ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ಬಳಿ ₹30 ಲಕ್ಷ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ಬಳಿ ಸುಮಾರು 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ಮುಂದುವರಿದ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಅದರ ಭೂಮಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬೇಡಿಕೆಯಂತೆ ಈ ಕಾಮಗಾರಿಗೆ ಅನುದಾನವನ್ನು ಹೊಂದಿಸಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಮುಗಿದು ಎಲ್ಲರ ಉಪಯೋಗಕ್ಕೆ ಬಳಕೆಯಾದರೆ ಸಂತೋಷವೆಂದರು. ಈ ಸಂದರ್ಭದಲ್ಲಿ ಸ್ಥಳೀಯ ನಿಕಟಪೂರ್ವ ಮ.ನ.ಪಾ ಸದಸ್ಯರಾದ ಶ್ರೀಮತಿ ಶಕೀಲಾ ಕಾವ,…

Read More

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ: ಯುವಕನ ಬಂಧನ

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಯುವಕನನ್ನು ಮಂಗಳೂರಿನ ಕದ್ರಿ ಮಂಗಳೂರು ಪೂರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.ಕೇರಳದ ಎರ್ನಾಕುಂ ಜಿಲ್ಲೆಯ ಮುತೊಲಪುರಂ ನಿವಾಸಿ ಜೂಡ್ ಮಾಥ್ಯೂ (20) ಬಂಧಿತ. ಆತನಿಂದ 5.20 ಗ್ರಾಂ ತೂಕದ MDMA ಮಾದಕ ವಸ್ತು, ಕೃತ್ಯಕ್ಕೆ ಬಳಸಿದ ಬೈಕ್ ಸಮೇತ ಒಟ್ಟು 70,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪದವು ಗ್ರಾಮದ ಕೈಲಾಸ ಕಾಲನಿ ಹತ್ತಿರ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಬಳಿ ಯುವಕನೋರ್ವ…

Read More

ಜನವರಿ 22 ರಂದು ಮಂಗಳೂರಿನಲ್ಲಿ ಉಚಿತ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರ ….!

ಮಂಗಳೂರು:ಉಚಿತ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರವು ಡಾ ಜ್ಯೋತಿ ಕೆ ತಪಾಸಣೆಯಲ್ಲಿ ರೋಟರಿ ಕ್ಲಬ್ ಆಫ್ ಮಂಗಳೂರು ಸೌತ್ ಮತ್ತು ಮೆಡಿಲಾಬ್ ಇಂಡಿಯಾ ಫಾರ್ಮ ಬೆಂಗಳೂರು ಇವರ ಸಹಕಾರದಲ್ಲಿ ಜನವರಿ 22 ರಂದು ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯ ತನಕ ಮಂಗಳೂರಿನ ಕಾರ್ ಸ್ಟ್ರೀಟ್ ಫ್ಲವರ್ ಮಾರ್ಕೆಟ್ ರಸ್ತೆ ಯಲ್ಲಿರುವ ಲಕ್ಷ್ಮೀ ಕ್ಲಿನಿಕ್ ನಲ್ಲಿ ನಡೆಯಲಿದೆ ಎಂದು ಲಕ್ಷ್ಮೀ ಕ್ಲಿನಿಕ್ ನ ತಜ್ಞ ಆಯುರ್ವೇದ ವೈದ್ಯೆಯಾದ ಡಾ ಜ್ಯೋತಿ ಕೆ ತಿಳಿಸಿದರು ….

