ಲೋಕ ಅದಾಲತ್‌ನಲ್ಲಿ ಮರು ಒಂದಾದ ದಂಪತಿ: ರಾಜಿ ಸಂಧಾನದಿಂದ ಅಂತ್ಯಗೊಂಡ ವಿಚ್ಛೇದನ ಪ್ರಕರಣ

ಬಂಟ್ವಾಳ: ದಾಂಪತ್ಯ ಜೀವನದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಯೊಂದು, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನಡೆದ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿ ಹೊಸ ಜೀವನ ಆರಂಭಿಸಲು ನಿರ್ಧರಿಸಿದ ಹೃದಯಸ್ಪರ್ಶಿ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ.ಪಿ. ಅವರ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆ ನಡೆಯಿತು. ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕೌಟುಂಬಿಕ ವಿವಾದವನ್ನು ಉಭಯ ಪಕ್ಷಗಳ ಅಭಿಪ್ರಾಯ…

Read More

ಪುರುಷರಕಟ್ಟೆ ಘಟನೆ: ಸಂತ್ರಸ್ತ ಯುವತಿಯ ಮನೆಗೆ ವಿಹೆಚ್‌ಪಿ ಭೇಟಿ, ನ್ಯಾಯಕ್ಕೆ ಆಗ್ರಹ

ಪುತ್ತೂರು ಪುರುಷರಕಟ್ಟೆ ಘಟನೆಯಿಂದ ಆತಂಕಕ್ಕೆ ಒಳಗಾಗಿರುವ ಹಿಂದೂ ಯುವತಿಯ ಮನೆಗೆ ವಿಶ್ವ ಹಿಂದೂ ಪರಿಷದ್ ಪ್ರಮುಖರು ಭೇಟಿ ನೀಡಿ, ಪೋಷಕರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಲಾಯಿತು.ಸಾರ್ವಜನಿಕವಾಗಿ ಆಯುಧ ಪ್ರದರ್ಶಿಸಿ ಯುವತಿಯರಲ್ಲಿ ಪ್ರಾಣಭಯ ಉಂಟುಮಾಡಿದ ಘಟನೆಯನ್ನು ಕೇವಲ ‘ತಪ್ಪು ಗ್ರಹಿಕೆ’ ಎಂದು ಬಿಂಬಿಸಿ, ಆರೋಪಿಗಳನ್ನು ರಕ್ಷಿಸಲು ನಡೆಯುತ್ತಿರುವ ರಾಜಕೀಯ ಸಂಧಾನದ ಪ್ರಯತ್ನವು ಸರಿಯಲ್ಲ. ಈ ಘಟನೆಯ ಕುರಿತು ಪೊಲೀಸ್ ಇಲಾಖೆಯು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಯುವತಿಗೆ ಸೂಕ್ತ ನ್ಯಾಯ…

Read More

ದ.ಕ.ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್

ಮಂಗಳೂರು: ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ನಿಧನದಿಂದಾಗಿ ತೆರವಾದ ದ.ಕ.ಜಿಲ್ಲಾ ಖಾಝಿ ಸ್ಥಾನಕ್ಕೆ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಬಾ-ಅಲವಿ ಅವರನ್ನು ಆಯ್ಕೆ ಮಾಡಿರುವುದಾಗಿ ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ಶನಿವಾರ ಅಧಿಕೃತವಾಗಿ ಘೋಷಿಸಿದರು. ಕೇರಳದ ಹಿರಿಯ ಧಾರ್ಮಿಕ ವಿದ್ವಾಂಸರಾಗಿರುವ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಕೆಲವು ದಿನಗಳ ಹಿಂದೆಯೇ ದ.ಕ.ಜಿಲ್ಲಾ ಖಾಝಿಯಾಗಿ…

Read More

ಜು. 16ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ – ‘ಸಮೃದ್ಧಿ CareerNxt-2026’

ಮಂಗಳೂರು:ಕರಾವಳಿ ಭಾಗದ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ನಗರದ ಗಾಂಧಿನಗರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ತನ್ನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಹಾಗೂ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (KCCI), ಮಂಗಳೂರು ಸಹಯೋಗದಲ್ಲಿ ಜುಲೈ 16ರಂದು “ಸಮೃದ್ಧಿ CareerNxt-2026” ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ ಎಂದು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕ ನ್ಯಾಯವಾದಿ ವಸಂತ ಕಾರಂದೂರ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ರಿಂದ ಸಂಜೆ…

