faculty of Management Studies)ದಿಂದ ನಿರ್ವಹಣಾ ಶಾಸ್ತ್ರ (Management) ವಿಷಯದಲ್ಲಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ…

Read More

ರಸ್ತೆ ಅಪಘಾತ ಗಾಯಾಳುಗಳಿಗೆ ₹2.5 ಲಕ್ಷವರೆಗೆ ಉಚಿತ ಚಿಕಿತ್ಸೆ: ಯು.ಟಿ. ಖಾದರ್

ಮಂಗಳೂರು: ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಪಿಎಂ ರಾಹತ್’ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಂ ರಾಹತ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ₹1.50 ಲಕ್ಷ ನೆರವಿನ ಜೊತೆಗೆ ರಾಜ್ಯ ಸರ್ಕಾರದಿಂದ ₹1 ಲಕ್ಷ ಹೆಚ್ಚುವರಿ ನೆರವು ನೀಡಲಾಗುವುದು. ಇದರೊಂದಿಗೆ ಅಪಘಾತ ಗಾಯಾಳುಗಳ ಚಿಕಿತ್ಸೆಗೆ ಒಟ್ಟು ₹2.50 ಲಕ್ಷವರೆಗೆ ವೆಚ್ಚವನ್ನು ಸರ್ಕಾರವೇ…

Read More

ವಿದ್ಯುತ್ ತಂತಿ ದುರಂತದಲ್ಲಿ ಮೃತಪಟ್ಟ ಕೃಷ್ಣ ಕುಲಾಲ್ ಮನೆಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ. ಮೂಡ ಗ್ರಾಮದ ಮೊಡಂಕಾಪು ರಾಜೀವ ಪಲ್ಕೆಯ ನಿವಾಸಿ, ಶಂಭೂರಿನ ಎ.ಎಂ.ಆರ್. ಸಂಸ್ಥೆಯಿಂದ ಪಲ್ಲಮಜಲು ಗ್ರಿಡ್‌ಗೆ ವಿದ್ಯುತ್ ಸರಬರಾಜು ಮಾಡುವ ಹೆಚ್.ಟಿ. ಟೆನ್ಷನ್ ವಿದ್ಯುತ್ ತಂತಿ ತಗುಲಿ ದುರ್ಘಟನೆಯಲ್ಲಿ ಮೃತಪಟ್ಟ ಕೃಷ್ಣ ಕುಲಾಲ್ ಅವರ ನಿವಾಸಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬದವರನ್ನು ಭೇಟಿಯಾಗಿ ಅವರ ದುಃಖದಲ್ಲಿ ಭಾಗಿಯಾದ ಶಾಸಕರು, ಈ ದುರ್ಘಟನೆ ಅತ್ಯಂತ ನೋವುಂಟು ಮಾಡಿದ್ದು, ಕೃಷ್ಣ ಕುಲಾಲ್…

Read More

ಮಂಗಳೂರಿನ ವಿವಿಧೆಡೆ ಕೆಳಮಟ್ಟದಲ್ಲಿ ಹೆಲಿಕಾಪ್ಟರ್ ಹಾರಾಟ:ಸಾರ್ವಜನಿಕರಿಗೆ ಪೊಲೀಸ್ ಸ್ಪಷ್ಟನೆ

ರಾಷ್ಟ್ರೀಯ ಭದ್ರತಾ ದಳ ತಂಡವು ದ.ಕ. ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆ ನಡೆಸುತ್ತಿದ್ದು, ಇದರ ಭಾಗವಾಗಿ ಮಂಗಳೂರಿನ ವಿವಿಧ ಕಡೆ ಇಂದು ಹೆಲಿಕಾಪ್ಟರ್ ಹಾರಾಟ ನಡೆಸಿದೆ. ಇದು ನಾಗರಿಕರಲ್ಲಿ ಸಂಚಲನ ಮೂಡಿಸಿತು. ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ಇಂದು ಬೆಳಗ್ಗೆ ಆಕಾಶದಲ್ಲಿ ಕೆಳಮಟ್ಟದಲ್ಲಿ ಹೆಲಿಕಾಪ್ಟರ್ ಹಾರಾಟ ಕಂಡು ಗಾಬರಿಗೊಂಡ ಸಾರ್ವಜನಿಕ‌ ಅನೇಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ಎನ್ ಎಸ್ ಜಿಯ ಕಾರ್ಯದಕ್ಷತೆ ಕುರಿತಂತೆ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಅಣಕು ಕಾರ್ಯಾಚರಣೆಯ…

Read More

ಮಂಗಳೂರು ಯುದ್ಧ ಸ್ಮಾರಕದಲ್ಲಿ T-55 ಯುದ್ಧ ಟ್ಯಾಂಕ್ ಪ್ರದರ್ಶನ , ಮುಂದಿನ ವರ್ಷ ಯುದ್ಧ ವಿಮಾನ ಅನಾವರಣಕ್ಕೆ ಪ್ರಯತ್ನ: ಕ್ಯಾಪ್ಟನ್ ಗಣೇಶ್ ಕಾರ್ನಿಕ್

ಮಂಗಳೂರು: ಮಂಗಳೂರಿನ ಯುದ್ಧ ಸ್ಮಾರಕದಲ್ಲಿ ಭಾರತೀಯ ಸೇನೆಯ ಐತಿಹಾಸಿಕ T-55 ಯುದ್ಧ ಟ್ಯಾಂಕ್ ಅನ್ನು ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದ್ದು, ಮುಂದಿನ ವರ್ಷ ಇದೇ ಸ್ಮಾರಕದಲ್ಲಿ ಯುದ್ಧ ವಿಮಾನವನ್ನೂ ಅನಾವರಣಗೊಳಿಸುವ ಉದ್ದೇಶವಿದೆ ಎಂದು ಮಾಜಿ ಶಾಸಕ ಹಾಗೂ ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ವಿಶೇಷ ಪ್ರಯತ್ನದ ಫಲವಾಗಿ ಸೋವಿಯತ್ ಮೂಲದ T-55 ಯುದ್ಧ ಟ್ಯಾಂಕ್ ಅನ್ನು ಮಂಗಳೂರಿನ ಯುದ್ಧ ಸ್ಮಾರಕಕ್ಕೆ ತರಲಾಗಿದೆ ಎಂದರು….

Read More
error: Content is protected !!