Read More

ಮಂಗಳೂರು ಕೆಮಿಕಲ್ಸ್ & ಫರ್ಟಿಲೈಜರ್ಸ್ ಲಿಮಿಟೆಡ್ ಹೆಸರನ್ನು ಕೂಡಲೇ ಮರು ಸ್ಥಾಪಿಸಿ : ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ

ಮಂಗಳೂರು ಕೆಮಿಕಲ್ಸ್ & ಫರ್ಟಿಲೈಜರ್ಸ್ ಲಿಮಿಟೆಡ್ ನ ಹೆಸರನ್ನು ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ಎಂದು ಮರುನಾಮಕರಣ ಮಾಡಿ ನಾಮ ಫಲಕವನ್ನು ಹಾಕಲಾಗಿದ್ದುಇದನ್ನು ಕೂಡಲೇ ಹಿಂದಕ್ಕೆ ಪಡೆದು ನಮ್ಮ ಪ್ರದೇಶದ ಅಸ್ಮಿತೆಯ ಹೆಸರಾದ , ಇತಿಹಾಸದ ಹೆಗ್ಗುರುತ್ತಾದ ಮಂಗಳೂರು ಕೆಮಿಕಲ್ಸ್ & ಫರ್ಟಿಲೈಜರ್ಸ್ ಎನ್ನುವ ಹೆಸರನ್ನೇ ಮುಂದುವರೆಸಬೇಕು , ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಜಿಲ್ಲಾಧಿಕಾರಗಳ ಮಧ್ಯಸ್ಥಿಕೆ ಮತ್ತು ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು ಜೊತೆಗೆ ಉಪವಾಸ ಸತ್ಯಾಗ್ರವನ್ನು ಕೈಗೊಳ್ಳಲಾಗುವುದೆಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ತಿಳಿಸಿದರು…

Read More

ಆರ್‌ಎಸ್‌ಎಸ್ ಕಾರ್ಯಕರ್ತನ ಸಾವು, ಕಂಗಾಲಾದ ಕುಟುಂಬ, ಅಸಹಾಯಕ ಮನೆಗೆ ಸಹಾಯಹಸ್ತ ನೀಡಿದ ಕುತ್ತಾರು ಬಿಜೆಪಿ ಮುಖಂಡರು.. !

ಉಳ್ಳಾಲ:ಕಳೆದ 20 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಬೈಠಕ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಸೌಖ್ಯಕ್ಕೀಡಾಗಿ ಸಾವನ್ನಪ್ಪಿದ ಜನಸಂಘ, ಬಿಜೆಪಿ ಹಾಗೂ ಆರ್ ಎಸ್ ಎಸ್ ಸಕ್ರಿಯ ಸದಸ್ಯರಾಗಿದ್ದ ಕುತ್ತಾರುಗುತ್ತು ಸಮೀಪದ ನಿವಾಸಿ ಮಾಧವ ಆಚಾರ್ಯ ಕುಟುಂಬ ಇಂದು ಆರ್ಥಿಕ ಸ್ಥಿತಿ ಹಾಗೂ ಸಹೋದರನ ಆರೋಗ್ಯ ಸ್ಥಿತಿಯಿಂದ ಕಂಗಾಲಾಗಿದ್ದು, ಮಾಜಿ ಶಾಸಕ ಜಯರಾಮ ಶೆಟ್ಟಿ ಸೇರಿದಂತೆ ಕುತ್ತಾರು ಬಿಜೆಪಿ ಮುಖಂಡರು ಮನೆಗೆ ಭೇಟಿ ನೀಡಿ ರೂ.2 ಲಕ್ಷದ ಚೆಕ್ ಅನ್ನು ಸಹಾಯಹಸ್ತವಾಗಿ ವಿತರಿಸಿದ್ದಾರೆ. ಮಾಜಿ ಶಾಸಕ ಜಯರಾಮ ಶೆಟ್ಟಿ ಅವರು…

Read More

ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕೂಡಿಬೈಲು ಶ್ರೀ ಮಹಾದೇವಿ ಮಹಮ್ಮಾಯಿ ದೇವಿಯ ಮೂರು ದಿನಗಳ ಜಾತ್ರೋತ್ಸವ ಸಂಪನ್ನ

