ಆರೋಗ್ಯ ಶಿಕ್ಷಣದಿಂದ ಹದಿಹರೆಯದವರ ಸ್ಥೂಲಕಾಯ ನಿರ್ವಹಣೆ ಕುರಿತು ಸಂಶೋಧನೆ: ದೀಕ್ಷಾ ಎಂ. ಶೆಟ್ಟಿಗೆ ಪಿಎಚ್‌ಡಿ

ಸುರತ್ಕಲ್: ಹದಿಹರೆಯದವರಲ್ಲಿ ಕಂಡುಬರುವ ಸ್ಥೂಲಕಾಯ (Obesity) ಸಮಸ್ಯೆ, ಅದರ ಕುರಿತು ಇರುವ ಜ್ಞಾನ, ಮನೋಭಾವ ಹಾಗೂ ಆಚರಣೆಗಳ ಕುರಿತು ಅಧ್ಯಯನ ನಡೆಸಿ, ಆರೋಗ್ಯ ಶಿಕ್ಷಣದ ಪರಿಣಾಮವನ್ನು ವಿಶ್ಲೇಷಿಸಿದ ಸಂಶೋಧನೆಗಾಗಿ ದೀಕ್ಷಾ ಎಂ. ಶೆಟ್ಟಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಮೈಸೂರಿನ *ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (JSS AHER)ನ *ನಿರ್ವಹಣಾ ಅಧ್ಯಯನ ವಿಭಾಗ (Faculty of Management Studies)ದಿಂದ ನಿರ್ವಹಣಾ ಶಾಸ್ತ್ರ (Management) ವಿಷಯದಲ್ಲಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪ್ರದಾನ ಮಾಡಲಾಗಿದೆ.


“ಹದಿಹರೆಯದವರ ಸ್ಥೂಲಕಾಯದ ಕುರಿತು ಜ್ಞಾನ, ಮನೋಭಾವ ಮತ್ತು ಆಚರಣೆಗಳನ್ನು ನಿರ್ಧರಿಸುವ ಅಧ್ಯಯನ ಹಾಗೂ ಸ್ಥೂಲಕಾಯ ನಿರ್ವಹಣೆಯಲ್ಲಿ ಆರೋಗ್ಯ ಶಿಕ್ಷಣದ ಪರಿಣಾಮದ ಮೌಲ್ಯಮಾಪನ” ಎಂಬ ವಿಷಯದ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಈ ಸಂಶೋಧನೆಯನ್ನು ಡಾ. ಕನಕವಳ್ಳಿ ಕೆ. ಕುಂದೂರಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಗಿದೆ.
ದೀಕ್ಷಾ ಎಂ. ಶೆಟ್ಟಿ ಅವರು ಬಾಳ ಮಾಧವ ಶೆಟ್ಟಿ ಮತ್ತು ಮೀರಾವಾಣಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾಳೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!