Read More

ಎಕ್ಕೂರು, ಪಡೀಲು ನಗರ ಆರೋಗ್ಯ ಕೇಂದ್ರಗಳಿಗೆ ಸಿಪಿಎಂ ಬಜಾಲ್ ವಿಭಾಗ ಸಮಿತಿ ನಿಯೋಗ ಭೇಟಿ

ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಜೊತೆ ಮಾಡಿರುವ ಕರಾರು ಒಪ್ಪಂದ ರದ್ದುಗೊಳಿಸಲು, ಸರಕಾರಿ ಆಸ್ಪತ್ರೆಗಳ ಬಲಪಡಿಸಲು, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐಎಂ ಜಿಲ್ಲಾದ್ಯಂತ ಕರೆ ನೀಡಿರುವ ಹೋರಾಟದ ಭಾಗವಾಗಿ ಇಂದು ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನಿಯೋಗವು ಇಂದು ಪಡೀಲು ಮತ್ತು ಎಕ್ಕೂರು ಪ್ರದೇಶದಲ್ಲಿರುವ ಎರಡು ನಗರ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲಿಸಿದೆ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ , ಅಳಪೆ…

Read More

ಜು. 15ರಂದು ಅಭಿಸರಣ್ ಆಕ್ವೇಟಿಕ್ ಸೆಂಟರ್ ಲೋಕಾರ್ಪಣೆ

ಮಂಗಳೂರು, ಜು. 13: ನಗರದ ಬಂಗ್ರ ಕೂಳೂರು ಸಮೀಪ ತ್ರಿಶಾ ಕಾಲೇಜು ಬಳಿಯ ಕೊಟ್ಟಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಭಿಸರಣ್ ಆಕ್ವೇಟಿಕ್ ಸೆಂಟರ್‌ನ ಲೋಕಾರ್ಪಣೆ ಸಮಾರಂಭ ಜುಲೈ 15ರಂದು ಸಂಜೆ 4.30ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯ ತರಬೇತುದಾರ ಸಂಕೇತ್ ಬೆಂಗ್ರೆ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವನ್ನು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಒಲಿಂಪಿಕ್ ಈಜುಪಟು ಶಿವಾನಿ…

Read More

ಜು. 16ರಂದು ಮಂಗಳೂರಿನಲ್ಲಿ ಇಸ್ಕಾನ್ ವತಿಯಿಂದ ಶ್ರೀ ಜಗನ್ನಾಥ ರಥಯಾತ್ರೆ …. !

ಮಂಗಳೂರು:ವಿಶ್ವಪ್ರಸಿದ್ಧ ಶ್ರೀ ಜಗನ್ನಾಥ ರಥಯಾತ್ರೆ ಉತ್ಸವದ ಅಂಗವಾಗಿ ಮಂಗಳೂರಿನ ಕುಡುಪು ಕಟ್ಟೆಯ ಇಸ್ಕಾನ್ ಶ್ರೀ ಜಗನ್ನಾಥ ಮಂದಿರದ ಆಶ್ರಯದಲ್ಲಿ ಜುಲೈ 16ರಂದು (ಗುರುವಾರ) ಶ್ರೀ ಜಗನ್ನಾಥ ರಥಯಾತ್ರೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಪ್ರೇಮ ಭಕ್ತಿ ದಾಸ್ ತಿಳಿಸಿದರು. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಕಾನ್ ಸಂಸ್ಥಾಪಕ ಆಚಾರ್ಯರಾದ ಶ್ರೀಲ ಪ್ರಭುಪಾದರ ಪ್ರೇರಣೆಯಿಂದ ವಿಶ್ವದ ನ್ಯೂಯಾರ್ಕ್, ಲಂಡನ್, ಮಾಂಟ್ರಿಯಲ್, ಲಾಸ್ ಏಂಜಲೀಸ್, ಮೆಲ್ಬೋರ್ನ್ ಸೇರಿದಂತೆ ಭಾರತದ ನವದೆಹಲಿ, ಮುಂಬೈ, ಕೋಲ್ಕತ್ತಾ,…