ಬಂಟ್ವಾಳ:ಕೂಡಿಬೈಲು ಶ್ರೀ ಮಹಾದೇವಿ ಮಹಮ್ಮಾಯಿ ದೇವಿಯ ಮೂರು ದಿನಗಳ ಜಾತ್ರೋತ್ಸವ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.ದಿವ್ಯ ಸನ್ನಿಧಿಯಲ್ಲಿ ದೇವಪ್ರಾರ್ಥನೆ ಹಾಗೂ ಮಹಾಗಣಪತಿ ಹವನದೊಂದಿಗೆ ಪ್ರಾರಂಭಗೊಂಡು, ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿದ ವಾರ್ಷಿಕ ಜಾತ್ರೋತ್ಸವದಲ್ಲಿ ರಕ್ತೇಶ್ವರಿ ದೈವದ ನೇಮೋತ್ಸವ, ಪಾವನ ವಿಧಿಗಳೊಂದಿಗೆ ಸಂಪನ್ನಗೊಂಡಿತು. ಶ್ರೀ ದೇವಿಯ ಸನ್ನಿಧಿಯಲ್ಲಿ ಹೂವಿನ ಪೂಜೆ, ಕುಂಕುಮಾರ್ಚನೆ, ನಿತ್ಯ ಬಲಿ, ಮಹಾರಂಗಪೂಜೆ, ದೀಪಾರಾಧನೆ, ಉತ್ಸವಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಅಗ್ನಿಸೇವೆಯಂತಹ ವಿಧಿವಿಧಾನಗಳು ನೆರವೇರಿದವು.

Read More

ಫೆ.4 ರಿಂದ 10 ರವರೆಗೆ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು  ನೇಮೋತ್ಸವ.

ಮಂಗಳೂರು : ಮುಲ್ಕಿ ತಾಲೂಕಿನ ಸಸಿಹಿತ್ತು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಸಮಾರಂಭ ಫೆಬ್ರವರಿ 4 ರಿಂದ 10 ರ ತನಕ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಿ.ಬಿ ಕರ್ಕೆರ ಹೇಳಿದರು. ಅವರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ರಾತ್ರಿ ಬೆಳಗಾಗುವುದರೊಳಗೆ ಕೈಯಾರೆ ನಿರ್ಮಿಸಿದ ಈ ಕ್ಷೇತ್ರ, ಸಸಿಹಿತ್ತುವಿನ ಕಡಲತಡಿಯ…

Read More

ಕುಂಪಲ–ಬೈಪಾಸ್ ಡಿಮಾರ್ಟ್‌ನಲ್ಲಿ ಉದ್ಯೋಗವಿದೆ ಎಂದು ಸುಳ್ಳು ಜಾಹಿರಾತು: ನೂರಾರು ಮುಗ್ಧರು ಶಾಪಿಂಗ್ ಮಾಲ್ ಎದುರು ಜಮಾವಣೆ

ಮಂಗಳೂರು :ದೇಶದ ಪ್ರಸಿದ್ಧ ಶಾಪಿಂಗ್ ಮಾಲ್ ಡಿಮಾರ್ಟ್ ಸಂಸ್ಥೆಯ ಶಾಖೆಯೊಂದು ಉಳ್ಳಾಲ ತಾಲೂಕಿನ ಕುಂಪಲ- ಬೈಪಾಸ್ ಎಂಬಲ್ಲಿ ನಿರ್ಮಾಣಗೊಳ್ಳುತ್ತಿದೆ. ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಇರೋದಾಗಿ ಯಾರೋ ವಿಘ್ನ ಸಂತೋಷಿಗಳು ಜಾಲತಾಣಗಳಲ್ಲಿ ಜಾಹಿರಾತು ಹರಿಯಬಿಟ್ಟಿದ್ದು, ಉದ್ಯೋಗ ಅರಸಿ ಮಾಲ್ ಕಡೆಗೆ ಧಾವಿಸಿ ಬಂದ ನೂರಾರು ಮುಗ್ಧ ಜನರಿಗೆ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿಯ ಮಾತು ಕೇಳಿ ಶಾಕ್ ಆಗಿದೆ.ಸಾಮಾಜಿಕ ಜಾಲತಾಣವನ್ನ ಎಷ್ಟರ ಮಟ್ಟಿಗೆ ದುರುಪಯೋಗ ಪಡಿಸಬಹುದೆಂಬುದಕ್ಕೆ ಕುಂಪಲ -ಬೈಪಾಸಿನ ನೂತನ ಡಿಮಾರ್ಟ್ ನಲ್ಲಿ ಉದ್ಯೋಗಾವಕಾಶದ ಜಾಹಿರಾತು ಹರಿಯಬಿಟ್ಟ ಬೆಳವಣಿಗೆಯೇ…

