ಕೇಂದ್ರ ಸರಕಾರದ ಯೋಜನೆಗಳಿಗೆ ಗಾಂಧೀಜಿಯವರ ಕನ್ನಡಕ ಅವಶ್ಯಕತೆ ಇದೆ ಆದರೆ ಅವರ ಹೆಸರಿನ ಅವಶ್ಯಕತೆ ಇಲ್ಲ : ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ

ಮಂಗಳೂರು:ಕೇಂದ್ರ ಸರಕಾರ ಜಾರಿಗೆ ತಂದ ‘ವಿಬಿ-ಜಿ ರಾಮ್ ಜಿ’ ಯೋಜನೆಯು ನಿರೋದ್ಯೋಗ ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಉದ್ಯೋಗ ಖಾತರಿಗೆ ಕತ್ತರಿ ಹಾಕಲಿದೆ ಇದನ್ನು ರಾಜ್ಯ ಸರಕಾರದೊಂದಿದೆ ಯಾವುದೇ ರೀತಿಯ ಚರ್ಚೆಯನ್ನು ಮಾಡದೆ ಜಾರಿಗೆ ತರಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿದರು . ಅವರು ಮನಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಕೇಂದ್ರ ಸರಕಾರದ ಅನೇಕ ಯೋಜನೆಗಳಿಗೆ ಗಾಂಧೀಜಿಯವರ ಕನ್ನಡಕ…

Read More

ದ್ವೇಷ ಭಾಷಣ ಮಸೂದೆಯಿಂದ ರಾಜ್ಯದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಧಕ್ಕೆ : ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ

ಮಂಗಳೂರು:ರಾಜ್ಯದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಮತ್ತುರಾಜ್ಯದ ಜನರನ್ನು ಭಯಗೊಸಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆ ತರಲು ಉದ್ದೇಶಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಆರೋಪಿಸಿದ್ದಾರೆ.ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ದ್ವೇಷ ಭಾಷಣ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ತರುತ್ತದೆ , ಈ ಮಸೂದೆಯನ್ನು ಸೂಕ್ತ ಚಿಂತನೆ, ಸಮಾಲೋಚನೆ ಹಾಗೂ ತಜ್ಞರ ಸಲಹೆ ಇಲ್ಲದೆ, ಏಕಪಕ್ಷೀಯವಾಗಿ ರೂಪಿಸಿ ಚರ್ಚೆಗಳನ್ನು ನಡೆಸದೆ…

Read More

ಮಂಗಳೂರು ಮಿನಿ ಬಾಂಗ್ಲಾ ಆಗುವ ಮೊದಲು ಎಚ್ಚೆತ್ತುಕೊಳ್ಳಿ ಎಂದು ಪ್ರಚೋದನಕಾರಿ ವಾಟ್ಸಾಪ್‌ ಪೋಸ್ಟ್ ಮಾಡಿದ ಇಬ್ಬರ ವಿರುದ್ಧ ಎಫ್‌ಐಆರ್

ಮಂಗಳೂರು ಮಿನಿ ಬಾಂಗ್ಲಾ ಆಗುವ ಮೊದಲು ಎಚ್ಚೆತ್ತುಕೊಳ್ಳಿ ಎಂದು ಪ್ರಚೋದನಕಾರಿ ವಾಟ್ಸಾಪ್‌ ಪೋಸ್ಟ್ ಮಾಡಿದ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಮಂಗಳೂರು ಮಿನಿ ಬಾಂಗ್ಲಾ ಆಗುವ ಮೊದಲು ಎಚ್ಛೆತ್ತುಕೊಳ್ಳಿ ಹಿಂದುಗಳೇ ಎಂದು ವ್ಯಕ್ತಿಯ ವಾಟ್ಸಾಪ್‌ ಪೋಸ್ಟ್ ಪೋಸ್ಟ್ ವೈರಲ್ ಆಗಿದ್ದು ಇದೀಗ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಂಗಳೂರಿನ ರಾವ್ ಅಂಡ್ ರಾವ್ ಸರ್ಕಲ್ ರಿಕ್ಷಾ ಸ್ಟಾಂಡ್ ಹಿಂದೆ ಬಂಗಾಳಿ ಕ್ಯಾಂಟೀನ್ ಎಂದು ಬೋರ್ಡ್ ಹಾಕಿ ಅದರ ಅಕ್ಕ ಪಕ್ಕ ಕೆಲವು ಅನಧಿಕೃತ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತ…

Read More

ಅತ್ತಾವರ ಅರಸು ಮುಂಡಂತಾಯ ದೈವಸ್ಥಾನದಲ್ಲಿ ₹21 ಲಕ್ಷ ವೆಚ್ಚದ ಇಂಟರ್ಲಾಕ್ ಕಾಮಗಾರಿಗೆ ಗುದ್ದಲಿ ಪೂಜೆ