Read More

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಹತ್ವದ ಯಶಸ್ಸು ಸಾಧಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ನಿವಾಸಿ ನೌಶಾದ್ (32) ಅವರನ್ನು ಬೆಂಗಳೂರಿನಲ್ಲಿ ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರೋಡ್ ನಿವಾಸಿ ಅಬ್ದುಲ್ ನಾಸಿರ್ (41) ಅವರನ್ನು ಕೇರಳದ ಕೊಚ್ಚಿಯಲ್ಲಿ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೊಲೆ ಕೃತ್ಯ ಎಸಗಿದ್ದ…

Read More

ನೇತ್ರಾವತಿ ಲಯನ್ಸ್ ಕ್ಲಬ್‌ಗೆ ನೂತನ ಸಾರಥ್ಯ: ಪದಗ್ರಹಣದೊಂದಿಗೆ ₹3.5 ಲಕ್ಷ ಸೇವಾಕಾರ್ಯಗಳ ಹಸ್ತಾಂತರ

ಮಂಗಳೂರು: ನೇತ್ರಾವತಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 6ರಂದು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಜಿಲ್ಲಾ ಮಾಜಿ ಗವರ್ನರ್ (PDG) ಸಂಜಿತ್ ಶೆಟ್ಟಿ ಅವರ ನೇತೃತ್ವದಲ್ಲಿ ನೆರವೇರಿತು. ಸಮಾರಂಭದಲ್ಲಿ ಡಾ. ವಿದ್ಯಾಧರಿ ಶೆಟ್ಟಿ ಅಧ್ಯಕ್ಷೆಯಾಗಿ, ಲಯನ್ ಶೋಭಾ ಸುಬ್ರಮಣ್ಯ ಕಾರ್ಯದರ್ಶಿಯಾಗಿ ಹಾಗೂ ಲಯನ್ ಸುಪಲಾ ಗೋಪಾಲ್ ಖಜಾಂಜಿಯಾಗಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಅಂಗವಾಗಿ ನೂತನ ಅಧ್ಯಕ್ಷೆ ಡಾ. ವಿದ್ಯಾಧರಿ ಶೆಟ್ಟಿ ಅವರು ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಹಸ್ತಾಂತರಿಸಿದರು. ಜೊತೆಗೆ ಸುಮಾರು ₹3.5 ಲಕ್ಷ…

Read More

ಪಡೀಲ್ ರೈಲು ನಿಲ್ದಾಣಕ್ಕೆ ಪಂಚಗಂಗಾ ಎಕ್ಸ್‌ಪ್ರೆಸ್ ನಿಲುಗಡೆ ನೀಡಿ; ಸ್ಥಳೀಯರ ದಶಕಗಳ ಬೇಡಿಕೆಗೆ ನ್ಯಾಯ ಒದಗಿಸಿ: ಎಂಎಲ್‌ಸಿ ಪಿ.ವಿ. ಮೋಹನ್

ಮಂಗಳೂರು: ಮಂಗಳೂರು ನಗರಕ್ಕೆ ರೈಲು ಸಂಪರ್ಕ ಆರಂಭವಾಗಿ ಸುಮಾರು 120 ವರ್ಷಗಳು ಕಳೆದಿವೆ. ದಕ್ಷಿಣ ಭಾರತದ ಪ್ರಮುಖ ರೈಲು ಕೇಂದ್ರಗಳಲ್ಲಿ ಒಂದಾದ ಮಂಗಳೂರು, ಕರಾವಳಿ ಕರ್ನಾಟಕದ ಆರ್ಥಿಕ, ಶೈಕ್ಷಣಿಕ ಹಾಗೂ ವಾಣಿಜ್ಯ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ (ಕಂಕನಾಡಿ) ನಿಲ್ದಾಣಗಳು ಲಕ್ಷಾಂತರ ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಮಂಗಳೂರು ಜಂಕ್ಷನ್ ಸ್ಥಾಪನೆಯಾಗಿದ್ದಾಗಲೇ ಪಡೀಲ್ ಪ್ರದೇಶದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಪಡೀಲ್ ರೈಲು ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೆ ಹಲವು ದಶಕಗಳು…

Read More
error: Content is protected !!