Read More

ಮೂಡುಬಿದಿರೆ ಪುತ್ತಿಗೆಯಲ್ಲಿ 30 ಅಡಿ ಬಾವಿಗೆ ಬಿದ್ದು ಸುರಂಗದಲ್ಲಿ ಸಿಲುಕಿದ್ದ ವ್ಯಕ್ತಿ: ಅಗ್ನಿಶಾಮಕ ದಳದ ಸಾಹಸಮಯ ರಕ್ಷಣೆ

ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾಮದ ಬಂಗ್ಲೆ ಎಂಬಲ್ಲಿ ಬುಧವಾ ರಾತ್ರಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸುರಂಗದೊಳಗೆ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ್ದಾರೆ.ಪುತ್ತಿಗೆಯ ಜಾಣಪ್ಪ ಗೌಡರ ಪುತ್ರ ರಾಧಾಕೃಷ್ಣ (38 ವರ್ಷ) ಎಂಬವರು ಬುಧವಾರ ರಾತ್ರಿ ಅಕಸ್ಮಿಕವಾಗಿ ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಅವರು ಬಾವಿಯ ಒಳಗಿದ್ದ ಸುಮಾರು 20 ಅಡಿ ಆಳದ ಸುರಂಗದೊಳಗೆ ಸಿಲುಕಿಕೊಂಡಿದ್ದರು. ಇದು ರಕ್ಷಣಾ ಕಾರ್ಯಕ್ಕೆ ದೊಡ್ಡ ಸವಾಲಾಗಿತ್ತು. ರಕ್ಷಣೆ ಕಾರ್ಯಾಚರಣೆಗೆ ಕಾರ್ಕಳ…

Read More

ಜನವರಿ 18 ರಂದು ಮಂಗಳೂರಿನಲ್ಲಿ ‘ಲಯ ಲಾವಣ್ಯ’ ಸಂಗೀತೋತ್ಸವ… !

ಮಂಗಳೂರು:ಕರಾವಳಿ ಭಾಗದ ಸಂಗೀತಾಸಕ್ತರಿಗೆ ನಾವಿನ್ಯ ರೀತಿಯ ಸಂಗೀತ ಕಾರ್ಯಕ್ರಮವನ್ನು ನೀಡುತ್ತಿರುವ ಸಂಗೀತ ಭಾರತೀ ಪ್ರತಿಷ್ಠಾನವು ಮಂಗಳೂರಿನ ಪುರಭವನದಲ್ಲಿ ಜನವರಿ 18ರಂದು ಭಾನುವಾರ ಸಂಜೆ 6.00ರಿಂದ ‘ಲಯ ಲಾವಣ್ಯ’ ಎಂಬ ಭಾರತೀಯ ತಾಳವಾದ್ಯಗಳ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಟ್ರಸ್ಟಿಅಂಕುಶ್ ಎನ್ ನಾಯಕ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ‘ಕರ್ಣಾಟಕ ಬ್ಯಾಂಕ್‌ನ’ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ದೇಶನವನ್ನು ಖ್ಯಾತ ಮೃದಂಗ ವಿದ್ವಾಂಸರಾದ ಆನೂರು…

Read More
error: Content is protected !!