ಪವಿತ್ರ ಕಾರ್ಣಿಕ ಕ್ಷೇತ್ರ ಅತ್ತಾವರ ಅರಸು ಮುಂಡಂತಾಯ ದೈವಸ್ಥಾನದಲ್ಲಿ ಮಂಗಳೂರಿನ ನೆಚ್ಚಿನ ಶಾಸಕರಾದ ವೇದ ವ್ಯಾಸ ಕಾಮತ್ ಅವರ ಶಾಸಕರ ಅನುದಾನದಲ್ಲಿ 21 ಲಕ್ಷ ವೆಚ್ಚದಲ್ಲಿ ನೂತನವಾಗಿ ಇಂಟರ್ಲಾಕ್ ಅಳವಡಿಸುವ ಕಾರ್ಯಕ್ರಮದ ಗುದ್ದಲಿ ಪೂಜೆಯು ಇಂದು ದೈವಸ್ಥಾನದ ವಟಾರದಲ್ಲಿ ನಡೆಯಿತು . ದೈವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರಾದ ವಿದ್ಯಾಧರ ಕೆ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು .ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ವೇದವ್ಯಾಸ್ ಕಾಮತ್, ಮಾಜಿ ಕಾರ್ಪೊರೇಟರ್ ದಿವಾಕರ್ ಪಾಂಡೇಶ್ವರ . ಮೋಹನ್ ಕುಮಾರ್ ,ಗೋಪಾಲಕೃಷ್ಣ ಭಟ್…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕುರಿತು ಸುಳ್ಳು ಸುದ್ದಿಗಳಿಗೆ ಒಕ್ಕೂಟದಿಂದ ಸ್ಪಷ್ಟೀಕರಣ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕುರಿತು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪದಧಿಕಾರಿಗಳು ಸ್ಪಷ್ಟಿಕರಣ ನೀಡಿದ್ದಾರೆ.ದಿನಾಂಕ 12-01-2026 ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.)ದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಪ್ರಧಾನ ಕಛೇರಿಯಲ್ಲಿ ಪದಾಧಿಕಾರಿಗಳ ಸಭೆ ಜರಗಿಸಲಾಯಿತು.ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಮತ್ತು ಲೆಕ್ಕಪತ್ರಗಳ ನಿರ್ವಹಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದರ ಬಗ್ಗೆ ಖಂಡಿಸಲಾಯಿತು. ಪ್ರಧಾನ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿಯವರು…

Read More

ದೇವಸ್ಥಾನಕ್ಕೆ ಹೊರಟ ಬಾಲಕನ ಅಸಹಜ ಸಾವು: ತಲೆಗೆ ಮೂರು ಗಂಭೀರ ಗಾಯಗಳು, ಪ್ರಕರಣವನ್ನು ಕೊಲೆ ಎಂದು ದಾಖಲಿಸಿ ತನಿಖೆ

ಮಂಗಳೂರು : ಬೆಳ್ತಂಗಡಿ ಸಮೀಪ ದೇವಸ್ಥಾನಕ್ಕೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ.ಈ ವೇಳೆ ಬಾಲಕನ ತಲೆಗೆ ಮೂರು ಬಲವಾದ ಪೆಟ್ಟು ಬಿದ್ದಿರುವ ಗುರುತು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಸಮಗ್ರ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಕುರಿತ ಮಾಹಿತಿಗಳು ಲಭ್ಯವಾಗುತ್ತಿದ್ದು, ಬಾಲಕನ ತಲೆಗೆ ಕತ್ತಿ ಅಥವಾ ಇನ್ಯಾವುದೋ ಆಯುಧದಿಂದ ಬಲವಾದ ಮೂರು ಹೊಡೆತಗಳು ಬಿದ್ದಿವೆ….

Read More

ಮುಸ್ಲಿಂ ಮಹಿಳೆಯರು ಇತಿಹಾಸದಲ್ಲಿ ಅಳಿಸಲಾಗದ ಸಾಧನೆಯನ್ನು ಮಾಡಿದ್ದಾರೆ : ಖ್ಯಾತ ಸಾಹಿತಿ ಡಾ. ಶರೀಫಾ ಕೆ

ಮಂಗಳೂರು:ಮುಸ್ಲಿಂ ಮಹಿಳೆಯರು ಇತಿಹಾಸದಲ್ಲಿ ಹಲವು ಸಾಧನೆಗಳಲ್ಲಿ ರಾಜ್ಯ ದೇಶದಲ್ಲೇ ಅಮೂಲಾಗ್ರವಾದ ಸಾಧನೆಯನ್ನು ಮಾಡಿದ್ದಾರೆ ಎಂದು ಖ್ಯಾತ ಸಾಹಿತಿ ಡಾ. ಶರೀಫಾ ಕೆ. ನಗರದ ಪುರಭವನದಲ್ಲಿ ಇಂದು ಆಯೋಜಿಸಿದ್ದ ಅನುಪಮ ಮಹಿಳಾ ಮಾಸಿಕದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವಿಶೇಷ ಸಂಚಿಕೆಯನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು . ನಮ್ಮ ಕಣ್ಣ ಮುಂದೆಯೇ ಅದೆಷ್ಟೋ ಪತ್ರಿಕೆಗಳು ನೆಲಕಚ್ಚಿರುವುದನ್ನು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರಿಗೆ ಮನೆಯಿಂದ ಹೊರಬರಲು ಅವಕಾಶ ವಿರಳವಾಗಿತ್ತು ಕಾಲಘಟ್ಟದಲ್ಲಿ, ಹಿಜಾಬ್ ಧರಿಸಿದ ಮಹಿಳೆಯ ನೇತೃತ್ವದಲ್ಲಿ ಅನೇಕ ಎಡರು-ತೊಡರುಗಳ…

