ಕೋಕ್ ಸಲ್ಪರ್ ಘಟಕ ವಿರುದ್ಧ ಹೋರಾಟ ತೀವ್ರ
ಹಸಿರು ವಲಯ ನಿರ್ಮಾಣ, ಪುನರ್ವಸತಿಗೆ ಆಗ್ರಹಿಸಿ 6ನೇ ದಿನಕ್ಕೂ ಧರಣಿ ಮುಂದುವರಿಕೆ ಮಂಗಳೂರು: ಎಂಆರ್‌ಪಿಎಲ್‌ನ ಕೋಕ್ ಸಲ್ಪರ್ ಘಟಕದಿಂದ ಉಂಟಾಗುತ್ತಿರುವ ಗಂಭೀರ ಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜೋಕಟ್ಟೆ, ಕೆಂಜಾರು ಹಾಗೂ ಕಳವಾರು ಭಾಗದ ಗ್ರಾಮಸ್ಥರು ನಡೆಸುತ್ತಿರುವ ಹಗಲು-ರಾತ್ರಿ ಧರಣಿ ಆರನೇ ದಿನಕ್ಕೂ ಮುಂದುವರಿದಿದೆ. ಕೋಕ್ ಸಲ್ಪರ್ ಘಟಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕ ಹೋರಾಟ ಸಮಿತಿ, ಜನವಸತಿ ಪ್ರದೇಶದಲ್ಲಿ ತಕ್ಷಣ ಹಸಿರು ವಲಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಸಂತ್ರಸ್ತರಿಗೆ ಪುನರ್ವಸತಿ…