Read More

ನಗ್ರಿ–ಮಿತ್ತಮಜಲು ₹1.3 ಕೋಟಿ ವೆಚ್ಚದ ಹೊಸ ಕಾಂಕ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತ

ಶ್ರೀ ಶಾರದಾ ಭಜನಾ ಮಂದಿರ ನಗ್ರಿ ಇಲ್ಲಿಂದ ಶ್ರೀ ಮಿತ್ತಮಜಲು ಕ್ಷೇತ್ರದ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು 1.3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೊಸ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸ್ಥಳೀಯರೊಂದಿಗೆ ವೀಕ್ಷಣೆ ನಡೆಸಿದ ಬಳಿಕ ಸಾರ್ವಜನಿಕರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು,ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ರಸ್ತೆ ಸಂಪರ್ಕವೂ ಒಂದಾಗಿದ್ದು, ಗ್ರಾಮದ ಮೂಲೆಮೂಲೆಗಳಿಗೆ ಸುಸಜ್ಜಿತವಾದ ರಸ್ತೆಯ ನಿರ್ಮಾಣ ಮಾಡಿ ಸಂಪರ್ಕ ಕಲ್ಪಿಸಿದರೆ ಗ್ರಾಮದ ಅಭಿವೃದ್ಧಿ…

Read More

ಕರಾವಳಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಶಾಸಕ ಮಂಜುನಾಥ ಭಂಡಾರಿ ಸರ್ಕಾರಕ್ಕೆ ಮನವಿ

ಮಂಗಳೂರು: ಕರ್ನಾಟಕದ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್‌ ಶಾಸಕರಾಗಿರುವ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಪ್ರವಾಸೋದ್ಯಮ ವಲಯವು ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ಸಂಸ್ಕೃತಿಯ ಉತ್ತೇಜನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಇತ್ತೀಚೆಗೆ ಜ.10ರಂದು ನಡೆದ ಕರಾವಳಿ ಪ್ರವಾಸೋದ್ಯಮ…

Read More

ತೆಂಕಕಜೆಕಾರು ಕಲ್ಲುಗಣಿ ಸ್ಫೋಟಕ ಬಳಕೆ ಇಲಾಖೆ ಆದೇಶವನ್ನೇ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಕಪ್ಪು ಕಲ್ಲು ಕ್ವಾರಿ

ಮಂಗಳೂರು: ಜನವಸತಿ ಪ್ರದೇಶದಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲುಗಣಿಗಾರಿಕೆ ವಿರುದ್ಧ ಗ್ರಾಮಸ್ಥರು ರಾಜ್ಯ ಉಚ್ಛನ್ಯಾಯಾಲಯದಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಜ. 7 ರಂದೇ ಬಂಟ್ವಾಳದ ಭೂ ಮತ್ತು ಗಣಿ ಇಲಾಖೆಗೆ ಮುಂದಿನ ತಾಂತ್ರಿಕ ವರದಿಯ ವರೆಗೂ ಕಲ್ಲುಗಣಿಗಾರಿಕೆಯನ್ನು ತಾತ್ಕಾಲಿಕ ನಿಷೇಧ ಇರಿಸುವಂತೆ ಹಿರಿಯ ಭೂವಿಜ್ಞಾನಿ ಆದೇಶ ಹೊರಡಿಸಿದರೂ, ಕಲ್ಲು ಗಣಿಗಾರಿಕೆ ನಡೆಸುವ ಧಣಿಕರು ಕಳೆದ ಒಂದು ವಾರದಿಂದ ಇಲಾಖೆಯ ಆದೇಶವನ್ನೇ ಉಲ್ಲಂಘಿಸಿ ವ್ಯಾಪಕವಾಗಿ ಗಣಿಗಾರಿಕೆಯಲ್ಲಿ ನಿರತರಾಗಿದ್ದಾರೆ. ಇಲಾಖೆಯ ಆದೇಶಕ್ಕೂ ಬೆಲೆಯನ್ನು ನೀಡದ ಕಲ್ಲುಗಣಿ ಧಣಿಗಳ ಹಿಂದೆ ಪ್ರಭಾವಿ…

Read More
error: Content is protected !!